ಕರ್ನಾಟಕ

karnataka

ETV Bharat / bharat

ಹಣಕಾಸು ಮಸೂದೆ ಎಂದರೇನು?.. ಇಲ್ಲಿದೆ ಇಂಟ್ರೆಸ್ಟಿಂಗ್​​​​ ಮಾಹಿತಿ! - ಸಂವಿಧಾನದ 110ನೇ ವಿಧಿಯಲ್ಲಿ ಈ ಹಣಕಾಸು ವಿಧೇಯಕದ ಬಗ್ಗೆ ಉಲ್ಲೇಖ ಇದೆ

ಸಂವಿಧಾನದ 110ನೇ ವಿಧಿಯಲ್ಲಿ ಈ ಹಣಕಾಸು ವಿಧೇಯಕದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ವಿಧಿಯ ಅನ್ವಯ ಹಣಕಾಸು ವಿಧೇಯಕ ಮಸೂದೆಯಾಗಿ ಹೊರಹೊಮ್ಮಲು ಕೆಲವು ಷರತ್ತುಗಳನ್ನು ವಿಧಿಸುತ್ತದೆ.

http://10.10.50.80:6060//finalout3/odisha-nle/thumbnail/29-January-2022/14312731_878_14312731_1643443621410.png
http://10.10.50.80:6060//finalout3/odisha-nle/thumbnail/29-January-2022/14312731_878_14312731_1643443621410.png

By

Published : Jan 31, 2022, 10:33 AM IST

ನವದೆಹಲಿ:ಭಾರತೀಯ ಸಂವಿಧಾನದ 112 ನೇ ವಿಧಿಯ ಪ್ರಕಾರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಮತ್ತು ಮುಂದಿನ ವರ್ಷದಲ್ಲಿ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಅದರ ಅಂದಾಜು ಸ್ವೀಕೃತಿ ಮತ್ತು ವೆಚ್ಚಗಳ ಒಟ್ಟಾರೆ ಲೆಕ್ಕವನ್ನು ಸಂಸತ್ತಿಗೆ ಪ್ರಸ್ತುತಪಡಿಸುದೇ ಆಗಿರುತ್ತದೆ.

ಇದನ್ನೇ ನಾವು ಒಟ್ಟಾರೆ ಆಗಿ ಖರ್ಚು ವೆಚ್ಚಗಳ ವಾರ್ಷಿಕ ಲೆಕ್ಕ( ಆಯವ್ಯಯ) ಎಂದು ಕರೆಯುತ್ತೇವೆ. ಭಾರತೀಯ ಸಂವಿಧಾನದ 110 ನೇ ವಿಧಿಯ ಅನ್ವಯ ವಾರ್ಷಿಕ ಹಣಕಾಸು ಹೇಳಿಕೆಯಲ್ಲಿ ಒಳಗೊಂಡಿರುವ ತೆರಿಗೆ ಪ್ರಸ್ತಾವನೆಗಳನ್ನು ಜಾರಿಗೆ ತರಲು ಸರ್ಕಾರವು ಸಂಸತ್​​ನಲ್ಲಿ ಹಣಕಾಸು ಮಸೂದೆಯನ್ನು ಪ್ರಸ್ತುತಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತದೆ.

ಸಂಸತ್ತಿನ ಮುಂದೆ ವಾರ್ಷಿಕ ಹಣಕಾಸು ಹೇಳಿಕೆ(ಬಜೆಟ್​ ಬಿಲ್​) ಯನ್ನು ಪ್ರಸ್ತುತಪಡಿಸುವ ಸಮಯದಲ್ಲಿ, ಸಂವಿಧಾನದ 110 (1) (ಎ) ರಿಂದ )ಎಫ್​​) ವಿಧಿಯ ಅನ್ವಯ ಯಾವುದೇ ತೆರಿಗೆಯನ್ನು ಹೇರಿಕೆ, ರದ್ದತಿ, ಉಪಶಮನ ಅಥವಾ ನಿಯಂತ್ರಣ ಮತ್ತು ಹಣದ ಪಾವತಿ ಅಥವಾ ಹಿಂತೆಗೆದುಕೊಳ್ಳುವುದು ಮುಂತಾದ ವಿಷಯಗಳನ್ನು ಮಾತ್ರ ನಿರ್ವಹಿಸುವ ಮಸೂದೆಯನ್ನು ಹಣಕಾಸು ಮಸೂದೆ ಎಂದು ಪರಿಗಣಿಸಲಾಗುತ್ತದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಜೆಟ್​​​ನಲ್ಲಿ ಏನೇನು ಅಂಶಗಳಿರುತ್ತವೆ:ಅದು ಭಾರತದ ಹಿಂದಿನ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್‌ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ.

ಬಜೆಟ್‌ ವಿಧಗಳು: ಮುಂಗಡಪತ್ರದಲ್ಲಿ ಮೂರು ವಿಧಗಳಿವೆ

ಸಮತೋಲನ ಮುಂಗಡ ಪತ್ರ:ಇದರಲ್ಲಿ ಸರಕಾರದ ನಿರೀಕ್ಷಿತ ಆದಾಯವು ನಿರೀಕ್ಷಿತ ವೆಚ್ಚಕ್ಕೆ ಸಮವಾಗಿರುತ್ತದೆ.

ಮಿಗತೆ (ಉಳಿತಾಯ)ಮುಂಗಡ ಪತ್ರ: ಇದರಲ್ಲಿ ಸರಕಾರದ ಅಂದಾಜು ಆದಾಯವು ಅಂದಾಜು ವೆಚ್ಚಕ್ಕಿಂತ ಅಧಿಕವಾಗಿರುತ್ತದೆ.

ಕೊರತೆ ಮುಂಗಡ ಪತ್ರ:ಇದರಲ್ಲಿ ಸರಕಾರದ ಅಂದಾಜು (ಸಮಗ್ರ ) ಆದಾಯಕ್ಕಿಂತ ಅಂದಾಜು (ಸಮಗ್ರ ) ವೆಚ್ಚವು ಅಧಿಕವಾಗಿರುತ್ತದೆ. ಆಧುನಿಕ ಆರ್ಥಿಕತೆಗಳೆಲ್ಲವೂ ಸಹ ಸುಖೀ ರಾಜ್ಯ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದರಿಂದ ಕೊರತೆ ಮುಂಗಡ ಪತ್ರವು ಜನಪ್ರಿಯವಾಗಿದೆ.

ಇದನ್ನು ಓದಿ:ಇಂದಿನಿಂದ ಕೇಂದ್ರ ಬಜೆಟ್​ ಅಧಿವೇಶನ.. ಸಂಸತ್​ನಲ್ಲಿ ಪೆಗಾಸಸ್​ ರಿಂಗಣ ಸಾಧ್ಯತೆ!

ABOUT THE AUTHOR

...view details