ಕರ್ನಾಟಕ

karnataka

ETV Bharat / bharat

ಕಲ್ಯಾಣ್ ಸಿಂಗ್ ಮತ್ತು ಬಿಜೆಪಿ ನಡುವಿನ ಒಡನಾಟ, ಬಡಿದಾಟ ಎಂಥದ್ದು..? - Kalyan singh dies

2012ರ ಚುನಾವಣೆಯಲ್ಲಿ ತಮ್ಮ ಬಲಾಬಲಗಳನ್ನು ಅರಿತುಕೊಂಡ ಬಿಜೆಪಿ ಮತ್ತು ಕಲ್ಯಾಣ್ ಸಿಂಗ್ ಅವರ ಪಕ್ಷಗಳು ಮುಖಭಂಗ ಅನುಭವಿಸಿದ್ದವು. 2013ರಲ್ಲಿ ಕಲ್ಯಾಣ್ ಸಿಂಗ್ ಬಿಜೆಪಿಗೆ ಮರುಸೇರ್ಪಡೆಯಾಗುವುದನ್ನು ಘೋಷಿಸಿದ್ದರು.

What happened when Kalyan Singh parted ways from BJP?
ಕಲ್ಯಾಣ್ ಸಿಂಗ್ ಮತ್ತು ಬಿಜೆಪಿ ನಡುವಿನ ಒಡನಾಟ, ಬಡಿದಾಟ ಎಂಥದ್ದು..?

By

Published : Aug 22, 2021, 12:33 AM IST

ಲಖನೌ, ಉತ್ತರ ಪ್ರದೇಶ :ಭಾರತೀಯ ಜನತಾ ಪಾರ್ಟಿಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಬಿಜೆಪಿ ತೊರೆಯಬೇಕಾಗಿ ಬಂತು.

2002ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 88 ಸ್ಥಾನಗಳನ್ನು ಪಡೆದರೂ ಕೂಡಾ ಬಿಜೆಪಿ ಭಾರಿ ನಷ್ಟ ಅನುಭವಿಸಬೇಕಾಯಿತು. ಈ ಚುನಾವಣೆಯಲ್ಲಿ ಎಸ್‌ಪಿ 143, ಬಿಎಸ್‌ಪಿ 98, ಕಾಂಗ್ರೆಸ್ 25, ಆರ್‌ಎಲ್‌ಡಿ 14 ಸ್ಥಾನಗಳನ್ನು ಗೆದ್ದವು. ಕಲ್ಯಾಣ್ ಸಿಂಗ್ ಅವರ ಪಕ್ಷವು ಕೇವಲ ನಾಲ್ಕು ಸ್ಥಾನಗಳನ್ನು ಪಡೆಯಿತು.

ಇದಾದ ಸುಮಾರು ವರ್ಷಗಳ ನಂತರ ಎರಡೂ ಪಕ್ಷಗಳ ನಡುವೆ ಸಾಂಪ್ರದಾಯಿಕ ಸ್ಪರ್ಧೆ ಮುಂದುವರೆದಿತ್ತು. 2012ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಕಲ್ಯಾಣ್ ಸಿಂಗ್ ಅವರು ಜನ ಕ್ರಾಂತಿ ಪಕ್ಷದಿಂದ ಸ್ಪರ್ಧಿಸಿದ್ದರು. ಬಿಜೆಪಿಗೆ ಬೇರೆ ಪಕ್ಷಗಳಿಗಿಂತ ಜನಕ್ರಾಂತಿ ಪಕ್ಷವು ಅತ್ಯಂತ ಪ್ರಬಲ ಎದುರಾಳಿಯಾಗಿತ್ತು. ಕಲ್ಯಾಣ್ ಸಿಂಗ್ ಅವರ ಜನ ಕ್ರಾಂತಿ ಪಕ್ಷ 200 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ವಿರುದ್ಧ ಪ್ರಬಲವಾದ ಹೋರಾಟವನ್ನು ಆರಂಭಿಸಿತ್ತು.

ಚುನಾವಣೆಯ ಫಲಿತಾಂಶ ಬಂದಾಗ ಬಿಜೆಪಿಗೆ ಮುಖಭಂಗವಾಗಿತ್ತು. ಏಕೆಂದರೆ ಬಿಜೆಪಿ 1991ರಿಂದ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಸೀಟುಗಳನ್ನು ಪಡೆದುಕೊಂಡಿತ್ತು. ಬಿಜೆಪಿ ಕಡಿಮೆ ಕ್ಷೇತ್ರಗಳನ್ನು ಗೆಲ್ಲಲು ಕಲ್ಯಾಣ್ ಸಿಂಗ್ ಅವರ ಜನಕ್ರಾಂತಿ ಪಾರ್ಟಿ ಬಹುದೊಡ್ಡ ಕಾರಣ ಎಂದು ಗುರ್ತಿಸಲಾಯಿತು.

ಯಾವುದೇ ಕ್ಷೇತ್ರಗಳನ್ನು ಗೆಲ್ಲಲಾಗದ ಜನಕ್ರಾಂತಿ ಪಕ್ಷವೂ ವಾಸ್ತವವನ್ನು ಅರ್ಥ ಮಾಡಿಕೊಂಡಿತ್ತು. ಬಿಜೆಪಿ ಮತ್ತು ಜನಕ್ರಾಂತಿ ಪಕ್ಷಗಳನ್ನು ತಮ್ಮ ಬಲಾಬಲಗಳನ್ನು ಅರಿತುಕೊಂಡವು. 2013ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಮರಳುವುದಾಗಿ ಕಲ್ಯಾಣ್ ಸಿಂಗ್ ಘೋಷಣೆ ಮಾಡಿದ್ದರು. ಇದು ಉತ್ತರ ಪ್ರದೇಶದಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚಿಸಲು ಕಾರಣವಾಯಿತು. ಇದರ ಜೊತೆಗೆ ಕಲ್ಯಾಣ್ ಸಿಂಗ್ ಮತ್ತೆ ಬಿಜೆಪಿ ಸೇರ್ಪಡೆ, ಪಕ್ಷದ ಮೇಲೆ ಹಿಡಿತ ಕೆಲವು ನಾಯಕರಿಗೆ ಅಪಥ್ಯವಾಗಿತ್ತು. ಅವರು ಮತ್ತೊಮ್ಮ ಬಿಜೆಪಿ ತೊರೆದರು.

2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜನಕ್ರಾಂತಿ ಪಕ್ಷ ಬಿಜೆಪಿ ಮಿತ್ರಕೂಟದೊಂದಿಗೆ ಸೇರ್ಪಡೆಯಾಗಿತ್ತು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಅಪ್ನಾ ದಳ ಯುಪಿಯ 80 ಲೋಕಸಭಾ ಸ್ಥಾನಗಳಲ್ಲಿ 73ರಲ್ಲಿ ಗೆದ್ದಿದ್ದವು. ಬಿಜೆಪಿ 71 ಸ್ಥಾನಗಳನ್ನು ಗೆದ್ದರೆ, ಅಪ್ನಾದಳ 2 ಸ್ಥಾನಗಳಲ್ಲಿ ಜಯಗಳಿಸಿತ್ತು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರ ಪಡೆಯಿತು.

ರಾಮ ಮಂದಿರ ಚಳವಳಿಯು ಕಲ್ಯಾಣ್ ಸಿಂಗ್ ಅವರನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡಿತ್ತು. ಇದರ ನಾಯಕರು ಕಲ್ಯಾಣ್ ಸಿಂಗ್ ಅವರಿಗಿಂತ ಪ್ರಬಲವಾಗಿರಲಿಲ್ಲ ಎಂದು ರಾಜಕೀಯ ವಿಶ್ಲೇಷಕ ವಿಜಯ್ ಶಂಕರ್ ಪಂಕಜ್ ಅಭಿಪ್ರಾಯಪಟ್ಟಿದ್ದಾರೆ. ಕಲ್ಯಾಣ್ ಲೋಧ್ ಸಮುದಾಯದವರಾಗಿದ್ದು, ಈ ಸಮುದಾಯದ ಜನರು ಕಲ್ಯಾಣ್ ಅವರನ್ನು ಅದ್ವಿತೀಯ ನಾಯಕರೆಂದು ಪರಿಗಣಿಸಿದ್ದಾರೆ.

ABOUT THE AUTHOR

...view details