ನವದೆಹಲಿ:ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಕೊಡಗಿನಲ್ಲಿ ಹುಲಿಯೊಂದು ನೀರಿನ ಟಬ್ನಲ್ಲಿ ಕಾಲಕಳೆದ ವಿಡಿಯೋವೊಂದನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದ್ರೆ ಈ ಪೋಸ್ಟ್ ಕಂಡು ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ರೀಟ್ವೀಟ್ ಮಾಡಿ, ತಾವು ದಕ್ಷಿಣ ಭಾರತದಲ್ಲಿ ಕಳೆದ ಸುಂದರ ದಿನಗಳನ್ನು ನೆನಪಿಸಿಕೊಂಡರು.
ಜೈರಾಮ್ ರಮೇಶ್ ಈ ವಿಡಿಯೋವನ್ನು ವಾಟ್ಸ್ಆ್ಯಪ್ನಲ್ಲಿ ತಮ್ಮ ಮಿತ್ರರೊಬ್ಬರಿಂದ ಸ್ವೀಕರಿಸಿದ್ದರು. ಯಾರದೋ ಮನೆ ಹಿತ್ತಲಿನಲ್ಲಿ ನೀರು ತುಂಬಿದ್ದ ಟಬ್ ಒಂದರಲ್ಲಿ ದೊಡ್ಡ ಹುಲಿಯೊಂದು ಟಬ್ ಸುತ್ತಲೂ ತಿರುಗಿ ಕೊನೆಗೆ ಆ ಟಬ್ಗೆ ಇಳಿದು ಕೆಲ ಕಾಲ ಇದ್ದು ಸಂತೋಷಪಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
'ಏನು ಅಸಂಭವನೀಯ ಘಟನೆ' ಎಂದು ರಮೇಶ್ ತಮ್ಮ ಟ್ವೀಟರ್ನಲ್ಲಿ ಬರೆದು ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೂರು ದಿನಗಳ ನಂತರ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು, ರಿಟ್ವೀಟ್ ಮಾಡಿ 'ಭವ್ಯವಾದ' ವಿಡಿಯೋ ಕಂಡುಬಂದಿದೆ ಎಂದಿದ್ದಾರೆ.