ಪ್ರಯಾಗರಾಜ್(ಉತ್ತರಪ್ರದೇಶ):ಸಾವಿನ ನಂತರ ದೇಹದಾನ ಮಾಡುವುದು ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಯಲ್ಲ. ಎಲ್ಲ ಧರ್ಮಗಳು ಮೃತ ದೇಹಗಳನ್ನು ಸುಡುವ ತಮ್ಮದೇ ಆದ ವಿಧಾನಗಳನ್ನು ಹೊಂದಿವೆ. ಆದರೆ ಜಾಗೃತಿಯ ನಂತರ ನೇತ್ರದಾನ, ಮರಣಾನಂತರ ದೇಹದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಪಡೆದ ದಾನದ ಶವವನ್ನು ವೈದ್ಯಕೀಯ ವಿದ್ಯಾರ್ಥಿಗಳು ಬಳಸಿಕೊಂಡು ಅಧ್ಯಯನ ಮಾಡುತ್ತಾರೆ.
ಶವಕ್ಕೆ ಕತ್ತರಿ ಹಾಕುವ ಮೊದಲು ಸಂಪ್ರದಾಯದಂತೆ ಅದಕ್ಕೆ ಗೌರವ ಸಲ್ಲಿಸಿ, ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಗುತ್ತದೆ ಎಂಬುದು ವಿಶೇಷ.
ಪ್ರಯಾಗರಾಜ್ನ ಮೋತಿಲಾಲ್ ನೆಹರು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಸ್.ಪಿ.ಸಿಂಗ್ ಈ ಬಗ್ಗ್ಗೆ ಮಾಹಿತಿ ನೀಡಿದ್ದು, ದೇಹದಾನವಾಗಿ 77 ಮೃತದೇಹಗಳನ್ನು ಎಂಎಲ್ಎನ್ ವೈದ್ಯಕೀಯ ಕಾಲೇಜು ಸ್ವೀಕರಿಸಿದೆ. ಒಟ್ಟು 650 ಕ್ಕೂ ಹೆಚ್ಚು ಮಂದಿ ದೇಹದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೊದಲು ದೇಹದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಸಮಾಜದ ಪ್ರಜ್ಞಾವಂತರು ತಮ್ಮ ದೇಹವನ್ನು ಜೀವಂತ ದಾನ ಮಾಡುತ್ತಿದ್ದಾರೆ ಎಂದರು.
ಮೃತದೇಹಕ್ಕೆ ಗೌರವ ಏಕೆ:ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಂಶುಪಾಲರು ಗೌರವ ನೀಡುತ್ತಾರೆ. ಏಕೆಂದರೆ ಮೃತದೇಹದ ಮೂಲಕವೇ ವೈದ್ಯಕೀಯ ವಿದ್ಯಾರ್ಥಿ ದೇಹ ರಚನೆಯ ನೈಜ ಮಾಹಿತಿ ಪಡೆಯುತ್ತಾನೆ. ತಲೆಯಿಂದ ಪಾದದವರೆಗಿನ ರಚನೆಯ ಬಗ್ಗೆ ನಿಜವಾದ ಮಾಹಿತಿಯು ಮಾನವ ದೇಹದೊಳಗೆ ಕಂಡುಬರುತ್ತದೆ. ಈ ಮೃತ ದೇಹಗಳ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ದೇಹದೊಳಗೆ ಅಂಗಾಂಗಗಳು ಎಲ್ಲಿವೆ ಎಂಬುದನ್ನು ತಿಳಿದುಕೊಳ್ಳಬಹುದು.