ಕರ್ನಾಟಕ

karnataka

ETV Bharat / bharat

'ನಿಮಗೆ ಗಾಯವಾಗಿದೆ, ನೋವಿದೆ; ಆದ್ರೆ ಬಿಜೆಪಿ ಕಾರ್ಯಕರ್ತರ ಕುಟುಂಬಗಳ ನೋವಿನ ಅರಿವಿದೆಯೇ' - ಗೃಹ ಸಚಿವ ಅಮಿತ್ ಶಾ

ದೀದಿ ನಿಮ್ಮ ಕಾಲಿಗೆ ಗಾಯವಾದಾಗ ನಿಮಗೆ ನೋವುಂಟಾಯಿತು. ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದರೆ, ಟಿಎಂಸಿ ಗೂಂಡಾಗಳಿಂದ ಕೊಲ್ಲಲ್ಪಟ್ಟ 130 ಬಿಜೆಪಿ ಕಾರ್ಯಕರ್ತರ ತಾಯಂದಿರ ನೋವಿನ ಬಗ್ಗೆ ಏನು? ನೀವು ಎಂದಾದರೂ ಯೋಚಿಸಿದ್ದೀರಾ? ಅವರ ನೋವು ಅನುಭವಿಸುತ್ತೀರಾ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

What about the pain of families of BJP workers killed in TMC  rule, Shah targets Mamata
ಶಾ ಕಿಡಿ

By

Published : Mar 15, 2021, 5:42 PM IST

ರಾಣಿಬಂಧ್​: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ನಡೆದ ಘಟನೆಯಿಂದಾಗಿ ಗಾಯಗೊಂಡು ನೋವಿನಿಂದ ಬಳಲುತ್ತಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಆದರೆ, ತೃಣಮೂಲ ಆಡಳಿತದ ಸಮಯದಲ್ಲಿ ಕೊಲ್ಲಲ್ಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬಗಳ ನೋವನ್ನು ಅವರು ಅನುಭವಿಸಬಹುದೇ ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಬಂಕುರಾ ಜಿಲ್ಲೆಯ ರಾಣಿಬಂಧ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೆಚ್ಚಿನ ಓದಿಗಾಗಿ:ಮಮತಾ ಮೇಲಿನ ಹಲ್ಲೆ ಪ್ರಕರಣ: ವಿಸ್ತೃತ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ

ದೀದಿ ನಿಮ್ಮ ಕಾಲಿಗೆ ಗಾಯವಾದಾಗ ನಿಮಗೆ ನೋವುಂಟಾಯಿತು. ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದರೆ, ಟಿಎಂಸಿ ಗೂಂಡಾಗಳಿಂದ ಕೊಲ್ಲಲ್ಪಟ್ಟ 130 ಬಿಜೆಪಿ ಕಾರ್ಯಕರ್ತರ ತಾಯಂದಿರ ನೋವಿನ ಬಗ್ಗೆ ಏನು? ನೀವು ಎಂದಾದರೂ ಯೋಚಿಸಿದ್ದೀರಾ? ಅವರ ನೋವು ಅನುಭವಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ದೀದಿ ವಿರುದ್ಧ ಶಾ ಕಿಡಿ

ಹೆಚ್ಚಿನ ಓದಿಗಾಗಿ:ನಂದಿಗ್ರಾಮ ಘಟನೆ.. ಯುಟರ್ನ್​ ಹೊಡೆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

ಈ ಜನರ ನೋವನ್ನು ನೀವು ಎಂದಿಗೂ ಅನುಭವಿಸಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅವರು ನಿಮಗೆ ಸೂಕ್ತವಾದ ಉತ್ತರವನ್ನು ನೀಡುತ್ತಾರೆ ಎಂದು ಟಾಂಗ್​ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಮತ ಹಾಕಿದರೆ, ಬುಡಕಟ್ಟು ಜನಾಂಗದವರ ಹಕ್ಕುಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತೇವೆ ಎಂದರು.

ರಾಜ್ಯದ ಪಶ್ಚಿಮ ಭಾಗದಲ್ಲಿರುವ ಬಂಕುರಾ ಜಿಲ್ಲೆಯು ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿದೆ, ಇದು ಯಾವುದೇ ಪಕ್ಷದ ಯಶಸ್ಸಿಗೆ ನಿರ್ಣಾಯಕವಾಗಿದೆ.

ABOUT THE AUTHOR

...view details