ಕೊಲ್ಕತ್ತಾ: ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳನ್ನು ಕಡಿಮೆ ಮಾಡಿ ಇ-ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು ಮಾತ್ರ ಬಳಸಬಹುದಾದ, ಪ್ರತಿ 25 ಕಿ.ಮೀಗೆ ಚಾರ್ಜಿಂಗ್ ಸ್ಟೇಶನ್ ಇರುವ ವಿಶೇಷ ಇಂಟರ್-ಸಿಟಿ ಕಾರಿಡಾರ್‌ಗಳನ್ನು ನಿರ್ಮಿಸಲು ಮುಂದಾಗಿದೆ.
ಈಗಾಗಲೇ ರಾಜ್ಯದಲ್ಲಿ ವಿವಿಧ ಸಾರಿಗೆ ಸೌಲಭ್ಯಗಳಲ್ಲಿ ಅತ್ಯಾಧುನಿಕ ಇ-ವಾಹನಗಳನ್ನು ಪರಿಚಯಿಸಲಾಗಿದೆ ಮತ್ತು 2030 ರ ವೇಳೆಗೆ 10 ಲಕ್ಷ ಬ್ಯಾಟರಿ ಚಾಲಿತ ವಾಹನಗಳ ಗುರಿಯನ್ನು ಹೊಂದಲಾಗಿದೆ.
"ಸರ್ಕಾರ ಯಾವಾಗಲೂ ಮಾಲಿನ್ಯ ಮುಕ್ತ ರಾಜ್ಯವನ್ನು ಬಯಸುತ್ತದೆ. ಹೊಸ ಯೋಜನೆಯು ಶೂನ್ಯ ಹೊರಸೂಸುವಿಕೆ ಸಾರಿಗೆ ವ್ಯವಸ್ಥೆಯ ನಮ್ಮ ಕನಸನ್ನು ನನಸಾಗಿಸುತ್ತದೆ. ಇ-ವಾಹನಗಳು ಪರಿಸರವನ್ನು ಮಾಲಿನ್ಯ ಮುಕ್ತ ಮಾಡುವುದಲ್ಲದೆ, ನಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ನಿರಂತರವಾಗಿ ಹೆಚ್ಚುತ್ತಿರುವ ಇಂಧನ ಬೆಲೆ ಸಮಸ್ಯೆಯನ್ನು ಇದರಿಂದ ಪರಿಹರಿಸಬಹುದು. ಇದು ಭವಿಷ್ಯದ ಸಾರಿಗೆ ಸಾರಿಗೆ ವ್ಯವಸ್ಥೆಯಾಗಿದ್ದು, ಈ ಗುರಿಯನ್ನು ಶೀಘ್ರವಾಗಿ ತಲುಪಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.