ಕರ್ನಾಟಕ

karnataka

ETV Bharat / bharat

ನಂದಿಗ್ರಾಮವನ್ನ ದೀದಿ ಕಳೆದುಕೊಳ್ಳಲಿದ್ದು, ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ: ನಡ್ಡಾ - ಟಿಎಂಸಿ ಮುಖ್ಯಸ್ಥೆ

ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮವನ್ನು ಕಳೆದುಕೊಳ್ಳುತ್ತಿರುವುದಂತೂ ಖಚಿತ ಎಂದು ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ.

Nadda
ನಡ್ಡಾ

By

Published : Apr 3, 2021, 11:13 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತೊಂದು ಸ್ಥಾನವನ್ನು ಹುಡುಕುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನನಗೆ ತಿಳಿದಿದ್ದರೂ ಖಾತರಿ ಪಡಿಸಲಲ್ಲ. ಆದರೆ ದೀದಿ ನಂದಿಗ್ರಾಮವನ್ನು ಕಳೆದುಕೊಳ್ಳುತ್ತಿರುವುದಂತೂ ಖಚಿತ ಎಂದು ನಡ್ಡಾ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಕೊಂದವರನ್ನು ಮೇ 2ರ ಬಳಿಕ ಜೈಲಿಗೆ ಕಳುಹಿಸಲಾಗುತ್ತೆ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಎರಡು ಹಂತಗಳ ಮತದಾನ ನಡೆದಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಿಎಂಸಿ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದ ಸುವೆಂದು ಅಧಿಕಾರಿ ವಿರುದ್ಧವಾಗಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಸ್ಪರ್ಧಿಸುತ್ತಿದ್ದಾರೆ. ನಂದಿಗ್ರಾಮವು ಸುವೆಂದು ಅಧಿಕಾರಿಗೆ ಸ್ವಕ್ಷೇತ್ರವಾಗಿದ್ದು, ಮಮತಾರಿಗೆ ಭಬಾನಿಪುರ ಸ್ವಕ್ಷೇತ್ರವಾಗಿದೆ. ಆದರೂ ಕೂಡ ದೀದಿ ನಂದಿಗ್ರಾಮವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details