ಕರ್ನಾಟಕ

karnataka

ETV Bharat / bharat

ಪ.ಬಂಗಾಳ ವಿಧಾನಸಭೆ ಕದನ: ನಾಳೆ 5ನೇ ಹಂತದ ಚುನಾವಣೆಗೆ ಭರದ ಸಿದ್ಧತೆ

ಪಶ್ಚಿಮ ಬಂಗಾಳ 5ನೇ ಹಂತದ ಚುನಾವಣೆ ನಾಳೆ ನಡೆಯಲಿದ್ದು, ಭರದ ಸಿದ್ಧತೆ ನಡೆದಿದೆ. ಈಗಾಗಲೇ ಸಿಬ್ಬಂದಿ ನಿಗದಿತ ಮತ ಕೇಂದ್ರಕ್ಕೆ ತೆರಳುತ್ತಿದ್ದು, ಒಟ್ಟು 319 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಲಿದೆ.

West Bengal polls: EC to deploy 853 companies of central forces for Phase V
ನಾಳೆ 5ನೇ ಹಂತದ ಚುನಾವಣೆಗೆ ಭರದ ಸಿದ್ಧತೆ

By

Published : Apr 16, 2021, 4:06 PM IST

ಹೈದರಾಬಾದ್​​​:ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ನಾಳೆ 5ನೇ ಹಂತದ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯಕ್ಕೆ ತೆರೆಬಿದ್ದಿದೆ.

ಇದೀಗ 5ನೇ ಹಂತದಲ್ಲಿ ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದ್ದು, ಕೋವಿಡ್​ ನಡುವೆ ಮತದಾನ ಪ್ರಮಾಣ ಕಡಿಮೆಯಾಗುವ ಭೀತಿ ಸಹ ಎದುರಾಗಿದೆ. ಒಟ್ಟು 319 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 57,23,766 ಪುರುಷರು, 56,11,354 ಮಹಿಳೆಯರು ಮತ್ತು ಇತರ ಲಿಂಗಗಳ 224 ಮಂದಿ ಸೇರಿದಂತೆ ಒಟ್ಟು 1,13,35,344 ಮತದಾರರು ಮತ ಚಲಾಯಿಸಲಿದ್ದಾರೆ.

ನಾಳೆ 5ನೇ ಹಂತದ ಚುನಾವಣೆ

6 ಜಿಲ್ಲೆಗಳಲ್ಲಿ ಒಟ್ಟು 15,789 ಮತಕೇಂದ್ರಗಳು ಸಿದ್ದಗೊಂಡಿದ್ದು, ಒಟ್ಟಾರೆ 319 ಅಭ್ಯರ್ಥಿಗಳ ಪೈಕಿ 218 ಪುರುಷ ಹಾಗೂ 38 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 45 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ರೆಡ್​​ ಅಲರ್ಟ್​ ಕ್ಷೇತ್ರ ಎಂದು ಘೋಷಿಸಲಾಗಿದ್ದು, 3 ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಇದರಲ್ಲಿ ಬಿಜೆಪಿಯ 28 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.

ಕಣದಲ್ಲಿರುವ ಕೋಟ್ಯಧಿಪತಿಗಳ ವಿವರ

ಇತ್ತ ಡಾರ್ಜಿಲಿಂಗ್ ಜಿಲ್ಲೆಯ 23 ಅಸೆಂಬ್ಲಿ ಕ್ಷೇತ್ರ ಮತ್ತು ನಾಡಿಯಾ ಜಿಲ್ಲೆಯ 92 ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಸಿಬ್ಬಂದಿ ಮತಯಂತ್ರಗಳ ಸಾಗಿಸುವಲ್ಲಿ ನಿರತರಾಗಿದ್ದಾರೆ. ಅಲ್ಲದೇ ರಾಜ್ಯದ ಇತರ ಕೇಂದ್ರಗಳಿಗೂ ಸಿಬ್ಬಂದಿ ತೆರಳಿದ್ದಾರೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಇನ್ನು ಮತದಾನ ಪ್ರಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಂತೆ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು, ಭದ್ರತಾ ಪಡೆಗಳು ನಿಯೋಜನೆ ಮಾಡಿದೆ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳ ವಿವರ
ಅತೀ ಹೆಚ್ಚು ಕ್ರಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಗಳು
28 ಮಹಿಳೆಯರು ಕಣದಲ್ಲಿ

ABOUT THE AUTHOR

...view details