ಪಶ್ಚಿಮಬಂಗಾಳ:ಅಖಿಲ ಭಾರತ ಮಜ್ಲಿಸ್-ಎ-ಇತೇಹಾದ್-ಉಲ್-ಮುಸ್ಲೀಮೀನ್ (ಎಐಐಎಂಐಎಂ) ಈಗಾಗಲೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳಿಗೆ ಸ್ಪರ್ಧಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಅದರೊಂದಿಗೆ ಮತಗಳ ಧ್ರುವೀಕರಣ ಮತ್ತು ಮುಸ್ಲಿಂ ಅಲ್ಪಸಂಖ್ಯಾತರನ್ನು ವರ್ಗೀಕರಿಸುವ ವಿಷಯ ಹಾಗೂ ರಾಜ್ಯದ ಮತ ಬ್ಯಾಂಕ್ ಮತ್ತೆ ಮುನ್ನೆಲೆಗೆ ಬಂದಿದೆ.
ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಎಂದು ನಿರ್ಣಯಿಸುವುದು ಬಂಗಾಳದ ರಾಜಕೀಯದ ದೀರ್ಘಕಾಲದ ಸಂಪ್ರದಾಯವಾಗಿದೆ. ಮಮತಾ ಬ್ಯಾನರ್ಜಿಯ ಕೆಲ ಪೋಸ್ಟರ್‌ಗಳು ಮತ್ತು ಕಟೌಟ್‌ಗಳನ್ನು ನಮಾಜ್ ಮಾಡುವ ಭಂಗಿಯಲ್ಲಿ ಮುಸ್ಲಿಂ ವಾರ್ಷಿಕ ಹಬ್ಬಗಳು ಮತ್ತು ಆಚರಣೆಗಳ ಸಂದರ್ಭದಲ್ಲಿ ನಿಖರವಾಗಿ ಬಿಡುಗಡೆ ಮಾಡಲಾಗುತ್ತದೆ.
ಈ ರೀತಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಹಬ್ಬದ ಸಂದರ್ಭದಲ್ಲಿ ಓಲೈಸುವುದನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಪ್ರತಿ ಮತದಾನದ ಅವಧಿಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮತಗಳಿಸಲು ವಿವಿಧ ತಂತ್ರಗಳನ್ನು ಟಿಎಂಸಿ ಅನುಸರಿಸಿದೆ.