ವೆಸ್ಟ್ ಸಿಂಗ್‌ಭೂಮ್ (ಜಾರ್ಖಂಡ್ ): ಪೊಲೀಸ್ ಸಿಬ್ಬಂದಿಗೆ ಹಾನಿ ಮಾಡಲು ನಕ್ಸಲೀಯರು ಹುದುಗಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬುಧವಾರ ಬೆಳಗ್ಗೆ ಜಾರ್ಖಂಡ್ನಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಇಚಾಹತು ಪ್ರದೇಶದಲ್ಲಿ ಸ್ಫೋಟಗೊಂಡಿದೆ. ಈ ಸ್ಪೋಟದಿಂದ 52 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಇಚ್ಚಹತುವಿನ ಸ್ಥಳೀಯ ಕೃಷ್ಣಪೂರ್ತಿ ಎಂದು ಗುರುತಿಸಲಾಗಿದೆ. ಅವರ ಪತ್ನಿ ನಂದಿ ಪೂರ್ತಿ (45) ಅವರು ಸ್ಫೋಟದಿಂದ ಗಾಯಗೊಂಡಿದ್ದಾರೆ. ಗೋಯಿಲ್ಕೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಸಿಂಗ್‌ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಆಶುತೋಷ್ ಶೇಖರ್ ಘಟನೆಯನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಇದನ್ನೂ ಓದಿ :ಹುತಾತ್ಮ ಯೋಧನ ತಂದೆ ಬಂಧನ ಪ್ರಕರಣ: ಬಿಹಾರ ಸಿಎಂಗೆ ರಾಜನಾಥ್ ಕರೆ, ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ
ನೆಲದಡಿಯಲ್ಲಿದ್ದ ಐಇಡಿ ಮೇಲೆ ಕಾಲಿಟ್ಟಾಗ ಬಾಂಬ್ ಸ್ಪೋಟ: ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ, ಇಚಾಹತು ಗ್ರಾಮದ ದಂಪತಿಗಳು ಬುಧವಾರ ಬೆಳಗ್ಗೆ ತಮ್ಮ ಹೊಲಗಳಲ್ಲಿ ತೊಗರಿಬೆಳೆಯನ್ನು ವೀಕ್ಷಣೆ ಮಾಡಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದಂಪತಿ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೆಲದಡಿಯಲ್ಲಿ ಅಳವಡಿಸಲಾಗಿದ್ದ ಐಇಡಿ ಮೇಲೆ ಆಕಸ್ಮಾತ್ ಆಗಿ ಕಾಲಿಟ್ಟಿದ್ದಾರೆ. ಆಗ ಬಾಂಬ್ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ.
ಐಇಡಿ ಸ್ಫೋಟದಲ್ಲಿ ಪತಿ-ಪತ್ನಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದ ನಂತರ ಗ್ರಾಮಸ್ಥರ ನೆರವಿನಿಂದ ಅವರನ್ನು ತಕ್ಷಣವೆ ಆಸ್ಪತ್ರೆಗೆ ಕಳುಹಿಸುವ ಸಲುವಾಗಿ ಸ್ಥಳದಿಂದ ಮನೆಗೆ ಕರೆತರಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೃಷ್ಣಮೂರ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಪ್ರಿಂಟಿಂಗ್ ಪ್ರೆಸ್ ಮಾಲೀಕರ ಹತ್ಯೆ ಪ್ರಕರಣ: ಬಂಧನ ಭೀತಿ ಥೈರಾಯಿಡ್ ಮಾತ್ರೆ ಸೇವಿಸಿದ ಶಂಕಿತ ಆರೋಪಿ
ನೆಲೆಯನ್ನು ಸ್ಥಳಾಂತರಿಸಿದ ಮಾವೋವಾದಿಗಳು:ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಮೃತ ಕೃಷ್ಣಪೂರ್ತಿ ಅವರ ಪತ್ನಿ ನಂದಿ ಪೂರ್ತಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾವೋವಾದಿಗಳು ತಮ್ಮ ನೆಲೆಯನ್ನು ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದ ಕಾಡಿನಿಂದ ಅಸ್ಸೋಂ ಮತ್ತು ಇತರ ಈಶಾನ್ಯ ರಾಜ್ಯಗಳ ಬೆಟ್ಟಗಳಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎಗೆ) ಮಾಹಿತಿ ನೀಡಿದ್ದರು.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಕಲ್ಯಾಣಿ ಎಕ್ಸ್‌ಪ್ರೆಸ್‌ವೇ ಪ್ರದೇಶದಲ್ಲಿ ಹಿರಿಯ ಮಾವೋವಾದಿ ನಾಯಕ ಸಾಮ್ರಾಟ್ ಚಕ್ರವರ್ತಿ ಅವರನ್ನು ಎನ್‌ಐಎ ಬಂಧಿಸಿದೆ. ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಎನ್‌ಐಎ ಈ ವಿಷಯವನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ :ದೇಶದೊಳಗೆ ನುಗ್ಗಿದ್ದ ವ್ಯಕ್ತಿ "ಡೇಂಜರಸ್ ಅಲ್ಲ": ಎನ್‌ಐಎಗೆ ಬಂದಿದ್ದು ಸುಳ್ಳು ಇಮೇಲ್, ತನಿಖೆಯಲ್ಲಿ ದೃಢ