ಕೋಲ್ಕತಾ(ಪಶ್ಚಿಮ ಬಂಗಾಳ): ದುರ್ಗಾಪುರದ ಆಂಡಾಲ್ ವಿಮಾನ ನಿಲ್ದಾಣದ ಪಾಲನ್ನು ಶೇ 11 - 26 ರಿಂದ ಮತ್ತು 26-ಶೇ 47ಕ್ಕೆ ಹೆಚ್ಚಿಸಿದ ಕ್ರಮವನ್ನ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶೇಕಡಾ 11ರಿಂದ 26 ಹಾಗೂ 26 ರಿಂದ 47ರ ಪಾಲನ್ನು ಹೆಚ್ಚಿಸಲು ಎಷ್ಟು ಖರ್ಚು ಮಾಡಲಾಗಿದೆ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. ಯಾರಿಂದ ಷೇರುಗಳನ್ನು ಖರೀದಿಸಬೇಕು. ಖರೀದಿ ಯಾವ ದರದಲ್ಲಿ ನಡೆಯಿತು ಹಾಗೂ ಯಾವ ದರದಲ್ಲಿ ಅವರಿಗೆ ಈ ಷೇರುಗಳನ್ನು ನೀಡಲಾಯಿತು? 11-26 ಮತ್ತು 26-47 ಪ್ರತಿಶತದಿಂದ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿದವರು ಯಾರು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದ ವಹಿವಾಟಿನ ಬಗ್ಗೆ ಮತ್ತು ಸಾರ್ವಜನಿಕರ ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತಿದೆ ಎಂಬ ಬಗ್ಗೆ ಫಲಾನುಭವಿಗಳ ಪಟ್ಟಿಯ ವಿವರ ಕೇಳಿದ್ದೇನೆ. ಸರ್ಕಾರದ ಈ ಕ್ರಮವು ರಾಜ್ಯವನ್ನು ಭಾರೀ ಆರ್ಥಿಕ ಹೊರೆಯತ್ತ ತಳ್ಳುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಹಿಂದೆ ಧಂಕರ್ ಅವರು ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಭಯದ ವಾತಾವರಣವಿದೆ ಎಂದು ಅವರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜುಲೈ 2019 ರಲ್ಲಿ ಧಂಖರ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರಿಗೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.