ಅಲಿಪುರ್ದಾರ್ (ಪ.ಬಂಗಾಳ):ಕೊರೊನಾ ಮಹಾಮಾರಿಯಿಂದ ಪಶ್ಚಿಮ ಬಂಗಾಳ ಲಾಕ್‌ಡೌನ್ ಆಗಿದ್ದು, ಇಲ್ಲಿನ ಅಲಿಪುರ್ದುರ್ ಜಿಲ್ಲೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ನಿರ್ಗತಿಕರಿಗೆ ಸ್ವಯಂಸೇವಕ ಸಂಘಟನೆಯೊಂದು ಆಸರೆಯಾಗಿದೆ.
ಪ.ಬಂಗಾಳ: ಲಾಕ್‌ಡೌನ್ ಮಧ್ಯೆ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಕ್ತ ಮಾರುಕಟ್ಟೆ - help to needy amid lockdown
ಸ್ವಯಂಸೇವಕ ಸಂಘಟನೆಯು ಜಿಲ್ಲೆಯ ವಿವಿಧೆಡೆ ಮಾರುಕಟ್ಟೆಯನ್ನು ಪ್ರಾರಂಭಿಸಿ, ಸ್ಥಳೀಯ ನಿರ್ಗತಿರಿಗೆ, ಬಡವರಿಗೆ ಸಹಾಯ ಮಾಡುತ್ತಿದೆ. ಅದರಂತೆ ಇಲ್ಲಿನ ಭತಿಬಾರಿ ಎಂಬಲ್ಲಿ ಗುರುವಾರ ಪ್ರಾರಂಭವಾದ ಮಾರುಕಟ್ಟೆಯು 80 ನಿರ್ಗತಿಕ ಕುಟುಂಬಗಳಿಗೆ ಅಕ್ಕಿ, ಬೇಳೆಕಾಳುಗಳು, ಎಣ್ಣೆ, ಉಪ್ಪು ಮತ್ತು ತರಕಾರಿಗಳನ್ನು ವಿತರಿಸಲಾಯಿತು.
![ಪ.ಬಂಗಾಳ: ಲಾಕ್‌ಡೌನ್ ಮಧ್ಯೆ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಕ್ತ ಮಾರುಕಟ್ಟೆ ಮಾರುಕಟ್ಟೆ](https://etvbharatimages.akamaized.net/etvbharat/prod-images/768-512-11931039-423-11931039-1622196286400.jpg)
ಮಾರುಕಟ್ಟೆ
ಈ ಸ್ವಯಂ ಸೇವಕ ಸಂಘಟನೆಯು ಜಿಲ್ಲೆಯ ವಿವಿಧೆಡೆ ಮಾರುಕಟ್ಟೆಯನ್ನು ಪ್ರಾರಂಭಿಸಿ, ಸ್ಥಳೀಯ ನಿರ್ಗತಿರಿಗೆ, ಬಡವರಿಗೆ ಸಹಾಯ ಮಾಡುತ್ತಿದೆ. ಅದರಂತೆ ಇಲ್ಲಿನ ಭತಿಬಾರಿ ಎಂಬಲ್ಲಿ ಗುರುವಾರ ಪ್ರಾರಂಭವಾದ ಮಾರುಕಟ್ಟೆಯು 80 ನಿರ್ಗತಿಕ ಕುಟುಂಬಗಳಿಗೆ ಅಕ್ಕಿ, ಬೇಳೆ ಕಾಳುಗಳು, ಎಣ್ಣೆ, ಉಪ್ಪು ಮತ್ತು ತರಕಾರಿಗಳನ್ನು ವಿತರಿಸಲಾಯಿತು.
ಅಗತ್ಯ ಇರುವವರಿಗೆ ಸಹಾಯ ಮಾಡಲು ಮುಕ್ತ ಮಾರುಕಟ್ಟೆ
ಸಂಘಟನೆಯ ಸದಸ್ಯ ಸುದೀಪ್ ಸಹಾ ಮಾತನಾಡಿ, ಈ ಗುಂಪು ಕಳೆದ ವರ್ಷದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ವರ್ಷವೂ ಹಲವೆಡೆ ಮಾರುಕಟ್ಟೆ ಹಾಕಿ ನಿರ್ಗತಿಕರಿಗೆ, ಅನಾಥರಿಗೆ, ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.