ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಮತಾ ಬ್ಯಾನರ್ಜಿ ನಾಯಕತ್ವದ ಟಿಎಂಸಿ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ.
ಬಂಗಾಳ: 95 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ, ಬಿಜೆಪಿ ಎಷ್ಟು ಗೊತ್ತೇ? - ಚುನಾವಣಾ ಫಲಿತಾಂಶ ಇಂದು ಲೈವ್
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 95, ಬಿಜೆಪಿ 60 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ದಾಖಲಿಸಿದೆ.
West Bengal
ಇದೀಗ ಬಂದಿರುವ ಮಾಹಿತಿ ಪ್ರಕಾರ, ಟಿಎಂಸಿ 95, ಬಿಜೆಪಿ 60 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ದಾಖಲಿಸಿದೆ. ಮೇಖ್ಲಿಗಂಜ್, ಕೃಷ್ಣನಗರ ಉತ್ತರ, ಟೋಲಿಗಂಗೆ, ನಂದಿಗ್ರಾಮ, ಕಾಂತಿ ಉತ್ತರ, ಮುರ್ಷಿದಾಬಾದ್, ಬರಾಕ್‌ಪೋರ್, ಬಂಕುರಾ ಸೇರಿದಂತೆ ಇತರೆಡೆ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸಿಟಾಲ್ಕುಚಿ, ಕ್ಯಾನಿಂಗ್ ಪುರ್ಬಾ ಸೇರಿದಂತೆ 95 ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.