ಕರ್ನಾಟಕ

karnataka

ETV Bharat / bharat

ದೀದಿ ಚುನಾವಣಾ ರ‍್ಯಾಲಿಗೆ ನಿರ್ಬಂಧ.. ಧರಣಿ ಕುಳಿತ ಟಿಎಂಸಿ ನಾಯಕಿ - ಚುನಾವಣಾ ರ‍್ಯಾಲಿಗೆ ನಿರ್ಬಂಧ ಖಂಡಿಸಿ ಧರಣಿ ಕುಳಿತ ಮಮತಾ ಬ್ಯಾನರ್ಜಿ

ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಸಿಆರ್​ಪಿಎಫ್ ಭದ್ರತಾ ಪಡೆಯ ವಿರುದ್ಧ ಹೇಳಿಕೆ ನೀಡುರುವ ಆರೋಪದ ಮೇಲೆ ಮಮತಾ ಬ್ಯಾನರ್ಜಿ ಅವರ ಪ್ರಚಾರಕ್ಕೆ ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆಯವರೆಗೆ 24 ಗಂಟೆಗಳ ಕಾಲ ನಿಷೇಧ ಹೇರಲಾಗಿದೆ. ಇದನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಧರಣಿ ಆರಂಭಿಸಿದ್ದಾರೆ.

West Bengal CM Mamata sits on dharna to protest EC's decision
ಚುನಾವಣಾ ರ‍್ಯಾಲಿಗೆ ನಿರ್ಬಂಧ ಖಂಡಿಸಿ ಧರಣಿ ಕುಳಿತ ಮಮತಾ ಬ್ಯಾನರ್ಜಿ

By

Published : Apr 13, 2021, 12:34 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಚುನಾವಣಾ ಪ್ರಚಾರದ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿರುವುದನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಧರಣಿ ಆರಂಭಿಸಿದ್ದಾರೆ.

ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಸಿಆರ್​ಪಿಎಫ್ ಭದ್ರತಾ ಪಡೆಯ ವಿರುದ್ಧ ಹೇಳಿಕೆ ನೀಡಿರುವ ಆರೋಪದ ಮೇಲೆ ಮಮತಾ ಬ್ಯಾನರ್ಜಿ ಅವರ ಪ್ರಚಾರಕ್ಕೆ ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆಯವರೆಗೆ 24 ಗಂಟೆಗಳ ಕಾಲ ನಿಷೇಧ ಹೇರಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಈ ನಿರ್ಧಾರ ಖಂಡಿಸಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಇಂದು ಮಧ್ಯಾಹ್ನ 12 ಗಂಟೆಯಿಂದ ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದಾರೆ.

ಮೂರನೇ ಹಂತದ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಹೂಗ್ಲಿ ಜಿಲ್ಲೆ ತಾರಕೇಶ್ವರದಲ್ಲಿ ಮಮತಾ ಬ್ಯಾನರ್ಜಿ ಕೋಮುವಾದಿ ಆಧಾರದ ಮೇಲೆ ಮತಗಳನ್ನ ಬಹಿರಂಗವಾಗಿ ಕೇಳಬೇಕು. ಅಲ್ಪಸಂಖ್ಯಾತ ಮತಗಳನ್ನ ವಿಭಜಿಸಬೇಡಿ ಎಂದು ಹೇಳಿದ್ದರು.

ಇದನ್ನೂ ಓದಿ:24 ಗಂಟೆಗಳ ಕಾಲ ಚುನಾವಣಾ ರ‍್ಯಾಲಿ ನಡೆಸದಂತೆ ದೀದಿಗೆ ನಿರ್ಬಂಧ... ಧರಣಿ ನಡೆಸಲು ಮಮತಾ ನಿರ್ಧಾರ!

"ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಆದ ಕಾರಣ ಅವರ ಪ್ರಚಾರದ ಮೇಲೆ ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆಯ ವರೆಗೆ ನಿಷೇಧ ವಿಧಿಸಲಾಗಿದೆ" ಎಂದು ಚುನಾವಣಾ ಆಯೋಗ ಸೋಮವಾರ ರಾತ್ರಿ ಘೋಷಿಸಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಹಂತದಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತ ಮುಕ್ತಾಯಗೊಂಡಿದ್ದು, 5ನೇ ಹಂತ ಬರುವ ಏಪ್ರಿಲ್​ 17ರಂದು ನಡೆಯಲಿದೆ.

ಇದನ್ನೂ ಓದಿ: ಕೇವಲ ಬಿಜೆಪಿ ಹೇಳಿದ್ದು ಕೇಳಬೇಡಿ: ಚುನಾವಣಾ ಆಯೋಗಕ್ಕೆ 'ಕೈ' ಮುಗಿಯುತ್ತೇನೆಂದ ಮಮತಾ!

ABOUT THE AUTHOR

...view details