ಕೋಲ್ಕತ್ತಾ(ಪಶ್ಚಿಮ ಬಂಗಾಳ): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆ ಪ್ರಯುಕ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಶ್ಯಾಮ್ ಬಜಾರ್‌ನಿಂದ ರೆಡ್ ರೋಡ್‌ಗೆ ಜಾಥಾ ನಡೆಸಿದ್ರು.
ಸುಭಾಷ್ ಚಂದ್ರ ಬೋಸ್ರ 125ನೇ ಜನ್ಮದಿನ: ಮಮತಾ ಬ್ಯಾನರ್ಜಿಯಿಂದ ಬೃಹತ್ ಜಾಥಾ - ಸುಭಾಷ್ ಚಂದ್ರ ಬೋಸ್ ಜನ್ಮದಿನ
ನೇತಾಜಿ ಅವರ 125 ನೇ ಜನ್ಮ ದಿನಾಚರಣೆ ನಿಮಿತ್ತ ಮಮತಾ ಬ್ಯಾನರ್ಜಿ ಹಮ್ಮಕೊಂಡಿದ್ದ ಜಾಥಾದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
![ಸುಭಾಷ್ ಚಂದ್ರ ಬೋಸ್ರ 125ನೇ ಜನ್ಮದಿನ: ಮಮತಾ ಬ್ಯಾನರ್ಜಿಯಿಂದ ಬೃಹತ್ ಜಾಥಾ Mamata Banerjee to lead a march](https://etvbharatimages.akamaized.net/etvbharat/prod-images/768-512-10348496-thumbnail-3x2-brm.jpg)
ಸ್ವಾತಂತ್ರ್ಯದ ಮೊದಲು ಯೋಜನಾ ಆಯೋಗ ಮತ್ತು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಪರಿಕಲ್ಪನೆ ಮೂಲಕ ನೇತಾಜಿ ದೂರ ದೃಷ್ಟಿಯನ್ನು ಹೊಂದಿದ್ದರು. ಅವರು ನೇತಾಜಿಯನ್ನು ಆರಾಧಿಸುತ್ತಿದ್ದಾರೆಂದು ಹೇಳಿಕೊಳ್ಳುತ್ತಾರೆ. ಆದರೆ, ಯೋಜನಾ ಆಯೋಗವನ್ನು ತೆಗೆದುಹಾಕುತ್ತಾರೆ ಎಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರನ್ನು ಕುಟುಕಿದ್ರು.
ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಕಾರಣ ನಾವು ಇದನ್ನು ಒಂದು ದೊಡ್ಡ ಸಂದರ್ಭವೆಂದು ಆಚರಿಸುತ್ತಿದ್ದೇವೆ ಎಂದು ದೀದಿ ಹೇಳಿದ್ದಾರೆ. ಶಂಖ ಊದುವ ಮೂಕಲ ಜಾಥಾಕ್ಕೆ ಚಾಲನೆ ಕೊಟ್ರು. ಶ್ಯಾಮ್ ಬಜಾರ್‌ನಿಂದ ರೆಡ್ ರೋಡ್ ವರಿಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.