ಕರ್ನಾಟಕ

karnataka

ETV Bharat / bharat

ಬಂಗಾಳ ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ, ಬಿಜೆಪಿ ಕಚೇರಿ, ಅಂಗಡಿ ಧ್ವಂಸ - ಪಶ್ಚಿಮ ಬಂಗಾಳ ಬಿಜೆಪಿ ಕಚೇರಿ

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಹಿಂಸಾಚಾರ ಭುಗಿಲೆದ್ದಿದ್ದು, ಕೆಲ ಬಿಜೆಪಿ ಕಚೇರಿ ಹಾಗೂ ಅಂಗಡಿಗಳನ್ನ ಧ್ವಂಸ ಮಾಡಲಾಗಿದೆ.

West Bengal
West Bengal

By

Published : May 3, 2021, 7:48 PM IST

ಕೋಲ್ಕತ್ತಾ:ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ ಭರ್ಜರಿ ಗೆಲುವು ದಾಖಲು ಮಾಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲು ಸಜ್ಜುಗೊಂಡಿದೆ. ಇದರ ಮಧ್ಯೆ ಹಿಂಸಾಚಾರ ಭುಗಿಲೆದ್ದಿದೆ.

ಬಿಜೆಪಿ ಕಚೇರಿ ಮತ್ತು ಭಟ್​ಪಾರದ ಘೋಷ್ಪರಾ ರಸ್ತೆಯಲ್ಲಿರುವ ಕೆಲವೊಂದು ಅಂಗಡಿಗಳನ್ನ ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಆ ಪ್ರದೇಶದಲ್ಲಿ ಬಾಂಬ್​​ ಸಹ ಎಸೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಅಂಗಡಿ ಮಾಲೀಕನೊಬ್ಬ ಟಿಎಂಸಿ ದುಷ್ಕರ್ಮಿಗಳು ನನ್ನ ಅಂಗಡಿ ಲೂಟಿ ಮಾಡಿದ್ದಾರೆ. ಕನಿಷ್ಠ 10 ಬಾಂಬ್​​ ಎಸೆದಿದ್ದಾರೆ ಎಂದಿದ್ದಾರೆ.

ಇದರ ಜತೆಗೆ ಬಿಜೆಪಿ ಪಕ್ಷದ ಕೆಲ ಕಾರ್ಯಕರ್ತರ ಹತ್ಯೆ ಮಾಡಲಾಗಿದ್ದು, ರಾಜ್ಯಾದ್ಯಂತ ನೂರಾರು ಬಿಜೆಪಿ ಕಚೇರಿ ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ದನ್ಕರ್​​ ಡಿಜಿಪಿ ಮತ್ತು ಕೋಲ್ಕತ್ತಾ ಕಮಿಷನರ್​​ ಅವರನ್ನ ಕರೆಯಿಸಿಕೊಂಡು ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ.

ನಿನ್ನೆ ಕೂಡ ಅರಾಂಬಾಗ್​​ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು. ಇದರ ಹಿಂದೆ ಟಿಎಂಸಿ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿತ್ತು.

ABOUT THE AUTHOR

...view details