ಕರ್ನಾಟಕ

karnataka

ETV Bharat / bharat

ಬಾಂಬ್ ದಾಳಿ: ಪಶ್ಚಿಮ ಬಂಗಾಳ ಬಿಜೆಪಿ ನಾಯಕನಿಗೆ ಗಾಯ - Kolkata

ಬಿಜೆಪಿ ಮುಖಂಡ ಬಾಬು ಮಾಸ್ಟರ್ ಅಲಿಯಾಸ್ ಫಿರೋಜ್ ಗಾಜಿ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದಾಗ ಬಸಂತಿ ಹೆದ್ದಾರಿಯಲ್ಲಿ ಕೆಲವು ದುಷ್ಕರ್ಮಿಗಳು ಅವರ ಕಾರಿನ ಮೇಲೆ ಬಾಂಬ್‌ಗಳನ್ನು ಎಸೆದು ಹಲ್ಲೆ ಮಾಡಿದ್ದಾರೆ. ಇದರಿಂದ ಬಿಜೆಪಿ ಮುಖಂಡ ಗಂಭೀರವಾಗಿ ಗಾಯಗೊಂಡಿದ್ಧಾರೆ.

bomb attack
ಬಿಜೆಪಿ ನಾಯಕನ ಕಾರಿನ ಮೇಲೆ ಬಾಂಬ್ ದಾಳಿ

By

Published : Feb 14, 2021, 10:14 AM IST

ಕೋಲ್ಕತ್ತಾ:ಬಿಜೆಪಿ ಮುಖಂಡ ಬಾಬು ಮಾಸ್ಟರ್ ಅಲಿಯಾಸ್ ಫಿರೋಜ್ ಗಾಜಿ ಅವರು ಶನಿವಾರ ಸಂಜೆ ಉತ್ತರ 24 ಪರಗಣ ಜಿಲ್ಲಾ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಕೋಲ್ಕತ್ತಾಗೆ ಹಿಂದಿರುಗುತ್ತಿದ್ದಾಗ ಬಸಂತಿ ಹೆದ್ದಾರಿಯಲ್ಲಿ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.

ಬಾಂಬ್​ ದಾಳಿಯಿಂದ ಪಶ್ಚಿಮ ಬಂಗಾಳ ಬಿಜೆಪಿ ನಾಯಕನಿಗೆ ಗಾಯ

ಇದ್ದಕ್ಕಿದ್ದಂತೆ ಕೆಲವು ದುಷ್ಕರ್ಮಿಗಳು ಕೋಲ್ಕತ್ತಾ-ಬಸಂತಿ ಹೆದ್ದಾರಿ ಬಳಿ ಬಿಜೆಪಿ ನಾಯಕನ ಕಾರಿನ ಮೇಲೆ ಬಾಂಬ್‌ಗಳನ್ನು ಎಸೆದಿದ್ದಾರೆ. ಈ ದಾಳಿಯಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಇದರ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.

ABOUT THE AUTHOR

...view details