ಕರ್ನಾಟಕ

karnataka

ETV Bharat / bharat

ದುರ್ಗಾ ಅವತಾರದಲ್ಲಿ ಮಮತಾ ಬ್ಯಾನರ್ಜಿ... ದೇವಿ ಪೂಜೆಗೆ ಬಂಗಾಳ ಸನ್ನದ್ಧ - ಹೂಗ್ಲಿಯ ಕಲಾವಿದರು

ದುರ್ಗಾ ಪೂಜೆ ಸಮೀಪಿಸುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ದುರ್ಗಾ ದೇವಿಯ ಸ್ವರೂಪದಲ್ಲಿ ಪರಿಚಯಿಸಲು ಕಲಾವಿದರು ಸಿದ್ಧರಾಗಿದ್ದಾರೆ.

Mamata Banerjee
ಮಮತಾ ಬ್ಯಾನರ್ಜಿ ಮೂರ್ತಿ

By

Published : Sep 30, 2021, 9:41 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ದುರ್ಗಾ ದೇವಿಯ ಅವತಾರ ತಾಳಿದ್ದಾರೆ. ನವರಾತ್ರಿ ಉತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವ ಹೊತ್ತಿನಲ್ಲೇ ಈ ಸುದ್ದಿ ಹರಿದಾಡಲಾರಂಭಿಸಿದ್ದು, ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಹೌದು, ದುರ್ಗಾ ಪೂಜೆ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಹೂಗ್ಲಿಯ ಕಲಾವಿದರು ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇದರೆ ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ದುರ್ಗಾದೇವಿಯಂತೆ ಚಿತ್ರಿಸುತ್ತಿದ್ದಾರೆ.

ಮಮತಾ ಬ್ಯಾನರ್ಜಿ ಮೂರ್ತಿ

ಕೆಲ ವರ್ಷಗಳ ಹಿಂದಷ್ಟೇ ಅತೀ ಎತ್ತರದ ದುರ್ಗಾ ದೇವಿ ವಿಗ್ರಹವನ್ನು ಕೆತ್ತಿ ಗಮನ ಸೆಳೆದಿದ್ದ ಕಲಾವಿದ ಮಿಂಟು ಪಾಲ್​ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಮಮತಾ ಬ್ಯಾನರ್ಜಿಯನ್ನು ದುರ್ಗಾ ದೇವಿಯ ಸ್ವರೂಪದಲ್ಲಿ ಪರಿಚಯಿಸಲು ಸಿದ್ಧರಾಗಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಕಲಾವಿದರೊಬ್ಬರು, ನಮ್ಮ ದೀದಿ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದಾರೆ. 10 ಕೈಗಳು 10 ಸರ್ಕಾರಿ ಯೋಜನೆಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು.

ಇಂದು ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಸ್ಪರ್ಧಿಸುತ್ತಿದ್ದಾರೆ.

ABOUT THE AUTHOR

...view details