ಬಿರ್ಭೂಮ್(ಪಶ್ಚಿಮ ಬಂಗಾಳ):ಇಲ್ಲಿನ ಮಲ್ಲಾರ್ಪುರದಲ್ಲಿ ನಡೆದ ರಸ್ತೆ ದುರಂತದಲ್ಲಿ 9 ಮಂದಿ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ರಾಣಿಗಂಜ್-ಮೊರ್ಗ್ರಾಮ್ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಅವಘಡ ಸಂಭವಿಸಿದೆ.
ಸರ್ಕಾರಿ ಬಸ್-ಆಟೋ ಅಪಘಾತ: 8 ಮಹಿಳೆಯರು ಸೇರಿ 9 ಜನರ ದುರ್ಮರಣ - Etv bharat kannada
ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಜನರು ಅಸುನೀಗಿದ್ದಾರೆ.
accident in West bengal
ರಾಂಪುರ್‌ಹತ್‌ನಿಂದ ಮಲ್ಲಾರ್‌ಪುರಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ಕಳೆದುಕೊಂಡು ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಚಾಲಕ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 8 ಮಂದಿ ಮಹಿಳೆಯರು, ಓರ್ವ ಪುರುಷ ಸೇರಿದ್ದಾನೆ. ಇವರೆಲ್ಲರೂ ದಿನಗೂಲಿ ನೌಕರರು. ಕೆಲಸ ಮುಗಿದ ನಂತರ ಮನೆಗೆ ಮರಳುತ್ತಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
Last Updated : Aug 9, 2022, 7:54 PM IST