ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟಕ್ಕೆ ಇಂದು 43 ಸಚಿವರು ಸೇರ್ಪಡೆಯಾಗಿದ್ದು, ಕೋಲ್ಕತ್ತಾದ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
43 ಸಚಿವರ ಪೈಕಿ ಟಿಎಂಸಿಯ 24 ಮಂದಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದ್ದು, 10 ಶಾಸಕರನ್ನು ಸ್ವತಂತ್ರ ಉಸ್ತುವಾರಿ ಹೊಂದಿರುವ ಸಚಿವರಾಗಿ ಹಾಗೂ 9 ಶಾಸಕರನ್ನು ರಾಜ್ಯ ಸಚಿವರಾಗಿ ಆಯ್ಕೆ ಮಾಡಲಾಗಿದೆ. ನೂತನ ಸಚಿವರಿಗೆ ರಾಜ್ಯಪಾಲ ಜಗದೀಪ್ ಧಂಕರ್ ಪ್ರಮಾಣವಚನ ಬೋಧಿಸಿದರು.
ಇಂದು ಮಮತಾ ಬ್ಯಾನರ್ಜಿ ಸಂಪುಟ ಸೇರಿದ 43 ಸಚಿವರು ಇದನ್ನೂ ಓದಿ:3ನೇ ಬಾರಿಗೆ ಸಿಎಂ ಆಗಿ ಮಮತಾ ಪ್ರಮಾಣ; ದೀದಿ ಈಗ ದೇಶದ ಏಕೈಕ ಮಹಿಳಾ ಸಿಎಂ
ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕರಾದ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಸುಜಿತ್ ಬೋಸ್, ಚಂದ್ರಿಮ ಭಟ್ಟಾಚಾರ್ಯ ಮತ್ತು ಶಶಿ ಪಂಜ ಮತ್ತೊಮ್ಮೆ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೇ 5ರಂದು ಮಮತಾ ಬ್ಯಾನರ್ಜಿ ಅವರು ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೇ 6ರಂದು 143 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದರು.