ಕರ್ನಾಟಕ

karnataka

ETV Bharat / bharat

'ವೆಲ್ ಡನ್ ಮೋದಿ ಜೀ'.. ಸಿಬಿಎಸ್​​ಇ ಪರೀಕ್ಷೆ ಮುಂದೂಡಿಕೆ ಬಗ್ಗೆ ಕಾಂಗ್ರೆಸ್ ಟ್ವೀಟ್​! - ಕಾಂಗ್ರೆಸ್​ ಟ್ವೀಟ್​

ಪ್ರಸಕ್ತ ವರ್ಷದ ಸಿಬಿಎಸ್​ಇ ಬೋರ್ಡ್ ಪರೀಕ್ಷೆ ರದ್ಧು ಹಾಗೂ ಮುಂದೂಡಿಕೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಹಾಕಿದ್ದು, ಇದಕ್ಕೆ ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ.

PM Modi
PM Modi

By

Published : Apr 14, 2021, 3:27 PM IST

ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಧ್ಯೆ ಘೋಷಣೆಯಾಗಿದ್ದ ಸಿಬಿಎಸ್​ಇ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಕುರಿತು ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಿಬಿಎಸ್​ಇ 10ನೇ ತರಗತಿ ಬೋರ್ಡ್​ ಪರೀಕ್ಷೆ ರದ್ಧು ಪಡಿಸಿ ಹಾಗೂ 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​​, ಇಂಟರ್ನಲ್​ ಅಸೆಸ್ಮೆಂಟ್​ ಆಧಾರದ ಮೇಲೆ 10 ನೇ ತರಗತಿ ಫಲಿತಾಂಶ ಹಾಗೂ ಕೋವಿಡ್​ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ 12ನೇ ತರಗತಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಸಿಬಿಎಸ್​ಇ ಬೋರ್ಡ್​ ಪರೀಕ್ಷೆ: 10ನೇ ತರಗತಿ ಎಕ್ಸಾಮ್​ ರದ್ದು, ಪಿಯು ಪರೀಕ್ಷೆ ಮುಂದಕ್ಕೆ

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್​, ವೆಲ್​ ಡನ್ ಮೋದಿ ಜೀ ಎಂದು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್​ ಮುಖಂಡರ ಸಲಹೆ ಆಲಿಸಿರುವುದೇ ಇದಕ್ಕೆಲ್ಲ ಕಾರಣ. ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡುವುದು ನಮ್ಮ ಪ್ರಜಾಪ್ರಭುತ್ವ ಕರ್ತವ್ಯವಾಗಿದ್ದು, ಬಿಜೆಪಿ ಅಂತಿಮವಾಗಿ ಅಹಂಕಾರದಿಂದ ಹೊರ ಬಂದು ಎಚ್ಚೆತ್ತುಕೊಂಡಿದೆ ಎಂದು ಟ್ವೀಟ್ ಮಾಡಿದೆ.

ಪ್ರಿಯಾಂಕಾ ಟ್ವೀಟ್​

ಸಿಬಿಎಸ್ಇ ಪರೀಕ್ಷೆ ರದ್ಧುಗೊಳ್ಳುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಸರ್ಕಾರ ಅಂತಿಮವಾಗಿ 10ನೇ ತರಗತಿ ಪರೀಕ್ಷೆ ರದ್ಧುಗೊಳಿಸಿದೆ. ಆದರೆ, 12ನೇ ತರಗತಿ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಜೂನ್​​ವರೆಗೆ ವಿದ್ಯಾರ್ಥಿಗಳನ್ನ ಅನಗತ್ಯವಾಗಿ ಒತ್ತಡಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ. ಇದು ಅನ್ಯಾಯ. ಈಗಲೇ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರವನ್ನ ಕೋರುತ್ತೇನೆ ಎಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸಿಬಿಎಸ್​ಇ ಪರೀಕ್ಷೆ ರದ್ದು ಮಾಡುವಂತೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಅನೇಕರು ಆಗ್ರಹಿಸಿದ್ದರು. ಜತೆಗೆ ಮಹಾರಾಷ್ಟ್ರದಲ್ಲಿ ಬೋರ್ಡ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು.

ABOUT THE AUTHOR

...view details