ಪುಣೆ (ಮಹಾರಾಷ್ಟ್ರ): ಭಾರತೀಯ ಸಶಸ್ತ್ರ ಪಡೆಗಳ ಕೆಡೆಟ್‌ಗಳಂತೆಯೇ ಮಹಿಳಾ ಕೆಡೆಟ್‌ಗಳನ್ನು ಸ್ವಾಗತಿಸುವಂತೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯ ಸಿಬ್ಬಂದಿಯ ಬಳಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವನೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 141ನೇ ಕೋರ್ಸ್‌ನ ಪಾಸಿಂಗ್ ಔಟ್ ಪರೇಡ್ ಉದ್ದೇಶಿಸಿ ಮಾತನಾಡಿದ ನರವನೆ, "ನಾವು ಮಹಿಳಾ ಕೆಡೆಟ್‌ಗಳಿಗಾಗಿ ಎನ್‌ಡಿಎಯ ಗೇಟ್‌ಗಳನ್ನು ತೆರೆಯುತ್ತಿದ್ದಂತೆ, ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಭಾರತೀಯ ಸಶಸ್ತ್ರ ಪಡೆಗಳ ನೀವೆಲ್ಲರೂ ಅದೇ ನ್ಯಾಯಯುತ ರೀತಿಯಲ್ಲಿ ಅವರನ್ನು ಸ್ವಾಗತಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಹೇಳಿದರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಸೇರ್ಪಡೆಗೆ ಅನುಮತಿ ನೀಡಲಾಗಿದ್ದು, ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಮೇ 2022 ರೊಳಗೆ ಯುಪಿಎಸ್‌ಸಿ ಮೂಲಕ ಪ್ರಕಟಿಸುವುದಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಕಳೆದ ತಿಂಗಳು ತಿಳಿಸಿತ್ತು.