ನವದೆಹಲಿ:ಸರಿ ಸುಮಾರು 68 ವರ್ಷಗಳ ನಂತರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮರಳಿ ತವರು ಗೂಡು ಸೇರಿಕೊಂಡಿದ್ದು, ಬರೋಬ್ಬರಿ 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್ ಗ್ರೂಪ್ ಪಾಲಾಗಿದೆ. ತಮ್ಮ ತೆಕ್ಕೆಗೆ ಏರ್ ಇಂಡಿಯಾ ಸೇರಿಕೊಳ್ಳುತ್ತಿದ್ದಂತೆ ರತನ್ ಟಾಟಾ ಟ್ವೀಟ್ ಮಾಡಿ ಸಂತಸ ಹೊರಹಾಕಿದ್ದಾರೆ.
"ವೆಲ್ ಕಮ್ ಬ್ಯಾಕ್, ಏರ್ ಇಂಡಿಯಾ"("Welcome back, Air India,") ಎಂದು ಟ್ವಿಟರ್ನಲ್ಲಿ ಬರೆದುಕೊಳ್ಳುವ ಮೂಲಕ ರತನ್ ಟಾಟಾ ತಮ್ಮ ಸಂತಸ ಹೊರಹಾಕಿದ್ದಾರೆ.
1953ರಲ್ಲಿ ಭಾರತ ಸರ್ಕಾರದ ಪಾಲಾಗಿದ್ದ ಎರ್ ಇಂಡಿಯಾ 2007 ರ ನಂತರ ಸಾಲದ ಸುಳಿಗೆ ಸಿಲುಕಿಕೊಂಡಿತ್ತು. ಹೀಗಾಗಿ 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಎರ್ಲೈನ್ ಮಾರಾಟದ ಮೊದಲ ಪ್ರಯತ್ನ ಮಾಡಿತ್ತು. ಈ ವೇಳೆ ಶೇ. 40ರಷ್ಟು ಷೇರು ಮಾರಾಟ ಮಾಡಲಾಗಿತ್ತು. 2002-03 ಏರ್ ಇಂಡಿಯಾ ಕಂಪನಿ 133 ಕೋಟಿ ರೂ. ಹಾಗೂ 2003-04ರಲ್ಲಿ 105 ಕೋಟಿ ರೂ. ಲಾಭದಲ್ಲಿತ್ತು. ಆ ಬಳಿಕ