ಕರ್ನಾಟಕ

karnataka

ETV Bharat / bharat

ಕೆಲಸ ಕೊಡಿಸುವುದಾಗಿ ಅತ್ಯಾಚಾರ: ಪೊಲೀಸ್​ ವಿರುದ್ಧ ಮಹಿಳಾ ವೇಯ್ಟ್​ಲಿಫ್ಟರ್ ಆರೋಪ - Weightlifter alleges rape

ಕ್ರೀಡಾ ಕೋಟಾದಡಿ ಕೆಲಸ ಕೊಡಿಸುವುದಾಗಿ ಹೇಳಿ ಸಬ್ ಇನ್ಸ್‌ಪೆಕ್ಟರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಲೂಧಿಯಾನ ಮೂಲದ ಮಹಿಳಾ ವೇಯ್ಟ್​ಲಿಫ್ಟರ್ ಒಬ್ಬರು ಆರೋಪಿಸಿದ್ದಾರೆ.

case
case

By

Published : Jun 4, 2021, 9:39 PM IST

ಪಂಜಾಬ್​: ಲುಧಿಯಾನ ಮೂಲದ ಮಹಿಳಾ ವೇಯ್ಟ್​ಲಿಫ್ಟರ್​​ಗೆ ಕ್ರೀಡಾ ಕೋಟಾದಡಿ ಕೆಲಸ ಕೊಡಿಸುವುದಾಗಿ ಹೇಳಿ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರ ಎಸಗಿದ್ದು, ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಕ್ಕಾಗಿ ಮಹಿಳಾ ವೇಯ್ಟ್​ಲಿಫ್ಟರ್ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದಾರೆ.

ಸಂತ್ರಸ್ತ ಮಹಿಳೆ ಕ್ರೀಡಾಪಟುವಾಗಿದ್ದು, ಆರೋಪಿ ಸಬ್​ ಇನ್ಸ್​​ಪೆಕ್ಟರ್​​ ಕ್ರೀಡಾ ಕೋಟಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡುವ ಮೂಲಕ ದೈಹಿಕವಾಗಿ ಶೋಷಣೆ ಮಾಡಿದ್ದಾರೆ ಮತ್ತು ತನ್ನನ್ನು ಈಗ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೆಲಸ ಕೊಡಿಸುವ ನೆಪದಲ್ಲಿ ಸಬ್‌ಇನ್ಸ್‌ಪೆಕ್ಟರ್ ನನ್ನನ್ನು ಹೋಟೆಲ್‌ಗೆ ಕರೆದು ಅಲ್ಲಿ ನನ್ನೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆ ನಂತರವೂ ಬ್ಲ್ಯಾಕ್‌ಮೇಲ್ ಮಾಡುತ್ತಾ ದೈಹಿಕವಾಗಿ ನಿಂದಿಸುತ್ತಿದ್ದನು ಎಂದು ಆಕೆ ದೂರಿದ್ದಾರೆ. ಹೀಗಾಗಿ ತನಗೆ ನ್ಯಾಯ ಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ಸಬ್ ಇನ್ಸ್‌ಪೆಕ್ಟರ್‌ ಈ ಆರೋಪ ಕುರಿತು ಫೋನ್​ನಲ್ಲಿ ಪ್ರತಿಕ್ರಿಯಿಸಿ, ಈ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.

ABOUT THE AUTHOR

...view details