ಟೋಕಿಯೋ:ಭಾರತ ಟೋಕಿಯೋ ಒಲಿಂಪಿಕ್ನ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವೇಟ್‌ಲಿಫ್ಟಿಂಗ್ ಮಹಿಳಾ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸಿದ್ದಾರೆ. ಭಾರತಕ್ಕೆ ಇದೇ ಮೊದಲ ಬಾರಿಗೆ ಒಲಿಂಪಿಕ್ ವೇಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ದೊರೆತಿದೆ.
ವೇಟ್ ಲಿಫ್ಟಿಂಗ್ನಲ್ಲಿ ಎರಡನೇ ಶ್ರೇಣಿ ಪಡೆದ ಮೀರಾಬಾಯಿ ಚಾನು 110 ಕೆಜಿ ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಣಿಪುರ ಮೂಲದವರಾದ ಇವರು ಒಟ್ಟು 202 ಕೆಜಿ ಭಾರವನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಎತ್ತಿದ್ದಾರೆ (ಸ್ನ್ಯಾಚ್ನಲ್ಲಿ 87 ಕೆಜಿ ಮತ್ತು ಕ್ಲೀನ್ ಅಂಡ್ ಜರ್ಕ್ನಲ್ಲಿ 115).
ಮೊದಲ ಸ್ಥಾನ ಪಡೆದು ಝಿಹೈ ಹೌ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 210 ಕೆಜಿ ಭಾರವನ್ನು ಎತ್ತಿ ಹೊಸ ದಾಖಲೆ ಸೃಷ್ಟಿಸಿದ್ದು, ಇಂಡೋನೇಷ್ಯಾದ ಕ್ಯಾಂಟಿಕಾ ಐಸಾಹ್ 194 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.