ಕರ್ನಾಟಕ

karnataka

ETV Bharat / bharat

ವಿವಾಹಿತರ ಕೌಟುಂಬಿಕ ಬದುಕು ಒತ್ತಡದಲ್ಲಿರಲಿದೆ, ಈ ರಾಶಿಯವರು ಧೈರ್ಯದಿಂದ ವರ್ತಿಸಬೇಕು! - ಈ ರಾಶಿಯ ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡ

ಈ ವಾರದ ರಾಶಿ ಭವಿಷ್ಯ ಹೀಗಿದೆ..

ರಾಶಿ ಭವಿಷ್ಯ
Weekly Horoscope of October

By

Published : Oct 16, 2022, 7:09 AM IST

ಮೇಷ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ನಿಮ್ಮ ಪ್ರೇಮಿಯು ನಿಮ್ಮ ಹೃದಯವನ್ನು ಗೆಲ್ಲಲು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಹೀಗಾಗಿ ನೀವು ಧೈರ್ಯದಿಂದ ವರ್ತಿಸಬೇಕು. ಸದ್ಯಕ್ಕೆ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿ ಅನಾರೋಗ್ಯಕ್ಕೆ ಕಾರಣವೆನಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿರೀಕ್ಷಿತ ಫಲಿತಾಂಶ ಪಡೆಯುವುದರಿಂದ ನಿಮ್ಮ ಸಾಮರ್ಥ್ಯದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಹೀಗಾಗಿ ನಿಮ್ಮ ಕೆಲಸಕ್ಕೆ ವೇಗ ನೀಡಿ ಚಾಂಪಿಯನ್​​ನಂತೆ ನೀವು ಮುಂದೆ ಸಾಗಲಿದ್ದೀರಿ. ನೀವು ವ್ಯವಹಾರದಿಂದ ಲಾಭವನ್ನು ಪಡೆಯಲಿದ್ದೀರಿ. ನೀವು ಉದ್ಯೋಗದಲ್ಲಿದ್ದರೆ, ನಿಮ್ಮ ಸಹೋದ್ಯೋಗಿಗಳ ನೆರವು ಮತ್ತು ಪ್ರೀತಿಯ ಕಾರಣ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಅಪಾಯಕ್ಕೆ ಮೈಯೊಡ್ಡಿ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ವ್ಯವಹಾರದಲ್ಲಿ ಹೂಡಿಕೆ ಮಾಡಲು ಈ ಸಮಯವು ನಿಮ್ಮನ್ನು ಉತ್ತೇಜಿಸಲಿದೆ. ಬ್ಯಾಂಕಿನ ಸಾಲ ಮರುಪಾವತಿ ಮಾಡುವಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯವು ಶಾಂತಿಯುತವಾಗಿರಲಿದೆ. ಅವರು ಶ್ರದ್ಧೆಯಿಂದ ಕಲಿಯಲಿದ್ದಾರೆ. ಹೀಗಾಗಿ ಅವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭಿಕ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಆದರೆ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ಪ್ರೇಮ ಸಂಬಂಧದಲ್ಲಿರುವ ಜನರಿಗೆ ತಮ್ಮ ಭಾವನೆಗಳನ್ನು ಪ್ರೇಮ ಸಂಗಾತಿಗೆ ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೇಮವು ನೆಲೆಸಲಿದೆ. ನಿಮ್ಮ ಸಂವಹನವು ಚೆನ್ನಾಗಿರಲಿದೆ. ಹೀಗಾಗಿ ಸಂಬಂಧದಲ್ಲಿ ಪಕ್ವತೆ ಕಾಣಿಸಿಕೊಳ್ಳಲಿದೆ. ವಾರದ ಆರಂಭದಲ್ಲಿ ಬರುವ ಉತ್ತಮ ಆದಾಯದ ಕಾರಣ ನಿಮ್ಮ ಸಂತಸವು ದುಪ್ಪಟ್ಟಾಗಲಿದೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಸವಾಲುಗಳಿಗೆ ಹೆದರದೆ ಅವುಗಳನ್ನು ಧೈರ್ಯದಿಂದ ಎದುರಿಸಲಿದ್ದೀರಿ. ಕಾನೂನಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಲಾಭ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರಿಗೆ ತಮ್ಮ ಅದೃಷ್ಟದೊಂದಿಗೆ ಕಠಿಣ ಶ್ರಮವನ್ನು ತೋರಬೇಕಾದ ಕಾಲವಿದು. ಆಗ ಮಾತ್ರವೇ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ವಾರ ವ್ಯಾಪಾರೋದ್ಯಮಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವಾರದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ನೀವು ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರದು. ಆದರೆ ನಿಮ್ಮ ಆಹಾರ ಕ್ರಮಕ್ಕೆ ನೀವು ಗಮನ ನೀಡಬೇಕು. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ:ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಆದರೂ ವೈವಾಹಿಕ ಬದುಕು ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳಲ್ಲಿ ಎಲ್ಲಿಂದಾದರೂ ನೀವು ದೊಡ್ಡ ಪ್ರಮಾಣದ ಪ್ರಯೋಜನವನ್ನು ಪಡೆಯಬಹುದು. ನೀವು ಯಾವುದಾದರೂ ಆಸ್ತಿಯನ್ನು ಖರೀದಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಉದ್ಯೋಗದಲ್ಲಿರುವವರು ಕೆಲಸದ ಮೇಲೆ ಗಮನ ಹರಿಸಲಿದ್ದಾರೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಶೀಘ್ರವೇ ಫಲ ದೊರೆಯಲಿದೆ. ಕೆಲವು ದೀರ್ಘಕಾಲೀನ ಕೆಲಸಗಳು ಬಾಕಿ ಉಳಿಯಬಹುದು. ಇವುಗಳಿಗೆ ಗಮನ ನೀಡಿರಿ. ವ್ಯಾಪಾರಿಗಳಿಗೆ ಈ ವಾರ ಅತ್ಯುತ್ತಮ ಫಲ ದೊರೆಯಲಿದೆ. ರಿಯಲ್‌ ಎಸ್ಟೇಟ್​​ಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು. ಇದು ಉತ್ತಮ ಫಲಿತಾಂಶವನ್ನೂ ನೀಡಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಹೀಗಾಗಿ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಪ್ರಯಾಣಕ್ಕೆ ಇದು ಉತ್ತಮ ವಾರ.

ಕರ್ಕಾಟಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ವಿವಾಹಿತರು ಸಹ ತಮ್ಮ ಮನಸ್ಸಿನ ಭಾವನೆಗಳನ್ನು ತಮ್ಮ ಸಂಗಾತಿಯಲ್ಲಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ದೀರ್ಘ ಕಾಲದಿಂದ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದ ವಿಚಾರವನ್ನು ಅವರು ಹೇಳಿಕೊಳ್ಳಲಿದ್ದಾರೆ. ಅವರು ಸಂಬಂಧಿಗಳನ್ನು ಭೇಟಿಯಾಗಬಹುದು. ಮನೆಯ ಪರಿಸ್ಥಿತಿ ಚೆನ್ನಾಗಿರಲಿದೆ. ಆದರೆ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದೆ. ಈ ವಾರದಲ್ಲಿ ಯಾವುದೇ ದೊಡ್ಡ ಖರ್ಚನ್ನು ಮಾಡಬೇಡಿ. ಏಕೆಂದರೆ ಇಡೀ ವಾರದಲ್ಲಿ ನಿಮ್ಮ ಮೇಲೆ ಹೊರೆ ಉಂಟಾಗಲಿದೆ. ಮಾನಸಿಕ ಒತ್ತಡದಿಂದ ದೂರವಿರಲು ಯತ್ನಿಸಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ವಾರದ ಮಧ್ಯದ ದಿನಗಳು ಚೆನ್ನಾಗಿರಲಿವೆ ಹಾಗೂ ಕೊನೆಯ ದಿನಗಳಲ್ಲಿ ಹಣ ಲಭಿಸಲಿದೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಸಾಕಷ್ಟು ಲಾಭ ದೊರೆಯಲಿದೆ. ನಿಮ್ಮ ತೀಕ್ಷ್ಣ ಬುದ್ಧಿಮತ್ತೆಯ ಪರಿಣಾಮವಾಗಿ ನೀವು ಪ್ರಯೋಜನವನ್ನು ಪಡೆಯಲಿದ್ದೀರಿ. ಅವರು ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ ಹಾಗೂ ಜನರ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ವ್ಯಾಪಾರಿಗಳು ಒಂದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀವು ಕೆಲವೊಂದು ಹೊಸ ಡೀಲುಗಳನ್ನು ಪಡೆಯಬಹುದು. ಆದರೆ ಇದಕ್ಕಾಗಿ ನೀವು ಒಂದಷ್ಟು ಹೆಚ್ಚಿನ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಇದರಿಂದಾಗಿ ಅವರ ಆತ್ಮಸ್ಥೈರ್ಯ ಹೆಚ್ಚಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಾನಸಿಕ ಒತ್ತಡದಿಂದ ದೂರವಿರಲು ಯತ್ನಿಸಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಸಿಂಹ:ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಕೌಟುಂಬಿಕ ಬದುಕನ್ನು ಸಾಗಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನಿಮ್ಮ ಬದುಕನ್ನು ನೀವು ಮುಕ್ತವಾಗಿ ಸಾಗಿಸಲಿದ್ದೀರಿ ಹಾಗೂ ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಈ ಕಾರಣದಿಂದಾಗಿ ನಿಮ್ಮ ಮನಸ್ಸಿಗೆ ಸಂತಸ ಲಭಿಸಲಿದೆ. ಖರ್ಚುವೆಚ್ಚಗಳನ್ನು ನಿಯಂತ್ರಣದಲ್ಲಿ ಇರಿಸುವ ಮೂಲಕ ದಕ್ಷತೆಯಿಂದ ನೀವು ಹಣಕಾಸಿನ ನಿರ್ವಹಣೆಯನ್ನು ಮಾಡಲಿದ್ದೀರಿ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಕುಟುಂಬದಲ್ಲಿ ಸಂತಸ ಇರಲಿದೆ. ಕುಟುಂಬದ ಸದಸ್ಯರು ಏನಾದರೂ ಹೊಸ ಕೆಲಸವನ್ನು ಒಟ್ಟಿಗೆ ಮಾಡಲು ಯೋಚಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ ಎನಿಸಲಿದೆ. ವ್ಯಾಪಾರೋದ್ಯಮಿಗಳು ಸಹ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಹೀಗೆ ಅವರು ತಮ್ಮ ಕೆಲಸದ ಮೇಲೆ ಹಿಡಿತ ಸಾಧಿಸಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ಸಮಯವನ್ನು ನೀವು ಆನಂದಿಸಲಿದ್ದೀರಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕನ್ಯಾ:ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯವು ಹೆಚ್ಚಲಿದೆ. ನಿಮ್ಮ ಸಂಬಂಧದಲ್ಲಿ ನೀವು ಕಲ್ಪಿಸಿದಂತೆಯೇ ಎಲ್ಲವೂ ನಡೆಯಲಿದೆ. ಈ ಸಮಯವನ್ನು ನೀವು ಸಂಪೂರ್ಣವಾಗಿ ಆನಂದಿಸಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಒಂದಷ್ಟು ನಿರಾಸೆ ಉಂಟಾಗಬಹುದು. ಏಕೆಂದರೆ ಅವರು ನಿರೀಕ್ಷಿಸುವ ಪ್ರೀತಿಯು ಅವರಿಗೆ ತಮ್ಮ ಸಂಗಾತಿಯಿಂದ ದೊರೆಯದು. ಯಾವುದೇ ಕಾರಣಕ್ಕೂ ಚಿಂತೆಗೀಡಾಗುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಚೈತನ್ಯವು ಉನ್ನತ ಮಟ್ಟದಲ್ಲಿರಲಿದೆ. ಹೀಗಾಗಿ ನಿಮ್ಮ ಆದಾಯವನ್ನು ಇನ್ನಷ್ಟು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಲಿದ್ದೀರಿ. ಸಾಕಷ್ಟು ಹಣ ಗಳಿಸುವುದಕ್ಕಾಗಿ ನೀವು ಇತರ ದಾರಿಗಳನ್ನು ಹುಡುಕಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಪ್ರಾವಿಣ್ಯತೆ ಗಳಿಸಲಿದ್ದಾರೆ. ಕೆಲಸದ ಮೇಲೆ ಸಂಪೂರ್ಣ ಗಮನ ನೀಡಲಿದ್ದೀರಿ ಹಾಗೂ ನಿಮ್ಮ ವೈಯಕ್ತಿಕ ಬದುಕಿನಲ್ಲಿ ಸಂತುಲನವನ್ನು ಕಾಪಾಡಲಿದ್ದೀರಿ. ಹೀಗಾಗಿ ನೀವು ಎರಡೂ ಕಡೆಗಳಲ್ಲಿ ಸಂತಸ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ತುಲಾ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ವಿವಾಹಿತ ಜೋಡಿಗಳ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರ ಸಂಬಂಧವು ಅಗ್ನಿಪರೀಕ್ಷೆಗೆ ಒಳಪಡಲಿದೆ. ನಿಮ್ಮ ಅದೃಷ್ಟದ ಬೆಂಬಲವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಕೆಲಸದಲ್ಲಿ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿಯಾಗಲಿದೆ. ನಿಮ್ಮ ಬಾಸ್‌ ಕೂಡಾ ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ. ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಆದರೆ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ನೀವು ದೀರ್ಘ ಪ್ರಯಾಣ ಮಾಡಬಹುದು. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಮುಂದುವರಿಯಲಿದ್ದಾರೆ. ನೀವು ಕೆಲವೊಂದು ಹೊಸ ಆರ್ಡರ್‌ ಗಳನ್ನು ಪಡೆಯಬಹುದು. ಇದು ನಿಮ್ಮ ಕೆಲಸವನ್ನು ಮುಂದುವರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳು ಮಾರ್ಗದರ್ಶಕರ ಸಹಾಯದಿಂದ ಅಧ್ಯಯನದ ಲಾಭ ಪಡೆಯಲಿದ್ದಾರೆ. ನಿಮ್ಮ ಶಿಕ್ಷಕರೊಂದಿಗೆ ಗೌರವದಿಂದ ಮಾತನಾಡಿ. ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಇರಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಆಹಾರಕ್ರಮಕ್ಕೆ ಗಮನ ನೀಡುವುದು ಅತ್ಯಗತ್ಯ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಶ್ಚಿಕ: ನಿಮ್ಮ ಪಾಲಿಗೆ ಇದು ಅಸಾಧಾರಣ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನೀವು ನಿಮ್ಮ ಪ್ರೇಮ ಬದುಕಿನಲ್ಲಿ ಮುಂದೆ ಸಾಗಲಿದ್ದೀರಿ. ಆದರೂ ಕೆಲವೊಂದು ಮಾನಸಿಕ ಸವಾಲುಗಳು ನಿಮ್ಮನ್ನು ಕಾಡಬಹುದು. ವೈವಾಹಿಕ ಬದುಕಿನ ಒತ್ತಡವನ್ನು ತಗ್ಗಿಸಲು ನೀವು ಯತ್ನಿಸಬಹುದು. ಈ ನಿಟ್ಟಿನಲ್ಲಿ ನಿಮ್ಮ ಅತ್ತೆ ಮಾವಂದಿರನ್ನು ನೀವು ಭೇಟಿಯಾಗಿ ಮಾತನಾಡುವ ಅಗತ್ಯವಿದೆ. ವಾರದ ಆರಂಭದಲ್ಲಿ ಆಸ್ತಿಯ ವ್ಯವಹಾರದಲ್ಲಿ ಉತ್ತಮ ಹಣ ಗಳಿಸಲು ನಿಮಗೆ ಸಾಧ್ಯವಾಗಲಿದೆ. ಆಸ್ತಿಯನ್ನು ಖರೀದಿಸಲು ನೀವು ಇಚ್ಛಿಸುವುದಾದರೆ ಇದರಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಈ ವಾರವು ಉದ್ಯೋಗಿಗಳ ಪಾಲಿಗೆ ಒಳ್ಳೆಯದು. ನಿಮ್ಮ ಕೆಲಸವನ್ನು ನೀವು ಚೆನ್ನಾಗಿಯೇ ಪೂರ್ಣಗೊಳಿಸಲಿದ್ದು, ನಿಮ್ಮ ಸಾಧನೆಯನ್ನು ಪ್ರತಿಯೊಬ್ಬರು ಗುರುತಿಸಲಿದ್ದಾರೆ. ಈ ವಾರವು ವ್ಯಾಪಾರಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನೀವು ಎದುರಾಳಿಯನ್ನು ಪ್ರಬಲವಾಗಿ ಎದುರಿಸಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಸಮಯ ಚೆನ್ನಾಗಿದೆ. ನಿಮ್ಮ ಶಿಕ್ಷಣದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ಧನು: ಈ ವಾರವು ನಿಮಗೆ ಉತ್ತಮ ಫಲ ನೀಡಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸೃಜನಶೀಲತೆಯ ಮೂಲಕ ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ನೀವು ಗೆಲ್ಲಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಹೊರ ಬರಲಿದೆ. ವ್ಯವಹಾರದಲ್ಲಿ ನೀವು ಅದೃಷ್ಟಶಾಲಿ ಎನಿಸಲಿದ್ದೀರಿ. ನಿಮ್ಮ ವ್ಯವಹಾರವು ಅನೇಕ ರೀತಿಯಲ್ಲಿ ಬೆಳೆಯಲಿದೆ. ನಿಮ್ಮ ವ್ಯವಹಾರವನ್ನು ನೀವು ದೂರದ ಪ್ರದೇಶಗಳಿಗೆ ಅಥವಾ ರಾಜ್ಯಗಳಿಗೆ ವಿಸ್ತರಿಸಿದರೆ ನೀವು ಉತ್ತಮ ಲಾಭವನ್ನು ಗಳಿಸಬಹುದು. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಗೆಳೆಯರೊಂದಿಗೆ ಸೇರಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಹಾಗೂ ಆಸ್ತಿ ವ್ಯವಹಾರವನ್ನು ನಡೆಸುವ ಯೋಜನೆಗೆ ನೀವು ಕೈ ಹಾಕಬಹುದು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಗೊಂದಲವು ಕಾಡಬಹುದು. ಕೆಲವೊಂದು ಸಂದೇಹಗಳಿಗೆ ಅವರು ಉತ್ತರ ಕಂಡುಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರದು. ಆದರೆ ನಿಮ್ಮ ಆಹಾರ ಕ್ರಮಕ್ಕೆ ನೀವು ಗಮನ ನೀಡಬೇಕು. ಯಾವುದೇ ಸಣ್ಣಪುಟ್ಟ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ವೈದ್ಯರ ಸಲಹೆ ತೆಗೆದುಕೊಂಡು ಅದಕ್ಕೆ ಚಿಕಿತ್ಸೆ ನೀಡಿರಿ. ಇಲ್ಲದಿದ್ದರೆ ಸಮಸ್ಯೆ ಎದುರಾಗಬಹುದು. ವಾರದ ಆರಂಭಿಕ ಮತ್ತು ಕೊನೆಯ ದಿನಗಳು ಪ್ರಯಾಣಿಸಲು ಉತ್ತಮ.

ಮಕರ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಂತಸ ಕಂಡು ಕೊಳ್ಳಲಿದ್ದಾರೆ. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಅನುಭವಿಸಲಿದ್ದೀರಿ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಸಹ ಸಂತಸದಿಂದ ಕೂಡಿರಲಿದೆ. ವಾರದ ಮಧ್ಯದಲ್ಲಿ ನಿಮ್ಮ ಸಂಗಾತಿಯನ್ನು ನೀವು ದೀರ್ಘ ನಡಿಗೆಗೆ ಕರೆದುಕೊಂಡು ಹೋಗಬಹುದು. ಈ ವಾರದಲ್ಲಿ ನೀವು ಗೊಂದಲಕ್ಕೆ ಒಳಗಾಗಬಹುದು. ಅನೇಕ ವಿಚಾರಗಳಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ನಿಮಗೆ ಸಾಧ್ಯವಾಗದು. ಇದರಿಂದಾಗಿ ನಿಮಗೆ ಸಮಸ್ಯೆ ಉಂಟಾಗಬಹುದು ಹಾಗೂ ನೀವು ಮಾನಸಿಕ ತೊಳಲಾಟಕ್ಕೆ ಒಳಗಾಗಬಹುದು. ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಹೀಗಾಗಿ ನಿಮ್ಮ ಆದಾಯದ ಮೇಲೆ ಗಮನ ಹರಿಸುವಾಗ ನಿಮ್ಮ ಹಣಕಾಸಿನ ಮೇಲೂ ಗಮನ ಹರಿಸಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಏಕತಾನತೆಯನ್ನು ದೂರ ಮಾಡುವುದಕ್ಕಾಗಿ ಆಗಾಗ್ಗೆ ವಿರಾಮ ತೆಗೆದುಕೊಳ್ಳಬೇಕು. ಯಾವುದಾದರೂ ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಲು ಯತ್ನಿಸಿ. ಈ ಕುರಿತು ನೀವು ಆಡಳಿತ ಮಂಡಳಿಯ ಜೊತೆಗೆ ಮಾತನಾಡಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳು ವಿಶೇಷ ಲಾಭ ಗಳಿಸಲಿದ್ದಾರೆ. ನೀವು ಆಸ್ತಿಯಿಂದ ಲಾಭವನ್ನು ಪಡೆಯಲಿದ್ದೀರಿ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇದರಿಂದಾಗಿ ಅವರು ಹರ್ಷಗೊಳ್ಳಲಿದ್ದಾರೆ ಹಾಗೂ ಏನಾದರೂ ಹೊಸತನ್ನು ಕಲಿಯಲು ಯತ್ನಿಸಲಿದ್ದಾರೆ. ಈಗ ನೀವು ವಿರಾಮ ತೆಗೆದುಕೊಳ್ಳುವ ಅಗತ್ಯವಿದೆ. ನೀವು ಸಾಕಷ್ಟು ನಿದ್ರೆಯನ್ನು ಪಡೆದರೆ ಮಾನಸಿಕವಾಗಿ ನಿರಾಳತೆ ಅನುಭವಿಸಲಿದ್ದೀರಿ. ಅಲ್ಲದೆ ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ.

ಕುಂಭ:ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಈ ವಾರದಲ್ಲಿ ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯಲಿದ್ದೀರಿ. ಅತ್ತೆ - ಮಾವಂದಿರು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ನೀವು ಮಕ್ಕಳಿಂದ ಸಂತಸ ಪಡೆಯಲಿದ್ದೀರಿ. ಪ್ರೇಮದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ನಿಮ್ಮ ಪ್ರೇಮಿಯು ಆಸ್ತಿಯನ್ನು ಖರೀದಿಸಬಹುದು. ಉದ್ಯೋಗದಲ್ಲಿರುವವರು ಗಂಭೀರವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೆಲವರು ತಮ್ಮ ಕೆಲಸವನ್ನು ಕಳೆದುಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಕೆಲವರಿಗೆ ಹೊಸ ಉದ್ಯೋಗ ದೊರೆಯಬಹುದು. ಇಂತಹ ಸಂದರ್ಭದಲ್ಲಿ ಅವರು ಹಳೆಯ ಕೆಲಸವನ್ನು ಬಿಡುವ ಯೋಚನೆ ಮಾಡಬಹುದು. ಈ ವಾರದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಅಡಚಣೆಗಳನ್ನು ಎದುರಿಸಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ನೀವು ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ನೀವು ಧ್ಯಾನದಿಂದ ಲಾಭವನ್ನು ಪಡೆಯಲಿದ್ದೀರಿ. ಸದ್ಯಕ್ಕೆ ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ದಿನಚರಿಗೆ ಒತ್ತು ನೀಡಿ ಹಾಗೂ ಯೋಗವನ್ನು ಅಭ್ಯಸಿಸಿ. ಇದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮೀನ:ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಆದರೆ ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ನೀವು ಸೇವಿಸುವ ಆಹಾರಕ್ಕೆ ಸಾಕಷ್ಟು ಗಮನ ನೀಡಿ. ಹಾಳಾದ ಅಥವಾ ಹಳಸಿದ ಆಹಾರವನ್ನು ಸೇವಿಸಬೇಡಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ತಮ್ಮ ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ ಹಾಗೂ ಇದರಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯನ್ನು ಈ ವಾರದಲ್ಲಿ ಭೇಟಿಯಾಗಲಿದ್ದಾರೆ ಹಾಗೂ ಅವರಿಗಾಗಿ ಸುಂದರವಾದ ಉಡುಗೊರೆಯನ್ನು ತರಬಹುದು. ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಲು ನೀವು ಪ್ರಯತ್ನಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಕುರಿತು ಸಾಕಷ್ಟು ಜಾಗರೂಕತೆಯನ್ನು ತೋರಲಿದ್ದಾರೆ ಹಾಗೂ ಒಳ್ಳೆಯ ಕೆಲಸವನ್ನು ಮಾಡಲಿದ್ದಾರೆ. ಅವರ ಕಠಿಣ ಶ್ರಮವು ಗೋಚರಿಸಲಿದೆ. ವ್ಯಾಪಾರಿಗಳು ಅವರ ವ್ಯವಹಾರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವುದಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ಅವರು ತಮ್ಮ ಕೆಲಸದಲ್ಲಿ ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಲಿದ್ದಾರೆ. ಈ ವಿಚಾರದಲ್ಲಿ ನೀವು ಅನುಭವಿ ವ್ಯಕ್ತಿಯ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಅಡಚಣೆ ಎದುರಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಅನಗತ್ಯ ವಿಚಾರಗಳಿಗೆ ಗಮನ ನೀಡಬೇಡಿ ಹಾಗೂ ವೇಳಾಪಟ್ಟಿಯನ್ನು ರೂಪಿಸಿ ನಿಮ್ಮ ಅಧ್ಯಯನಕ್ಕೆ ಗಮನ ನೀಡಿ. ಈ ವಾರದಲ್ಲಿ ಆರೋಗ್ಯವು ಚೆನ್ನಾಗಿರಲಿದೆ. ಆಹಾರದಲ್ಲಿ ನೀವು ನಿರಂತರತೆಯನ್ನು ಕಾಪಾಡಬೇಕು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ABOUT THE AUTHOR

...view details