ಕರ್ನಾಟಕ

karnataka

ETV Bharat / bharat

ಪ್ರೇಮಿಗಳಿಗೆ ಇದು ಉತ್ತಮ ವಾರ... ಆದ್ರೆ - Etv Bharat Kannada

ಆಗಸ್ಟ್ 14 ರಿಂದ 20ರ ವರೆಗಿನ ವಾರದ ರಾಶಿ ಭವಿಷ್ಯ ಇಲ್ಲಿದೆ.

Etv Bharat ವಾರದ ರಾಶಿ ಭವಿಷ್ಯ Weekly horoscope
Etv Bharat Weekly horoscope

By

Published : Aug 14, 2022, 7:54 AM IST

ಮೇಷ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜೋಡಿಗಳು ತಮ್ಮ ಸಂಬಂಧದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ನೆರವನ್ನು ನೀವು ಪಡೆಯಲಿದ್ದೀರಿ. ಇದು ನಿಮಗೆ ಒಲವಿನ ಭಾವನೆಯನ್ನು ನೀಡಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ಪರಸ್ಪರ ಸಂವಹನದ ಮೂಲಕ ಅವರು ತಮ್ಮ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದಾರೆ. ವಾರದ ಆರಂಭಿಕ ದಿನಗಳಲ್ಲಿ ನೀವು ಎಲ್ಲಾದರೂ ದೀರ್ಘ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಒಂದಷ್ಟು ಸಣ್ಣಪುಟ್ಟ ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಅವು ಅಷ್ಟೇನೂ ತೊಂದರೆ ನೀಡುವುದಿಲ್ಲ. ಕುಟುಂಬದಲ್ಲಿ ಏನಾದರೂ ಹೊಸ ಕೆಲಸ, ಕಾರ್ಯಕ್ರಮ ನಡೆಯಬಹುದು. ಉದ್ಯೋಗದಲ್ಲಿರುವ ಜನರು ಕೆಲಸದಲ್ಲಿ ಉತ್ತಮ ಫಲಿತಾಂಶ ಗಳಿಸಲಿದ್ದಾರೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವ್ಯಾಪಾರಿಗಳ ವಿಚಾರದಲ್ಲೂ ಈ ವಾರ ನಿರೀಕ್ಷೆಗಿಂತಲೂ ಹೆಚ್ಚು ಲಾಭದಾಯಕ ಎನಿಸಲಿದೆ. ಇದು ನಿಮ್ಮನ್ನು ಸಂತುಷ್ಟರನ್ನಾಗಿಸಲಿದೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಹೆಚ್ಚು ಗಮನ ನೀಡಿ ಕಲಿಯಲು ಅವರಿಗೆ ಸಾಧ್ಯವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಳೆಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಉತ್ತಮ ವಾರವೆನಿಸಲಿದೆ. ಅವರು ಪರಸ್ಪರ ಸಂವಾದ ನಡೆಸಲಿದ್ದಾರೆ. ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಕೆಲವೊಂದು ಸವಾಲುಗಳೊಂದಿಗೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಏರುತ್ತಿರುವ ನಿಮ್ಮ ಖರ್ಚುವೆಚ್ಚಗಳ ಮೇಲೆ ಕಣ್ಣಿಡಿ. ಈ ಖರ್ಚುವೆಚ್ಚಗಳು ನಿಮ್ಮ ಆದಾಯಕ್ಕಿಂತ ಮೀರಿ ಹೋಗದಂತೆ ಎಚ್ಚರಿಕೆ ವಹಿಸಿ. ಈ ರೀತಿ ಉಂಟಾದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲಿದ್ದೀರಿ. ನಿಮ್ಮ ಕುಟುಂಬದಲ್ಲಿ ಸಂತುಲನ ಕಾಪಾಡಲು ನಿಮಗೆ ಸಾಧ್ಯವಾಗಲಿದೆ ಹಾಗೂ ನಿಮ್ಮ ಕೆಲಸವು ಸಾಮರಸ್ಯದೊಂದಿಗೆ ಮುಂದುವರಿಯಲಿದೆ. ಈ ಸಂತುಲನವು ನಿಮಗೆ ಲಾಭ ತರಲಿದೆ. ನಿಮ್ಮ ಮನಸ್ಸಿನಲ್ಲಿ ಏನಾದರೂ ವಿಷಯದ ಕುರಿತು ಯೋಚನೆಗಳು ಕಾಡಬಹುದು. ಕೆಲವೊಂದು ಕೆಲಸಗಳ ಕುರಿತು ನೀವು ಗಾಢ ಅನುರಾಗ ತೋರಲಿದ್ದೀರಿ. ಈ ರೀತಿ ಮಾಡಬೇಡಿ. ಏಕೆಂದರೆ ಈ ವಿಚಾರ ಬಂದಾಗ ನೀವು ಲಾಭ ಅಥವಾ ನಷ್ಟದ ಕುರಿತು ಯೋಚಿಸುವುದಿಲ್ಲ. ಇದು ನಿಮಗೆ ಸಮಸ್ಯೆಗಳನ್ನುಂಟು ಮಾಡಬಹುದು. ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಉದ್ಯೋಗದಲ್ಲಿರುವ ಜನರಿಗೆ ಇದು ಒಳ್ಳೆಯ ವಾರ. ವ್ಯಾಪಾರೋದ್ಯಮಿಗಳಿಗೂ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ಗಂಭೀರವಾಗಿ ಕಲಿಯಲಿದ್ದಾರೆ. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮಿಥುನ:ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಸಣ್ಣ ಮಟ್ಟದ ಪ್ರವಾಸಕ್ಕೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವ ಜನರ ನಡುವೆ ಉತ್ತಮ ಸಂವಹನ ನೆಲೆಸಲಿದೆ. ಇದು ನಿಮಗೆ ಸಂತೋಷ ತರಲಿದ್ದು, ನಿಮ್ಮ ಪ್ರೇಮ ಸಂಗಾತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಲಿದ್ದೀರಿ. ಈ ವಾರದಲ್ಲಿ ನೀವು ಪ್ರಯಾಣದಲ್ಲಿ ಸಾಕಷ್ಟು ಕಾಲ ಕಳೆಯಲಿದ್ದೀರಿ. ಇದು ನಿಮಗೆ ನವಚೈತನ್ಯ ನೀಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಅನೇಕ ಸ್ಥಳಗಳಿಗೆ ಪ್ರಯಾಣಿಸಬೇಕಾದೀತು. ಜೊತೆಗೆ ನೀವು ಪ್ರೆಸೆಂಟೇಷನ್‌ ಮಾಡಬೇಕಾದೀತು. ವ್ಯಾಪಾರಿಗಳು ತಮ್ಮಲ್ಲೇ ಭರವಸೆ ಇಟ್ಟು ಮುಂದುವರಿಯಬೇಕು. ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ಪ್ರಯತ್ನದ ಕಾರಣ ಎಲ್ಲವೂ ದೂರಗೊಳ್ಳಲಿವೆ. ವಿದ್ಯಾರ್ಥಿಗಳ ಪಾಲಿಗೆ ಹೊಸತೇನೂ ಇಲ್ಲ. ನಿಮ್ಮ ಅಧ್ಯಯನವನ್ನು ಮುಂದುವರಿಸಿ ಹಾಗೂ ಅದರ ಮೇಲೆ ಗಮನ ಹರಿಸಿ. ಯಾವುದೇ ಗಂಭೀರ ದೈಹಿಕ ಸಮಸ್ಯೆ ನಿಮಗೆ ಎದುರಾಗದು. ಆದರೂ ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕರ್ಕಾಟಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಭಿನ್ನಾಭಿಪ್ರಾಯಗಳ ನಡುವೆಯೂ ಪ್ರಣಯಭರಿತ ಜೀವನವನ್ನು ಸಾಗಿಸಲಿದ್ದಾರೆ. ಯಾರನ್ನಾದರೂ ಪ್ರೀತಿಸುವವರ ಬದುಕಿನ ಕುರಿತು ಹೇಳುವುದಾದರೆ ಅವರ ಪ್ರೇಮ ಜೀವನವು ಅದ್ಭುತವಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ವಾರದ ಆರಂಭದಲ್ಲಿ ನೀವು ಶಕ್ತಿಯುತವಾಗಿ ಹೊರಹೊಮ್ಮಿದರೂ ಏನಾದರೂ ವಿಷಯದ ಕುರಿತು ನಿಮಗೆ ಚಿಂತೆ ಕಾಡಬಹುದು. ವಾರದ ಮಧ್ಯ ಭಾಗವು ನಿಮ್ಮಲ್ಲಿ ಸಂತಸ ತರಬಹುದು. ನಿಮಗೆ ಅದೃಷ್ಟದ ಬೆಂಬಲ ದೊರೆಯಬಹುದು. ಇದರಿಂದಾಗಿ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ ಹಾಗೂ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ವೃದ್ಧಿಸಲಿದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಬಾಸ್‌ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಕೆಲವರು ಸರ್ಕಾರದಿಂದ ಲಾಭವನ್ನು ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಕೆಲಸದ ಕೆಲವು ಹೊಸ ಕ್ಷೇತ್ರಗಳಲ್ಲಿ ನೀವು ಮುನ್ನಡೆ ಸಾಧಿಸಲಿದ್ದೀರಿ ಅಥವಾ ಕೆಲವು ಹೊಸ ಜನರೊಂದಿಗೆ ಹೊಸ ಗುತ್ತಿಗೆಯನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಕಲಿಕೆಯು ಸುಲಭವೆನಿಸಲಿದೆ. ನೀವು ಅಧ್ಯಯನವನ್ನು ಆನಂದಿಸಲಿದ್ದೀರಿ. ಈ ವಾರದಲ್ಲಿ ನಿಮ್ಮ ಮಾನಸಿಕ ಆತಂಕದ ಪರಿಣಾಮವು ನಿಮ್ಮ ಆರೋಗ್ಯದ ಮೇಲೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಧ್ಯಾನದಿಂದ ನಿಮಗೆ ಲಾಭ ಉಂಟಾಗಲಿದೆ. ವಾರದ ಮೊದಲ ದಿನ ಹೊರತುಪಡಿಸಿ ವಾರದ ಆರಂಭದ ಉಳಿದ ದಿನಗಳು ಪ್ರಯಾಣಿಸಲು ಉತ್ತಮ.

ಸಿಂಹ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ ಹಾಗೂ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ವಾರದ ಮಧ್ಯದಲ್ಲಿ ಅತ್ತೆ ಮಾವಂದಿರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೆಲಸದ ಮೇಲೆ ಗಮನ ಹರಿಸಲಿದ್ದೀರಿ. ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಉಂಟಾಗಲಿದೆ. ಸಮುದ್ರ ಮಾರ್ಗದ ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸುವ ಅವಕಾಶಗಳಿವೆ. ವಾರದ ಕೊನೆಯ ದಿನಗಳಲ್ಲಿ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಏನಾದರೂ ಅದ್ಭುತ ಕೆಲಸಕ್ಕೆ ನೀವು ಕೈ ಹಾಕುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ನಿಮಗೆ ಬಡ್ತಿ ಸಿಗಬಹುದು ಮತ್ತು ನಿಮ್ಮ ಕೆಲಸದ ಒತ್ತಡ ಹೆಚ್ಚಾಗಬಹುದು. ನಿಮಗೆ ಹೆಚ್ಚು ಜವಾಬ್ದಾರಿ ಮತ್ತು ಅಧಿಕಾರ ಎರಡೂ ದೊರೆಯಲಿವೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಇದು ಸಕಾಲ. ನೀವು ನಿಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಬಹುದು. ಮಾನಸಿಕವಾಗಿ ಸದೃಢರಾಗಿ ಹೊರಹೊಮ್ಮುವಿರಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕನ್ಯಾ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಮಧ್ಯದ ದಿನಗಳಲ್ಲಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ತರುವುದಕ್ಕಾಗಿ ಎಲ್ಲ ಪ್ರಯತ್ನ ಮಾಡಲಿದ್ದೀರಿ. ನಿಮಗೆ ಇದರ ಫಲಿತಾಂಶ ದೊರೆಯಲಿದೆ. ನಿಮ್ಮ ಜೀವನ ಸಂಗಾತಿ ಸಂತಸ ವ್ಯಕ್ತಪಡಿಸಲಿದ್ದಾರೆ. ಅವರು ಪ್ರತಿ ರೀತಿಯಲ್ಲೂ ನಿಮ್ಮನ್ನು ಸಂತೋಷಪಡಿಸಲು ಯತ್ನಿಸಲಿದ್ದಾರೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಮನಸ್ಸನ್ನು ಧಾರ್ಮಿಕ ಚಟುವಟಿಕೆಗಳಿಗೆ ತಿರುಗಿಸಲಿದ್ದೀರಿ. ನೀವು ನಿಮ್ಮ ಅತ್ತೆ/ಮಾವಂದಿರ ಜೊತೆ ಮಾತನಾಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ಶಾಂತಿಯುತವಾಗಿ ಕೆಲಸ ಮಾಡಬೇಕು. ಸಮಯ ನಿಮಗೆ ಸೂಕ್ತವಾಗಿಲ್ಲ. ಹೀಗಾಗಿ ಕಡಿಮೆ ಮಾತನಾಡಿ. ಯಾವುದೇ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಿ. ವಾರದ ಆರಂಭದಲ್ಲಿ ನಿಮ್ಮ ಎದುರಾಳಿಗಳು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯಾಪಾರಿಗಳು ಲಾಭ ಪಡೆಯಬಹುದು. ನಿಮ್ಮ ಕೆಲಸದಲ್ಲಿ ಬಲ ಕಾಣಿಸಿಕೊಳ್ಳಲಿದೆ. ನೀವು ಹೊಸ ಅಪಾಯಕ್ಕೆ ಮೈಯೊಡ್ಡಿಕೊಳ್ಳಬಹುದು ಹಾಗೂ ದೊಡ್ಡದಾದ ಕೆಲಸ ಮಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಪರಿಣತಿ ಸಾಧಿಸಲಿದ್ದಾರೆ. ತಮ್ಮ ಕೆಲಸವನ್ನು ಮುಂದುವರಿಸಲು ಅವರಿಗೆ ಯಾವುದೇ ಸಮಸ್ಯೆ ಉಂಟಾಗದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಎದುರಿಸಬಹುದು. ಆದರೂ ಧ್ಯಾನಕ್ಕೆ ಅವರು ಸಂಪೂರ್ಣ ಒತ್ತು ನೀಡಲಿದ್ದಾರೆ. ಇದು ಅವರಿಗೆ ಲಾಭ ತಂದು ಕೊಡಲಿದೆ. ನಿಮ್ಮ ಆರೋಗ್ಯವು ಸಾಮಾನ್ಯ ಮಟ್ಟದಲ್ಲಿರಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ತುಲಾ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವೈವಾಹಿಕ ಬದುಕಿನಲ್ಲಿರುವ ಒತ್ತಡವು ಕಡಿಮೆಯಾಗಲಿದೆ. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನೀವು ಸಾಕಷ್ಟು ಸಂವಹನ ನಡೆಸಲಿದ್ದೀರಿ. ಪರಸ್ಪರ ಅರಿತುಕೊಳ್ಳುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ವಾರದ ಮಧ್ಯ ಭಾಗದಲ್ಲಿ ನಿಮ್ಮ ಚಿಂತೆ ಹೆಚ್ಚಬಹುದು. ಹೀಗಾಗಿ ಸರಿಯಾಗಿ ಯೋಜನೆ ರೂಪಿಸಿ. ನೀವು ಎಚ್ಚರಿಕೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ತಮ್ಮ ಕೆಲಸದಲ್ಲಿ ವೇಗ ದೊರೆಯಲಿದೆ. ಇದು ನಿಮ್ಮ ಉತ್ಸಾಹವನ್ನು ಮತ್ತೆ ವಾಪಸ್‌ ತರಲಿದೆ. ಕೆಲಸದಲ್ಲಿ ವೇಗದಿಂದ ನೀವು ಮುಂದುವರಿಯಲಿದ್ದೀರಿ. ಲಾಭ ದೊರೆಯಲಿದೆ ಹಾಗೂ ಆದಾಯವು ಚೆನ್ನಾಗಿರಲಿದೆ. ಖರ್ಚುವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ ಹಾಗೂ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ತೀರ್ಪು ನಿಮ್ಮ ಪರವಾಗಿ ಹೊರಬೀಳಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ ಎದೆಯಲ್ಲಿ ಬಿಗಿತ ಅಥವಾ ಶೀತದ ಸಮಸ್ಯೆಗಳು ಉಂಟಾಗಬಹುದು. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಾರದ ಕೊನೆಯ ದಿನಗಳಲ್ಲಿ ಪ್ರಯಾಣಿಸಲೇಬೇಡಿ. ಅಪಘಾತದ ಸಾಧ್ಯತೆ ಇದೆ.

ವೃಶ್ಚಿಕ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಕುಟುಂಬದ ಜವಾಬ್ದಾರಿಗೆ ನೀವು ಸಮಯ ನೀಡಬೇಕು. ನಿಮ್ಮ ಕುಟುಂಬಕ್ಕೆ ನಿಮ್ಮ ಸಮಯದ ಅಗತ್ಯವಿದೆ. ಆ ಅಗತ್ಯತೆಯನ್ನು ನೀವು ಪೂರೈಸಲಿದ್ದೀರಿ. ಅವರ ಕಣ್ಣಿನಲ್ಲಿ ನಿಮ್ಮ ಮೌಲ್ಯ ಹೆಚ್ಚಲಿದೆ ಹಾಗೂ ಇದು ನಿಮಗೆ ತೃಪ್ತಿ ನೀಡಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಒಂದಷ್ಟು ಏರುಪೇರು ಎದುರಿಸಲಿದೆ. ಏನಾದರೂ ವಿಷಯದ ಕುರಿತು ಜೀವನ ಸಂಗಾತಿಯು ಕೋಪಗೊಳ್ಳಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ವ್ಯಾಪಾರಿಗಳ ಪಾಲಿಗೆ ಇದು ಉತ್ತಮ ವಾರ. ಅವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾದೀತು. ಈ ಪ್ರವಾಸ ನಿಮ್ಮ ಪಾಲಿಗೆ ಲಾಭದಾಯಕ ಎನಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ ಎನಿಸಲಿದೆ. ಸದ್ಯಕ್ಕೆ, ನಿಮ್ಮ ಪಾಲಿನ ವರ್ಗಾವಣೆಯಾಗಲಿದೆ. ಆದರೆ ಈ ವರ್ಗಾವಣೆಯು ನಿಮಗೆ ಒಂದಷ್ಟು ಒಳ್ಳೆಯ ಕೆಲಸವನ್ನು ತರಲಿದೆ. ಇದನ್ನು ಸಂತಸದಿಂದಲೇ ಸ್ವಾಗತಿಸಿ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ರೋಗ ಉಂಟಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ವಾರದ ಆರಂಭಿಕ ಭಾಗವು ಪ್ರಯಾಣಕ್ಕೆ ಅತ್ಯುತ್ತಮ.

ಧನು: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯ ಒಡಹುಟ್ಟಿದವರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿನ ಒತ್ತಡ ಕಡಿಮೆಯಾಗಲಿದೆ. ಇದು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಉತ್ತಮ ವಾರ ಎನಿಸಲಿದೆ. ದೈಹಿಕ ಶ್ರಮದ ವಿಷಯದಲ್ಲಿ ನೀವು ಹಿಂದೆ ಬೀಳುವುದಿಲ್ಲ. ವ್ಯಾಪಾರಿಗಳ ವಿಚಾರದಲ್ಲಿ ಮಾತನಾಡುವುದಾದರೆ, ತಮ್ಮ ಕಠಿಣ ಶ್ರಮದ ಮೂಲಕ ತಮ್ಮ ವ್ಯಾಪಾರದಲ್ಲಿ ಲಾಭವನ್ನು ಹೆಚ್ಚಿಸಲು ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿರುವವರು ಮುಕ್ತವಾಗಿ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಇದು ನಿಮ್ಮ ಕೆಲಸದಲ್ಲಿ ತೃಪ್ತಿ ನೀಡಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಅವರು ಸದ್ಯವೇ ಸಾಕಷ್ಟು ಕಲಿಯಲಿದ್ದಾರೆ. ಅವರು ಕಠಿಣ ಶ್ರಮ ಪಡಲಿದ್ದಾರೆ. ಇದರಿಂದಾಗಿ ಅವರಿಗೆ ಸ್ಪರ್ಧೆಯಲ್ಲಿ ಯಶಸ್ಸು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ಯಾವುದೇ ದೊಡ್ಡ ಕಾಯಿಲೆ ನಿಮ್ಮನ್ನು ಕಾಡುವುದಿಲ್ಲ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಾರದ ಕೊನೆಯ ದಿನಗಳಲ್ಲಿ ಯಾವುದೇ ದೊಡ್ಡ ಪ್ರವಾಸಕ್ಕೆ ಕೈ ಹಾಕಬೇಡಿ.

ಮಕರ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಕೌಟುಂಬಿಕ ಬದುಕು ಸಾಗಿಸುತ್ತಿರುವ ವಿವಾಹಿತ ವ್ಯಕ್ತಿಗಳ ಪಾಲಿಗೆ ಇದು ಸಕಾಲ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಪ್ರೇಮ ಸಂಗಾತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಲಿದ್ದಾರೆ. ಅವರು ತುಂಬಾ ಸಂತಸ ವ್ಯಕ್ತಪಡಿಸಲಿದ್ದು ಇದು ನಿಮ್ಮ ಸಂತಸಕ್ಕೂ ಕಾರಣವೆನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಸಂಬಂಧದಲ್ಲಿ ಪ್ರೇಮವನ್ನು ಹೆಚ್ಚಿಸಲು ನೀವು ಯತ್ನಿಸಬೇಕು. ನಿಮ್ಮ ಸಂಬಂಧದಲ್ಲಿರುವ ಜಡತೆಯನ್ನು ಮೀರಲು ಯತ್ನಿಸಿ. ಅಲ್ಲದೆ ನಿಮ್ಮ ಗೆಳೆಯರಿಂದ ನೀವು ಲಾಭ ಪಡೆಯಲಿದ್ದೀರಿ. ಅವರು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ಪ್ರಯಾಣಿಸುವುದರಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಕ್ಷಿಪ್ರವಾಗಿ ಪ್ರಗತಿ ಉಂಟಾಗಲಿದೆ. ನಿಮ್ಮ ಕೌಶಲ್ಯ ಮತ್ತು ಬುದ್ಧಿಮತ್ತೆಯು ನಿಮ್ಮ ನೆರವಿಗೆ ಬರಲಿದೆ. ಉದ್ಯೋಗದಲ್ಲಿರುವ ಜನರು ಕೆಲಸದಲ್ಲಿ ಉತ್ತಮ ಫಲಿತಾಂಶ ಗಳಿಸಲಿದ್ದಾರೆ. ನಿಮ್ಮ ವಿಶ್ವಾಸಾರ್ಹತೆಯು ಬೆಳೆಯಲಿದೆ ಹಾಗೂ ಈ ಕುರಿತು ನಿಮ್ಮ ಮಿತ್ರರು ಸಂತಸ ವ್ಯಕ್ತಪಡಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಅಡಚಣೆ ಎದುರಿಸಲಿದ್ದಾರೆ. ಇದನ್ನು ದೂರ ಮಾಡಲು ನೀವು ಯತ್ನಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಸಮಸ್ಯೆ ಉಂಟಾಗದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಪ್ರಯಾಣಕ್ಕೆ ಇದು ಉತ್ತಮ ವಾರ.

ಕುಂಭ: ಆರಂಭದಿಂದಲೇ ಇದು ಉತ್ತಮ ವಾರ ಎನಿಸಲಿದೆ. ಆದರೂ, ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಈ ಕಾರಣದಿಂದಾಗಿ ನಿಮ್ಮ ಕುಟುಂಬದಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ಧಾರ್ಮಿಕ ಪ್ರಯಾಣ ಮಾಡಲು ನಿಮಗೆ ಅವಕಾಶ ದೊರೆಯಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ. ವಿವಾಹಿತ ವ್ಯಕ್ತಿಗಳು ಸಂತಸದ ಬದುಕನ್ನು ಸಾಗಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ವಾರದ ಆರಂಭಿಕ ದಿನಗಳಲ್ಲಿ ನೀವು ದೊಡ್ಡ ಮೊತ್ತವನ್ನು ಪಡೆಯಬಹುದು. ಇದನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ಹೊಸ ಹೂಡಿಕೆ ಆಯ್ಕೆಗಳ ಕುರಿತು ಸಹ ನೀವು ಯೋಚಿಸಬಹುದು. ದೂರದ ಪ್ರದೇಶಗಳಲ್ಲಿ ಅಥವಾ ರಾಜ್ಯಗಳಲ್ಲಿ ವ್ಯವಹಾರ ನಡೆಸುವುದರಿಂದ ನಿಮಗೆ ಉತ್ತಮ ಲಾಭ ದೊರೆಯಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಉದ್ಯೋಗದಲ್ಲಿರುವವರ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕದಾದ ಫಲ ನಿಮಗೆ ದೊರೆಯುವ ಕಾರಣ ನಿಮಗೆ ಸಂತಸ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅಡ್ಡಿ ಆತಂಕ ಉಂಟಾಗದು. ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ ಹಾಗೂ ಆಹಾರದಲ್ಲಿ ನಿರಂತರತೆಯನ್ನು ಕಾಪಾಡಿ.

ಮೀನ:ನಿಮ್ಮ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ಆದರೆ ವಾರದ ಆರಂಭದಲ್ಲಿ ನೀವು ಭಾವನಾತ್ಮಕವಾಗಿ ವರ್ತಿಸಲಿದ್ದೀರಿ. ಹಳೆಯ ನೆನಪುಗಳನ್ನು ನೆನೆದು ಕಣ್ಣೀರು ಸುರಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಪ್ರಣಯವು ಹೆಚ್ಚಲಿದೆ. ಪರಸ್ಪರ ಪ್ರೇಮ ಮತ್ತು ಆಕರ್ಷಣೆಯು ಗಟ್ಟಿಗೊಳ್ಳಲಿದೆ ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ತರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಸಾಕಷ್ಟು ಪ್ರಣಯ ತೋರಲಿದ್ದಾರೆ. ನಿಮ್ಮ ಪ್ರಣಯ ಸಂಗಾತಿಯು ಸಾಕಷ್ಟು ಬೇಡಿಕೆ ತೋರಬಹುದು. ನಿಮ್ಮ ಬುದ್ಧಿಮತ್ತೆಯು ನಿಮ್ಮನ್ನು ಬೆಂಬಲಿಸಲಿದೆ. ನಿಮ್ಮ ಜ್ಞಾನದ ಪ್ರಯೋಜನ ಪಡೆಯುವ ಮೂಲಕ ಕೆಲಸದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ನೀವು ಕಠಿಣ ಶ್ರಮ ಪಡಬೇಕು ಮತ್ತು ನಿಮ್ಮ ಹಿರಿಯರನ್ನು ಸಂತಸದಿಂದ ನೋಡಿಕೊಳ್ಳಲಿದ್ದೀರಿ. ವ್ಯಾಪಾರಿಗಳ ಪಾಲಿಗೆ ಈ ವಾರವು ಸ್ವಲ್ಪ ದುಬಾರಿ ಎನಿಸಲಿದೆ. ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಹಣ ಖರ್ಚು ಮಾಡಬೇಕಾದೀತು. ದೊಡ್ಡ ಕಂಪನಿಯನ್ನು ಸೇರಿಕೊಳ್ಳಲು ನಿಮಗೆ ಅವಕಾಶ ದೊರೆಯಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ದೊರೆಯಬಹುದು. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಕರಿದ ಆಹಾರದಿಂದ ದೂರ ನಿಲ್ಲುವುದು ಒಳ್ಳೆಯದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

(ಇದನ್ನೂ ಓದಿ: ಭಾನುವಾರದ ಭವಿಷ್ಯ: ಇಂದು ಹಿನ್ನಡೆ ಮತ್ತು ಸವಾಲು ಎದುರಿಸಲು ಸಜ್ಜಾಗಿರಿ)

ABOUT THE AUTHOR

...view details