ಮೇಷ: ಈ ವಾರವು ಮಧ್ಯಮ ಪ್ರಮಾಣದ ಲಾಭವನ್ನು ತಂದು ಕೊಡಲಿದೆ. ನೀವು ತೀರಾ ವಿರುದ್ಧವಾದ ವರ್ತನೆಯನ್ನು ಮೈಗೂಡಿಸಿಕೊಳ್ಳಲಿದ್ದು, ಇದು ಗೊಂದಲವನ್ನುಂಟು ಮಾಡಲಿದೆ. ನಿಮ್ಮಲ್ಲಿ ಹೆಚ್ಚಿನವರಿಗೆ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟಕರವಾಗಲಿದೆ. ಇದಕ್ಕೆ ಒಂದಷ್ಟು ಕಾಲ ತಡೆಯನ್ನುಂಟು ಮಾಡಿದರೆ ಒಳ್ಳೆಯದು. ಈ ಕಾಲದಲ್ಲಿ ಯಾವುದೇ ಕೆಲಸವನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ ಎನಿಸಲಿದೆ. ಕೆಲವರು ತಮ್ಮ ವ್ಯವಹಾರದಲ್ಲಿ ಏರುಪೇರು ಎದುರಿಸಬಹುದು. ಮತ್ತು ಕೆಲವರು ಒಂದಷ್ಟು ಅಡೆತಡೆಗಳನ್ನು ಎದುರಿಸಬಹುದು. ಸೇವೆಯಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಲಾಭದಾಯಕ ಎನಿಸಲಿದೆ. ನಿಮ್ಮ ಪ್ರಯತ್ನಗಳಿಗೆ ತಕ್ಕುದಾದ ಫಲಿತಾಂಶ ನಿಮಗೆ ದೊರೆಯಲಿದೆ. ನಿಮ್ಮ ಆದಾಯದಲ್ಲಿ ವಿಶೇಷ ಹೆಚ್ಚಳ ಉಂಟಾಗಲಿದೆ. ವಿವಾಹಿತ ಜೋಡಿಗಳು ಬದುಕಿನಲ್ಲಿ ಒಂದಷ್ಟು ಸವಾಲುಗಳನ್ನು ಎದುರಿಸಲಿದ್ದಾರೆ. ಇದನ್ನು ಎಚ್ಚರಿಕೆಯಿಂದ ನಿಭಾಯಿಸಲು ಸಲಹೆ ನೀಡಲಾಗಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೆಲವರಿಗೆ ಅಧಿಕ ಜ್ವರ ಅಥವಾ ತಲೆನೋವು ಉಂಟಾಗಬಹುದು. ವಾರದ ಕೊನೆಯ ದಿನಗಳು ಚೆನ್ನಾಗಿರಲಿವೆ.
ವೃಷಭ:ಈ ವಾರವು ನಿಮಗೆ ಶುಭ ಫಲ ತಂದು ಕೊಡಲಿದೆ. ಆದರೆ ಖರ್ಚುವೆಚ್ಚಗಳು ನಿಮ್ಮ ಚಿಂತೆಗೆ ಕಾರಣವಾಗಬಹುದು. ಇದು ನಿಮ್ಮ ಬೇಸರಕ್ಕೆ ಕಾರಣವಾಗಬಹುದು. ಹಣ ಗಳಿಸುವುದು ಹೇಗೆ ಎನ್ನುವುದರ ಕುರಿತು ನೀವು ಯೋಚಿಸಲಿದ್ದೀರಿ. ಹೊಸ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು ಸಾಕಷ್ಟು ಕಾಳಜಿ ವಹಿಸಿ. ಏಕೆಂದರೆ ಇದು ಲಾಭದಾಯಕವಾಗಿ ಪರಿಣಮಿಸದು. ವಾರದ ಮಧ್ಯದಲ್ಲಿ ನೀವು ಮತ್ತೆ ಆತ್ಮವಿಶ್ವಾಸದಿಂದ ತುಂಬಲಿದ್ದು, ನಿಮ್ಮ ವ್ಯವಹಾರವನ್ನು ವೃದ್ಧಿಸಲು ನೀವು ಹೊಸ ವಿಧಾನಗಳನ್ನು ಕಂಡುಹಿಡಿಯಲಿದ್ದೀರಿ. ಸಣ್ಣ ಪ್ರದೇಶಗಳು ಮತ್ತು ರಾಜ್ಯಗಳಲ್ಲಿ ಕೈಗೊಂಡ ಕೆಲಸಗಳಿಂದ ಒಳ್ಳೆಯ ಲಾಭ ಬರಲಿದೆ. ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು ನೀವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯದ ಕುರಿತು ಸ್ವಲ್ಪ ಕಾಳಜಿ ವಹಿಸಿ. ನಿಮ್ಮ ಕಾರು ಚಲಾಯಿಸುವಾಗ ಸಾಕಷ್ಟು ಜಾಗರೂಕತೆ ವಹಿಸಿ. ಉದ್ಯೋಗದಲ್ಲಿರುವ ಜನರಿಗೆ ಇದು ಒಳ್ಳೆಯ ವಾರ. ನಿಮ್ಮಲ್ಲಿ ಕೆಲವರು ನಿಮ್ಮ ಸಹೋದ್ಯೋಗಿಗಳ ಕುರಿತು ಆಸಕ್ತಿ ತೋರಬಹುದು. ಆದರೆ ಅಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮ ಮನೆಯ ವಾತಾವರಣ ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮಲ್ಲಿ ಕೆಲವರು ನಿಮ್ಮ ಸಂಗಾತಿಗೆ ವಿವಾಹದ ಪ್ರಸ್ತಾಪವನ್ನು ಇಡಬಹುದು. ನೀವು ವಿದೇಶಕ್ಕೆ ಹೋಗುವ ಕನಸು ಕಾಣಲಿದ್ದೀರಿ. ವಿವಾಹಿತ ವ್ಯಕ್ತಿಗಳಿಗೆ ಇದು ಸಾಮಾನ್ಯ ವಾರವೆನಿಸಲಿದೆ. ಈ ವಾರವು ಯಾವುದೇ ಪ್ರವಾಸಕ್ಕೆ ಸೂಕ್ತವಲ್ಲ. ವಿದ್ಯಾರ್ಥಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ.
ಮಿಥುನ:ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ವಾರದ ಮಧ್ಯದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ವಾರದ ಕೊನೆಗೆ ಎಲ್ಲವೂ ಸರಿ ಹೋಗಲಿದೆ. ವಿವಾಹಿತ ವ್ಯಕ್ತಿಗಳಿಗೆ ಇದು ಉತ್ತಮ ವಾರವೆನಿಸಲಿದೆ. ನೀವು ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವ ಜನರು ಏರುಪೇರನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿರುವ ಜನರು ಉತ್ತಮ ಲಾಭ ಗಳಿಸಲಿದ್ದಾರೆ. ಯಾವುದಾದರೂ ಕಾರಣಕ್ಕೆ ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗೊಳ್ಳಬಹುದು. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಲಾಭ ಸಿಗಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಅಲ್ಲದೆ ವಿದ್ಯಾರ್ಥಿಗಳು ಸಾಕಷ್ಟು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಕರ್ಕಾಟಕ:ಈ ವಾರದಲ್ಲಿ ಹೊಸ ಬದಲಾವಣೆಗಳು ನಿಮ್ಮನ್ನು ಸ್ವಾಗತಿಸಲಿವೆ. ಈ ಬದಲಾವಣೆಗಳು ನಿಮ್ಮ ವೈಯಕ್ತಿಕ ಬದುಕಿನಲ್ಲಿ ಬದಲಾವಣೆ ತರಲಿವೆ. ನಿಮ್ಮ ಕುಟುಂಬದ ಹಿರಿಯರು ಕಾಯಿಲೆಗೆ ತುತ್ತಾಗಬಹುದು. ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಒಂದಷ್ಟು ಸವಾಲುಗಳನ್ನು ಎದುರಿಸಬೇಕಾದೀತು. ಇವುಗಳನ್ನು ಎದುರಿಸಲು ನೀವು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ವಿವಾಹಿತ ಜೋಡಿಗಳಿಗೆ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ನೀವು ನಿಷ್ಠೆಯನ್ನು ತೋರಲಿದ್ದು ಇದು ನಿಮ್ಮ ಸಂಗಾತಿಗೆ ಸಂತಸ ನೀಡಲಿದೆ. ಪ್ರೇಮ ಸಂಬಂಧದಲ್ಲಿರುವವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ನಿಮ್ಮ ಸಂಬಂಧದಲ್ಲಿ ಸುಂದರ ಕ್ಷಣಗಳನ್ನು ಆನಂದಿಸಲಿದ್ದೀರಿ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ಪ್ರಗತಿದಾಯಕ ವಾರ ಎನಿಸಲಿದೆ. ಲಾಭದಲ್ಲಿ ಹೆಚ್ಚಳ ಉಂಟಾಗಲಿದ್ದು ನಿಮ್ಮ ಸಮಸ್ಯೆಗಳಿಗೆ ಇಳಿತ ಉಂಟಾಗಲಿದೆ. ನಿಮ್ಮ ಕೆಲಸವನ್ನು ನೀವು ಸುಲಭದಲ್ಲಿ ಮುಗಿಸಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಕಲಿಕೆಯು ಸುಲಭವೆನಿಸಲಿದೆ. ಏಕಾಗ್ರತೆ ಮತ್ತು ಪರಸ್ಪರ ಆಕರ್ಷಣೆಯಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ನಡೆಸಲಿದ್ದಾರೆ ಹಾಗೂ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಮಧ್ಯದ ದಿನಗಳು ಪ್ರಯಾಣಿಸಲು ಅನುಕೂಲಕರ.
ಸಿಂಹ:ಈ ವಾರವು ಸಾಮಾನ್ಯ ಫಲಿತಾಂಶ ತರಲಿದೆ. ನಿಮ್ಮಲ್ಲಿ ಕೆಲವು ಹಳೆಯ ಮಿತ್ರರೊಂದಿಗೆ ಮಾತನಾಡಲಿದ್ದು, ಹಳೆಯ ನೆನಪುಗಳನ್ನು ಮೆಲುಕು ಹಾಕಲಿದ್ದೀರಿ. ನೀವು ಆನಂದದಿಂದ ಇರಲಿದ್ದೀರಿ. ನೀವು ಸಾಕಷ್ಟು ಉತ್ಸಾಹದಿಂದ ಕೆಲಸವನ್ನು ಮಾಡಲಿದ್ದೀರಿ. ಇದರಿಂದಾಗಿ ನಿಮ್ಮ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ. ಹಳೆಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಪ್ರಯತ್ನದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ಪ್ರಗತಿದಾಯಕ ವಾರ ಎನಿಸಲಿದೆ. ನಿಮ್ಮ ಕೆಲಸವನ್ನು ಹೆಚ್ಚಿಸುವ ಕೊಡುಗೆಯನ್ನು ನೀವು ಉಳಿಸಿಕೊಳ್ಳಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಸಾಕಷ್ಟು ಪ್ರೇಮ ಇರಲಿದೆ. ಅಲ್ಲದೆ ನೀವು ಪರಸ್ಪರ ಸಾಮಿಪ್ಯತೆ ಸಾಧಿಸಲಿದ್ದೀರಿ. ನಿಮ್ಮ ನಡುವಿನ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರವೆನಿಸಲಿದೆ. ಆರೋಗ್ಯದ ವಿಚಾರದಲ್ಲಿ ಇದು ಉತ್ತಮ ವಾರವೆನಿಸಲಿದೆ. ಅನೇಕರು ಕೆಲಸದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಪ್ರಯೋಜನ ಪಡೆಯಲಿದ್ದಾರೆ. ಅನೇಕರಿಗೆ ಪ್ರಯಾಣಿಸಲು ಇದು ಸೂಕ್ತ ಸಮಯ.
ಕನ್ಯಾ:ಈ ವಾರವು ನಿಮಗೆ ಸರಾಸರಿ ಫಲಿತಾಂಶವನ್ನು ತಂದು ಕೊಡಲಿದೆ. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ನೀವು ಕಾಯಿಲೆಗೆ ತುತ್ತಾಗಬಹುದು. ವಿವಾಹಿತ ವ್ಯಕ್ತಿಗಳು ಈ ವಾರವನ್ನು ಆನಂದಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿನ ಪ್ರೇಮವು ವೃದ್ಧಿಯಾಗಲಿದೆ. ಅಲ್ಲದೆ ನೀವು ಅಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲಿದ್ದೀರಿ. ನಿಮ್ಮ ಸಂಗಾತಿಯು ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ತೋರಬಹುದು. ಅಲ್ಲದೆ ಅವರು ನಿಮಗೆ ಉತ್ತಮ ಸಲಹೆ ನೀಡಬಹುದು. ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ತಿರಸ್ಕಾರ ಭಾವನೆ ಉಂಟಾಗಬಹುದು. ಈ ಕಾರಣಕ್ಕಾಗಿ ನೀವು ಒಟ್ಟಿಗೆ ಸಮಯ ಕಳೆಯಬೇಕು. ಉದ್ಯೋಗದಲ್ಲಿರುವ ವೃತ್ತಿಪರರು ಈ ವಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕೆಲವರು ನಿಮ್ಮ ಕುಂದುಕೊರತೆಗಳ ಲಾಭ ಪಡೆದು ನಿಮ್ಮ ವಿರುದ್ಧ ಪಿತೂರಿ ಹೂಡುವ ಸಾಧ್ಯತೆ ಇದೆ. ಹೀಗಾಗಿ ನೀವು ಎಚ್ಚರಿಕೆಯಿಂದ ವ್ಯವಹರಿಸಲು ಸಲಹೆ ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವೊಂದು ಅಡಚಣೆಗಳನ್ನು ಎದುರಿಸುವ ಸಾಧ್ಯತೆ ಇದೆ. ನೀವು ಸ್ಪರ್ಧೆಗಳಲ್ಲಿ ಯಶಸ್ಸು ಗಳಿಸಲಿದ್ದೀರಿ. ವಾರದ ಮಧ್ಯದ ದಿನಗಳು ಪ್ರಯಾಣಿಸಲು ಅನುಕೂಲಕರ.
ತುಲಾ: ಈ ವಾರವು ಸಾಮಾನ್ಯ ಫಲಿತಾಂಶ ತರಲಿದೆ. ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಸಂದೇಹಗಳು ಉಂಟಾಗಬಹುದು. ನಿಮ್ಮ ಆತ್ಮೀಯರ ಜೊತೆ ಈ ಸಂದೇಹಗಳ ಕುರಿತು ಚರ್ಚಿಸಿ ಇದನ್ನು ನಿವಾರಿಸಿ. ಇಲ್ಲದಿದ್ದರೆ ನೀವು ಸವಾಲುಗಳನ್ನು ಎದುರಿಸಬೇಕಾದೀತು. ನಿಮ್ಮ ಮೇಲೆಯೇ ಗಮನ ಕೇಂದ್ರೀಕರಿಸುವ ಬದಲಿಗೆ ನೀವು ಅನಗತ್ಯ ವಿಚಾರಗಳಿಗಾಗಿ ಸಮಯ ಹಾಳು ಮಾಡುವ ಸಾಧ್ಯತೆ ಇದೆ. ಇದು ನಿಮ್ಮ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಈ ಫಲಿತಾಂಶವು ವ್ಯಾಪಾರೋದ್ಯಮಿಗಳಿಗೆ ಸಾಕಷ್ಟು ಲಾಭದಾಯಕ ಎನಿಸಲಿದೆ. ನಿಮ್ಮ ಕೆಲಸದಲ್ಲಿ ನೀವು ವೇಗವಾಗಿ ಮುಂದುವರಿಯಲಿದ್ದೀರಿ. ಅಲ್ಲದೆ ಕೆಲವೊಂದು ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ಸಂಬಂಧದಲ್ಲಿ ನೀವು ಹೆಚ್ಚು ಕಾಳಜಿ ಮತ್ತು ಪ್ರೀತಿಯನ್ನು ತೋರಲಿದ್ದೀರಿ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದರೆ ಕೆಲವರು ತಮ್ಮ ಹಾದಿಯನ್ನು ಕಳೆದುಕೊಳ್ಳಬಹುದು. ವಾರದ ಕೊನೆಯ ದಿನವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ವೃಶ್ಚಿಕ:ಇದು ನಿಮ್ಮ ಪಾಲಿಗೆ ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮಲ್ಲಿ ಒತ್ತಡ ಉಂಟು ಮಾಡಬಹುದು. ಅದೇ ರೀತಿ ನಿಮ್ಮ ಚಿಂತೆಗೆ ಕಾರಣವಾಗಿರುವ ವಿಚಾರಗಳನ್ನು ನೀವು ಅರಿಯದೆ ಇರಬಹುದು. ನೀವು ಒಂದು ಮೂಲೆಯಲ್ಲಿ ಕುಳಿತು ಅನೇಕ ಗಂಟೆಗಳ ಕಾಲ ಧ್ಯಾನದಲ್ಲಿ ಮುಳುಗಿ ಹೋಗುವ ಸಾಧ್ಯತೆ ಇದೆ. ನೀವು ಮಾನಸಿಕವಾಗಿ ಉಪಸ್ಥಿತರಾಗಿಲ್ಲ ಎಂದು ನಿಮ್ಮ ಸುತ್ತಮುತ್ತಲಿನ ಜನರು ಭಾವಿಸಬಹುದು. ವಿವಾಹಿತ ಜೋಡಿಗಳಿಗೆ ಈ ವಾರವು ಒಳ್ಳೆಯದು. ಪ್ರೇಮ ಸಂಬಂಧದಲ್ಲಿರುವವರಿಗೂ ಇದು ಒಳ್ಳೆಯ ವಾರ. ನೀವು ಸಂತಸದ ಬದುಕನ್ನು ಸಾಗಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಬಹುದು. ಈ ಉಡುಗೊರೆಯು ನಿಮ್ಮ ಪ್ರೀತಿ ಪಾತ್ರರ ಮೊಗದಲ್ಲಿ ಸಂತಸದ ನಗು ತರಿಸಬಹುದು. ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮದ ಕಾರಣ ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕಠಿಣ ಶ್ರಮವು ನಿಮ್ಮ ಪರವಾಗಿ ನಿಲ್ಲಲಿದೆ. ಇದರ ಪರಿಣಾಮವಾಗಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.
ಧನು:ಈ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯವು ಚೆನ್ನಾಗಿರಲಿದೆ. ಆದರೆ ಏನಾದರೂ ಚಿಂತೆ ನಿಮ್ಮನ್ನು ಕಾಡಬಹುದು. ನಿಮ್ಮ ಮಗುವಿನ ಕುರಿತ ಕಾಳಜಿಯು ನಿಮ್ಮನ್ನು ಬಾಧಿಸಬಹುದು. ನಿಮ್ಮ ಮಿತ್ರರ ಕುರಿತು ಕಾಳಜಿ ವಹಿಸಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ. ಅಲ್ಲದೆ ನಿಮ್ಮ ವೈವಾಹಿಕ ಜೀವನವು ಅಸ್ಥಿರತೆಯಿಂದ ಹೊರ ಬರಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅನಿಶ್ಚಿತತೆಯಿಂದ ಕೂಡಿರಲಿದೆ. ನಿಮ್ಮ ಸಂಬಂಧದಲ್ಲಿ ಒಂದಷ್ಟು ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ವ್ಯವಹರಿಸಿ. ಏಕೆಂದರೆ ತಪ್ಪು ಗ್ರಹಿಕೆಯ ಕಾರಣ ನಿಮ್ಮ ಸಂಬಂಧವನ್ನು ಮುರಿದುಕೊಳ್ಳಬೇಕಾದ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರ ಪಾಲಿಗೆ ಈ ವಾರವು ಸಾಕಷ್ಟು ಏರುಪೇರಿನಿಂದ ಕೂಡಿರಲಿದೆ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡಬೇಕು. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯುಬಹುದಾಗಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.
ಮಕರ:ನಿಮ್ಮ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ನೀವು ಕೆಲಸದ ಮೇಲೆ ಗಮನ ನೀಡಲಿದ್ದು ಇದರಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಕೆಲಸದ ಕುರಿತು ಆತ್ಮವಿಶ್ವಾಸ ತೋರಲಿದ್ದು, ನಿಮ್ಮ ಬಾಸ್ ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ಕಾರ್ಯಯೋಜನೆಗಳು ಮೆಚ್ಚುಗೆ ಪಡೆಯುವುದರ ಜೊತೆಗೆ ಉತ್ತಮ ಲಾಭ ತಂದು ಕೊಡಲಿವೆ. ಅಲ್ಲದೆ ನಿಮ್ಮ ವ್ಯವಹಾರದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಕಾರ್ಯಯೋಜನೆಗಳು ನಿಮಗೆ ಉತ್ತಮ ಲಾಭ ತಂದು ಕೊಡಲಿವೆ. ವಿವಾಹಿತ ವ್ಯಕ್ತಿಗಳ ಪಾಲಿಗೆ ಸಂತಸದ ವಾತಾವರಣ ನೆಲೆಸಲಿದೆ. ಅಲ್ಲದೆ ತಮ್ಮ ಸಂಗಾತಿ ಜೊತೆಗಿನ ವಿವಾದವನ್ನು ಅವರು ಕೊನೆಗೊಳಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರಿಗೂ ಇದು ಒಳ್ಳೆಯ ವಾರ. ನಿಮ್ಮಲ್ಲಿ ಕೆಲವರು ನಿಮ್ಮ ಸಂಗಾತಿಯ ಕುಟುಂಬದ ಸದಸ್ಯರೊಂದಿಗೆ ರಾತ್ರಿಯ ಊಟಕ್ಕೆ ಯೋಜನೆ ರೂಪಿಸಬಹುದು. ಇದರ ಕಾರಣ ಭಿನ್ನಾಭಿಪ್ರಾಯವು ದೂರವಾಗಿ ಸಂಬಂಧ ಗಟ್ಟಿಗೊಳ್ಳಬಹುದು. ಮನೆಯಲ್ಲಿ ಒತ್ತಡ ಉಂಟಾಗಬಹುದು ಹಾಗೂ ಕುಟುಂಬದ ಹಿರಿಯ ಸದಸ್ಯರು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕಾದರೆ ಕಠಿಣ ಶ್ರಮ ಪಡಬೇಕಾದೀತು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.
ಕುಂಭ:ಉತ್ತಮ ವಾರವೊಂದು ನಿಮ್ಮನ್ನು ಸ್ವಾಗತಿಸಲು ಸಿದ್ಧಗೊಂಡಿದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಅನೇಕರು ಪ್ರಯಾಣಿಸಬಹುದು. ಗ್ರಹಗಳ ಪ್ರಕಾರ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ವಿವಾಹಿತ ಜೋಡಿಗಳು ತಮ್ಮ ಸಂಬಂಧದಲ್ಲಿ ಪ್ರಣಯ ವ್ಯಕ್ತಪಡಿಸಲಿದ್ದು, ತಮ್ಮ ಜೀವನ ಸಂಗಾತಿಗೆ ಪ್ರೀತಿಯನ್ನು ಹಂಚಲಿದ್ದಾರೆ. ಅವರ ಪಕ್ಕ ಹೋಗಬೇಕಾದರೆ ನೀವು ಬಟ್ಟೆಬರೆಯಂತಹ ಯಾವುದಾದರೂ ಉಡುಗೊರೆಯನ್ನು ತರಬೇಕು. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದಾರೆ. ಅಲ್ಲದೆ ತಮ್ಮ ಸಂಗಾತಿಯ ಜೊತೆಗೆ ವಿಹಾರಕ್ಕಾಗಿ ಹೊರಗೆ ಹೋಗಲು ಯೋಜಿಸಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಧನಾತ್ಮಕ ವಾತಾವರಣ ನೆಲೆಸಲಿದೆ. ಅಲ್ಲದೆ ಅವರು ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ವಾರ. ಏಕೆಂದರೆ ನಿಮ್ಮ ಕಾರಣದಿಂದಲೇ ನೀವು ಲಾಭ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಮೇಲೆಯೇ ನಂಬಿಕೆ ಇಟ್ಟು ಮುಂದೆ ಸಾಗಬೇಕು. ನಿಮ್ಮ ಸಹೋದ್ಯೋಗಿಗಳ ವಿರುದ್ಧ ನೀವು ಎಚ್ಚರಿಕೆಯಿಂದ ಇರಬೇಕು. ಆದರೆ ನಿಮ್ಮ ಕಠಿಣ ಶ್ರಮವು ನೀವು ಮಿಂಚುವಂತೆ ಮಾಡಲಿದೆ. ಪ್ರಯಾಣಕ್ಕೆ ಈ ವಾರವು ಅನುಕೂಲಕರ.
ಮೀನ:ಈ ವಾರವು ನಿಮ್ಮ ಪಾಲಿಗೆ ಸಾಧಾರಣವಾಗಿ ಲಾಭದಾಯಕ ಎನಿಸಲಿದೆ. ವಾರದ ಆರಂಭವು ತುಂಬಾ ದುರ್ಬಲವಾಗಿ ಇರಲಿದ್ದು, ಯಾವುದೇ ಹೊಸ ಕೆಲಸ ಪ್ರಾರಂಭಿಸದಂತೆ ಅಥವಾ ಎಲ್ಲಿಯೂ ಹಣ ಹೂಡದಂತೆ ಸಲಹೆ ನೀಡಲಾಗಿದೆ. ಏಕೆಂದರೆ ಇದರಿಂದ ಏನಾದರೂ ಸಮಸ್ಯೆ ಉಂಟಾಗಬಹುದು. ಉದ್ಯೋಗದಲ್ಲಿರುವವರು ಸಂತಸದ ಬದುಕನ್ನು ಸಾಗಿಸಲಿದ್ದಾರೆ. ನಿಮ್ಮ ಕಠಿಣ ಶ್ರಮವು ನಿಮ್ಮನ್ನು ಹೊಸ ಉತ್ತುಂಗಕ್ಕೆ ಕರೆದುಕೊಂಡು ಹೋಗಲಿದೆ. ಕೆಲವು ವ್ಯಕ್ತಿಗಳು ನಿವೃತ್ತಿ ಹೊಂದಬಹುದು ಅಥವಾ ಇನ್ನು ಕೆಲವರು ಉನ್ನತ ಸ್ಥಾನವನ್ನು ಅಲಂಕರಿಸಬಹುದು. ನಿಮ್ಮ ಗಳಿಕೆ ಚೆನ್ನಾಗಿರಲಿದೆ. ಅಲ್ಲದೆ ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗುವುದರಿಂದ ನೀವು ವಿರಮಿಸಲಿದ್ದೀರಿ. ವ್ಯವಹಾರದಲ್ಲಿ ನಿಮ್ಮ ಮನಸ್ಸು ಶೀಘ್ರವಾಗಿ ಪ್ರತಿಕ್ರಿಯಿಸಲಿದೆ. ಅಲ್ಲದೆ ಅನುಭವಿ ವ್ಯಕ್ತಿಯ ಸಲಹೆಯು ನಿಮ್ಮ ನೆರವಿಗೆ ಬರಲಿದೆ. ವಿವಾಹಿತ ಜೋಡಿಗಳಿಗೆ ಈ ವಾರವು ಒಳ್ಳೆಯದು. ನಿಮ್ಮ ಬುದ್ಧಿಮತ್ತೆಯು ನಿಮ್ಮ ಸಂಗಾತಿಯ ಹೃದಯವನ್ನು ಗೆಲ್ಲಲು ಸಹಕರಿಸಲಿದೆ. ಅಲ್ಲದೆ ಕುಟುಂಬದ ವಾತಾವರಣವು ಸಂತಸದಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯ ಜೊತೆ ಅನ್ಯೋನ್ಯತೆಯನ್ನು ಅನುಭವಿಸಲಿದ್ದಾರೆ ಹಾಗೂ ತಮ್ಮ ಭಾವನೆಯನ್ನು ವ್ಯಕ್ತಪಡಿಸಲಿದ್ದಾರೆ. ವಿದ್ಯಾರ್ಥಿಗಳು ಎದುರಿಸುತ್ತಿದ್ದ ಕಷ್ಟ ಕೋಟಲೆಗಳು ದೂರಗೊಂಡು ಅವರು ಸುಲಭವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಾರದ ಮಧ್ಯದ ದಿನಗಳ ನಂತರ ಪ್ರಯಾಣಿಸಲು ಅನುಕೂಲಕರ.