ಕರ್ನಾಟಕ

karnataka

ETV Bharat / bharat

ಈ ವಾರ ಯಾವ ರಾಶಿಯವರಿಗಿದೆ ಅದೃಷ್ಟ? ಇಲ್ಲಿದೆ ನೋಡಿ ನಿಮ್ಮ ರಾಶಿ ಫಲ

ಈ ವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ.

Weekly Horoscope
Weekly Horoscope

By

Published : Mar 13, 2022, 5:31 AM IST

ಮೇಷ: ವಿವಾಹಿತ ವ್ಯಕ್ತಿಗಳಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ಆರಂಭದಲ್ಲಿ ಒಂದಷ್ಟು ಒತ್ತಡ ಭರಿತ ಸನ್ನಿವೇಶಗಳು ಎದುರಾಗುವ ಸಾಧ್ಯತೆ ಇರುವುದರಿಂದ ನೀವು ಕಾಳಜಿ ಮತ್ತು ಮುಂಜಾಗರೂಕತೆ ವಹಿಸಬೇಕು. ಈ ವಾರದಲ್ಲಿ ಪ್ರೇಮದ ಬದುಕಿನಲ್ಲಿ ಸಾಕಷ್ಟು ಉತ್ತುಂಗತೆ ಕಂಡು ಬರಲಿದೆ. ನಿಮ್ಮ ಸಂಬಂಧವು ಒಂದು ಹೆಜ್ಜೆ ಮುಂದೆ ಸಾಗಲಿದೆ. ನಿಮ್ಮ ಸಂಬಂಧದಲ್ಲಿ ಪಾರದರ್ಶಕತೆ ಕಂಡು ಬರಲಿದೆ. ಸಂವಹನದಲ್ಲಿಯೂ ಸುಧಾರಣೆ ಕಂಡು ಬರಲಿದೆ. ವಾರದ ಆರಂಭದಲ್ಲಿ ಎಲ್ಲವನ್ನೂ ನೀವು ಉತ್ಸಾಹದಿಂದಲೇ ನೋಡುತ್ತೀರಿ. ಹೀಗಾಗಿ, ನೀವು ಕಚೇರಿಯಲ್ಲಿ ಏನಾದರೂ ಹೊಸತನ್ನು ಪ್ರಾರಂಭಿಸಲಿದ್ದೀರಿ. ನಿಮ್ಮ ಸಹೋದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಒಳ್ಳೆಯದು. ಇದು ದೀರ್ಘಕಾಲದಲ್ಲಿ ನಿಮಗೆ ಲಾಭ ತಂದು ಕೊಡಲಿದೆ. ಉದ್ಯೋಗದಲ್ಲಿರುವವರು ಅಡೆತಡೆಗಳ ನಡುವೆ ಕೆಲಸ ಮಾಡಲಿದ್ದಾರೆ. ಇದರಿಂದಾಗಿ ನಿಮ್ಮ ಬಾಸ್‌ ಮತ್ತು ಮೇಲಾಧಿಕಾರಿಗಳು ನಿಮ್ಮ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಅಲ್ಲದೆ, ವ್ಯಾಪಾರೋದ್ಯಮಿಗಳಿಗೆ ಈ ವಾರ ಅದೃಷ್ಟದ ಫಲ ದೊರೆಯಲಿದೆ. ನಿಮ್ಮ ಹಿಂದಿನ ಯೋಜನೆಗಳು ಅದ್ಭುತ ಫಲಿತಾಂಶ ತೋರಲಿವೆ. ಅಲ್ಲದೆ ಈ ಸಮಯವು ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ ಹಾಗೂ ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ನಿಮಗೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಕಂಡುಬರದು. ಆದರೆ ನೀವು ನಿರಂತರ ಆಹಾರ ಕ್ರಮವನ್ನು ಅನುಸರಿಸಬೇಕು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ವೃಷಭ: ಈ ವಾರವು ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶ ನೀಡಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಸಾಮರಸ್ಯದಿಂದ ಕಳೆಯಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರದಲ್ಲಿ ಸವಾಲು ಎದುರಾಗಬಹುದು. ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ತಪ್ಪು ಗ್ರಹಿಕೆ ಉಂಟಾಗಬಹುದು. ಹೀಗಾಗಿ, ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿ ನಿಮ್ಮ ಸಂಬಂಧದಲ್ಲಿ ಮುಂದುವರಿಯುವುದು ಒಳ್ಳೆಯದು. ಈ ವಾರದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಲಿದೆ. ಬಾಕಿ ಇರುವ ಹಣ ಪಡೆಯುವ ಮೂಲಕ ನೀವು ಅನೇಕ ಕೆಲಸಗಳನ್ನು ಮಾಡಲಿದ್ದೀರಿ. ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಇದು ನಿಮ್ಮ ಪಾಲಿಗೆ ಲಾಭದಾಯಕ ಎನಿಸಲಿದೆ. ನಿಮ್ಮ ಜೊತೆ ಕೆಲಸ ಮಾಡುವವರು ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಏಕೆಂದರೆ ನೀವು ಇತರೆ ಸಂತಸ ಮತ್ತು ದುಃಖದಲ್ಲಿ ಭಾಗಿಯಾಗುವ ವ್ಯಕ್ತಿಯಾಗಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಅದ್ಭುತ ಕಾಲ. ನಿಮ್ಮ ಜ್ಞಾನ, ಬುದ್ಧಿಮತ್ತೆ ಮತ್ತು ನಾಯಕತ್ವ ಗುಣದ ಕಾರಣ ನಿಮ್ಮ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಕೆಲಸದ ಕುರಿತು ನಿಮ್ಮ ಬಾಸ್‌ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಕುಸಿತ ಉಂಟಾಗಲಿದೆ. ಅಲ್ಲದೆ ನಿಮ್ಮ ಆದಾಯದಲ್ಲಿನ ಹೆಚ್ಚಳವು ನಿಮ್ಮನ್ನು ಸಂತುಷ್ಟಪಡಿಸಲಿದೆ. ನಿಮ್ಮ ಅದೃಷ್ಟವು ದೊಡ್ಡ ಪ್ರಮಾಣದಲ್ಲಿ ನಿಮ್ಮನ್ನು ಬೆಂಬಲಿಸಲಿದೆ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಶಿಕ್ಷಣದ ಕುರಿತು ಗಂಭೀರವಾಗಿ ಯೋಚಿಸಲು ಇದು ಸಕಾಲ. ನಿಮ್ಮ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಇದು ದೀರ್ಘಕಾಲದಲ್ಲಿ ನಿಮಗೆ ಲಾಭ ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ತುಂಬಾ ಒಳ್ಳೆಯದು. ಏಕೆಂದರೆ ಅನೇಕ ಸಮಸ್ಯೆಗಳು ನಿಮ್ಮಿಂದ ದೂರ ಸರಿಯಲಿವೆ. ಈ ವಾರವು ಪ್ರಯಾಣಕ್ಕೆ ಒಳ್ಳೆಯದು.

ಮಿಥುನ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ಅಲ್ಲದೆ, ಈ ವಾರವು ವಿವಾಹಿತ ಜನರಿಗೆ ಒಳ್ಳೆಯದು. ಅವರ ಸಂಬಂಧದಲ್ಲಿ ಪರಸ್ಪರ ಅನ್ಯೋನ್ಯತೆ ಹೆಚ್ಚಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರದಲ್ಲಿ ಶುಭ ಸುದ್ದಿ ದೊರೆಯಲಿದೆ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಮನೋಸ್ಥಿತಿಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿದ್ದಾರೆ. ವಾರದ ಆರಂಭದಿಂದಲೇ ನಿಮ್ಮ ಕೆಲಸದಲ್ಲಿ ವೇಗವರ್ಧನೆ ಕಂಡು ಬರಲಿದ್ದು, ಇದರಿಂದ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ಪಡೆಯಲಿದ್ದಾರೆ ಹಾಗೂ ಅವರು ಅದ್ಭುತ ಫಲಿತಾಂಶ ಗಳಿಸಲಿದ್ದಾರೆ. ಅಲ್ಲದೆ ಅವರ ಕೆಲಸದಿಂದಾಗಿ ಬಾಸ್‌ ಸಹ ಸಂತುಷ್ಟರಾಗಲಿದ್ದಾರೆ. ಆದರೆ ಅತಿಯಾದ ಆತ್ಮವಿಶ್ವಾಸ ತೋರಬಾರದು. ಇದು ನಿಮ್ಮ ಫಲಿತಾಂಶವನ್ನು ಬಾಧಿಸಬಹುದು. ಈ ವಾರವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ಸಾಮಾಜಿಕ ಮಾಧ್ಯಮ ಅಭಿಯಾನದಿಂದ ನೀವು ಲಾಭ ಗಳಿಸಲಿದ್ದೀರಿ. ಈ ವಾರ ವಿದ್ಯಾರ್ಥಿಗಳಿಗೆ ಅನುಕೂಲಕರ ಎನಿಸಲಿದೆ. ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದು, ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಮುಂಜಾಗರೂಕತೆ ತೆಗೆದುಕೊಳ್ಳುವುದು ಹಾಗೂ ಋತುಮಾನಕ್ಕೆ ಸಂಬಂಧಿಸಿದ ರೋಗಗಳಿಂದ ದೂರವಿರುವುದು ಒಳ್ಳೆಯದು. ವಾರದ ಕೊನೆಯ ದಿನಗಳು ಪ್ರಯಾಣಿಸಲು ಅತ್ಯುತ್ತಮ.

ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಯಾವುದೇ ಸಂಬಂಧದಲ್ಲಿರುವವರು ಅಥವಾ ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಅತ್ಯುತ್ತಮ ವಾರವೆನಿಸಲಿದೆ. ನೀವು ಪ್ರೇಮದ ಬದುಕನ್ನು ಆನಂದಿಸಲಿದ್ದೀರಿ. ವಿವಾಹಿತ ಜೋಡಿಗಳ ಕೌಟುಂಬಿಕ ಜೀವನದಲ್ಲಿ ಒತ್ತಡ ಕಡಿಮೆಯಾಗಲಿದೆ. ಇದು ಜೋಡಿಗಳನ್ನು ಇನ್ನಷ್ಟು ಹತ್ತಿರಕ್ಕೆ ತರಲಿದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಸಾಕಷ್ಟು ಶಕ್ತಿ ಕಂಡು ಬರಲಿದೆ. ಇದರ ಪರಿಣಾಮವಾಗಿ ಎಲ್ಲಾ ಕಡೆಯಲ್ಲೂ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ಉಂಟಾಗಲಿದೆ. ಅಲ್ಲದೆ, ಈ ವಾರದಲ್ಲಿ ನೀವು ಹೊಸ ಕರಾರುಗಳನ್ನು ನೋಡಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶ ಪಡೆಯಲಿದ್ದಾರೆ. ಕಠಿಣ ಶ್ರಮಕ್ಕೆ ಯಾವಾಗಲೂ ತಕ್ಕದಾದ ಫಲ ದೊರೆಯುತ್ತದೆ. ನಿಮ್ಮ ಕಠಿಣ ಶ್ರಮದ ಫಲವಾಗಿ ನಿಮಗೆ ಭಡ್ತಿ ಮತ್ತು ವೇತನದಲ್ಲಿ ಹೆಚ್ಚಳ ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಒಳ್ಳೆಯದು. ನೀವು ನಿಮ್ಮ ಕೆಲಸದಲ್ಲಿ ವೇಗದ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಇದರಿಂದ ನೀವು ಲಾಭ ಗಳಿಸಲಿದ್ದೀರಿ. ತಮ್ಮ ಅಭ್ಯಾಸದ ಅವಧಿಯನ್ನು ಹೆಚ್ಚಿಸುವುದಕ್ಕಾಗಿ ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ರೂಪಿಸಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಕುರಿತು ನೀವು ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ಆಹಾರದ ಕಡೆಗೆ ವಿಶೇಷ ಗಮನ ನೀಡುವುದು ಒಳ್ಳೆಯದು. ಈ ವಾರವು ಪ್ರಯಾಣಕ್ಕೆ ಒಳ್ಳೆಯದು. ಹೀಗಾಗಿ ಆದಷ್ಟು ಮಟ್ಟಿಗೆ ಶೋಧನೆ ನಡೆಸಿ.

ಸಿಂಹ: ಈ ವಾರವು ವಿವಾಹಿತ ವ್ಯಕ್ತಿಗಳ ಪಾಲಿಗೆ ಸಾಕಷ್ಟು ಸಮರಸದಿಂದ ಕೂಡಿದೆ. ಇದು ನಿಮ್ಮ ಸಂಬಂಧವನ್ನು ಆನಂದಿಸಲು ಸಹಕರಿಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ವೈವಾಹಿಕ ಜೀವನಕ್ಕೆ ಕಾಲಿಡಲು ನೀವು ಯತ್ನಿಸಲಿದ್ದೀರಿ. ನಿಮ್ಮ ಸಂಬಂಧದಲ್ಲಿ ಒಂದು ಹೆಜ್ಜೆ ಮುಂದೆ ಇಡಲು ಇದು ನಿಮಗೆ ಸಹಕರಿಸಲಿದೆ. ವಾರದ ಆರಂಭದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮಗೆ ಚಿಂತೆ ಕಾಡಬಹುದು. ಹೀಗಾಗಿ ಈ ಕುರಿತು ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು. ವಾರದ ಮಧ್ಯದಲ್ಲಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಈ ವಾರವು ನಿಮಗೆ ಒಳ್ಳೆಯ ಅವಕಾಶಗಳನ್ನು ಹೊತ್ತು ತರಲಿದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಜಾಣ್ಮೆ ಪ್ರದರ್ಶಿಸುವುದರಿಂದ ಸಕಾಲದಲ್ಲಿ ಕೆಲಸವನ್ನು ಮುಗಿಸಲಿದ್ದು, ಇದರಿಂದಾಗಿ ಲಾಭ ಗಳಿಸಲಿದ್ದಾರೆ. ವ್ಯಾಪಾರಿಗಳಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದು, ಶ್ರದ್ಧೆಯಿಂದ ಕಲಿಯಲಿದ್ದಾರೆ. ಇದು ಖಂಡಿತವಾಗಿಯೂ ಅವರಿಗೆ ಲಾಭ ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನೀವು ಹೆಚ್ಚಿನ ಸಮಸ್ಯೆ ಎದುರಿಸುವುದಿಲ್ಲ. ಆದರೂ ನಿಮ್ಮ ಆರೋಗ್ಯ ಕ್ರಮದಲ್ಲಿ ನೀವು ನಿರಂತರತೆಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ಇದು ನಿಮ್ಮ ಆರೋಗ್ಯಕ್ಕೆ ಅವಶ್ಯಕ. ವಾರದ ಕೊನೆಯ ಎರಡು ದಿನಗಳು ಪ್ರಯಾಣದ ಉದ್ದೇಶಕ್ಕಾಗಿ ಅತ್ಯುತ್ತಮ.

ಕನ್ಯಾ: ವಿವಾಹಿತ ಜನರ ಕೌಟುಂಬಿಕ ಬದುಕು ಈ ವಾರದಲ್ಲಿ ಸಾಮಾನ್ಯವಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಅಗತ್ಯತೆಗಳನ್ನು ಪೂರೈಸಲು ನೀವು ಗಮನ ಹರಿಸಲಿದ್ದೀರಿ. ಇದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧದಲ್ಲಿ ಅನ್ಯೋನ್ಯತೆ ಕಂಡು ಬರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಂತಸ ಕಂಡುಕೊಳ್ಳಲಿದ್ದಾರೆ. ಈ ವಾರದಲ್ಲಿ ನಿಮ್ಮ ಸಮಯವನ್ನು ನೀವು ಆನಂದಿಸಲಿದ್ದೀರಿ. ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ಡಿನ್ನರ್‌ ಗಾಗಿ ನೀವು ಯೋಜನೆ ರೂಪಿಸಬಹುದು ಅಥವಾ ಲಾಂಗ್‌ ಡ್ರೈವ್‌ ಗೆ ಹೋಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ವ್ಯಸ್ತರಾಗಲಿದ್ದಾರೆ. ಆದರೆ ಕೆಲವು ವಿರೋಧಿಗಳು ಅವರನ್ನು ಶೋಷಿಸಲು ಯತ್ನಿಸಬಹುದು. ಹೀಗಾಗಿ, ಕೆಲಸದ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾವುದೇ ವ್ಯಾಜ್ಯ ಬಾಕಿ ಇದ್ದಲ್ಲಿ ನೀವು ಈ ಕಾನೂನಿನ ಸಮರದಲ್ಲಿ ಜಯ ಗಳಿಸಿದ್ದೀರಿ. ಯಾರ ಜೊತೆ ಮಾತನಾಡುವಾಗಲೂ ಯೋಚಿಸಿ ಮಾತನಾಡುವುದು ಒಳ್ಳೆಯದು. ಏಕೆಂದರೆ, ವಿವಾದ ಉಂಟಾಗುವ ಸಾಧ್ಯತೆ ಇದೆ. ಈ ವಾರ ವ್ಯಾಪಾರಿಗಳಿಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ಕೆಲಸಕ್ಕೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ತಮ್ಮ ಸುತ್ತ ಗದ್ದಲ ಇರುವುದರಿಂದ ವಿದ್ಯಾರ್ಥಿಗಳಿಗೆ ಅಡಚಣೆ ಉಂಟಾಗಲಿದೆ. ಹೀಗಾಗಿ, ಅಧ್ಯಯನಕ್ಕಾಗಿ ಅವರು ಏಕಾಂತ ಸ್ಥಳವನ್ನು ಕಂಡುಹಿಡಿಯುವುದು ಒಳ್ಳೆಯದು. ಈ ರಾಶಿಯವರು ಆರೋಗ್ಯಕ್ಕೆ ಗಮನ ನೀಡುವುದು ಒಳ್ಳೆಯದು. ಸಣ್ಣಪುಟ್ಟ ದೈಹಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ತುಲಾ: ಈ ವಾರ ನಿಮಗೆ ಸಾಮಾನ್ಯ ಫಲ ಲಭಿಸಲಿದೆ. ವಿವಾಹಿತ ಜನರ ಕೌಟುಂಬಿಕ ಜೀವನವು ಸಹ ಸಾಮಾನ್ಯವಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳಬಹುದು. ಹೀಗಾಗಿ, ಎಚ್ಚರಿಕೆಯಿಂದ ಇದ್ದು ಸಂಘರ್ಷಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಸಾಧಾರಣ ಸಮಯ ಎನಿಸಲಿದೆ. ನಿಮ್ಮ ಕೆಲಸವನ್ನು ನೀವು ಎಚ್ಚರಿಕೆಯಿಂದ ಮಾಡಬೇಕು. ಆಗ ಮಾತ್ರವೇ ನಿಮ್ಮ ಸಾಧನೆಯಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಜೊತೆಗೆ ನಿಮ್ಮ ಕೆಲಸದಲ್ಲಿ ಒಳ್ಳೆಯ ಗೌರವ ಪಡೆಯಲಿದ್ದೀರಿ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನೀವು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಏಕೆಂದರೆ ನಿಮ್ಮ ಕೆಲವು ನೀತಿಗಳು ನಿಮ್ಮ ತಪ್ಪು ದಾರಿಗೆ ಕೊಂಡೊಯ್ಯಬಹುದು. ನಾವು ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ನಿಮ್ಮ ಕಠಿಣ ಶ್ರಮ ಮತ್ತು ನಿಮ್ಮ ಗುರಿಯ ಕುರಿತ ನಿಮ್ಮ ಬದ್ಧತೆಯು ಧನಾತ್ಮಕ ಫಲಿತಾಂಶವನ್ನು ತರಲಿದೆ. ನಿಮ್ಮ ಕಠಿಣ ಶ್ರಮವೇ ಮುನ್ನೆಲೆಗೆ ಬರಲಿ. ಈ ವಾರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ವಾರದ ಮಧ್ಯ ಭಾಗವು ಪ್ರಯಾಣದ ಉದ್ದೇಶಕ್ಕೆ ಅತ್ಯುತ್ತಮ.

ವೃಶ್ಚಿಕ: ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಅದ್ಭುತವಾದದ್ದು. ಅವರು ಉತ್ತಮ ಕೌಟುಂಬಿಕ ಜೀವನವನ್ನು ಸಾಗಿಸಲಿದ್ದಾರೆ. ಪ್ರೇಮವು ಉತ್ತುಂಗಕ್ಕೆ ಏರಲಿದ್ದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಹೀಗೆ, ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲಿದ್ದೀರಿ. ಈ ಮೂಲಕ ಅವರ ಹೃದಯದಲ್ಲಿ ಸ್ಥಾನ ಪಡೆಯಲಿದ್ದೀರಿ. ಯಾವುದಾದರೂ ವಿಷಯದ ಕುರಿತು ನಿಮಗೆ ಗೊಂದಲ ಉಂಟಾಗಬಹುದು. ಅಲ್ಲದೆ ಇದರಿಂದಾಗಿ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು. ಪರಿಣಾಮವಾಗಿ ನಿಮ್ಮ ಕೆಲಸದಲ್ಲಿ ವಿಳಂಬ ಉಂಟಾಗಬಹುದು. ನಿಮ್ಮ ಅದೃಷ್ಟದ ಬೆಂಬಲ ಪಡೆಯುವಲ್ಲಿಯೂ ವಿಳಂಬ ಉಂಟಾಗಬಹುದು. ಹೀಗಾಗಿ, ನಿಮ್ಮ ಕರ್ಮದಲ್ಲಿ ನೀವು ನಂಬಿಕೆ ಇಟ್ಟು ನಿಮ್ಮ ಗುರಿಯನ್ನು ಸಾಧಿಸುವುದಕ್ಕಾಗಿ ಕಠಿಣ ಶ್ರಮ ಪಡಬೇಕಾದ ಅಗತ್ಯವಿದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮದ ಕಾರಣ ಉತ್ತಮ ಸಾಧನೆ ತೋರಲಿದ್ದಾರೆ. ಇದರಿಂದ ಅವರ ಕೆಲಸದಲ್ಲಿ ಉತ್ತಮ ಸಂಭಾವನೆ ಮತ್ತು ಲಾಭ ದೊರೆಯಲಿದೆ. ವ್ಯಾಪಾರೋದ್ಯಮಿಗಳಿಗೆ ಈ ವಾರದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಕೆಲಸವನ್ನು ಸರ್ಕಾರಿ ವಲಯದೊಂದಿಗೆ ಸಂಪರ್ಕಿಸುವ ಮೂಲಕ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ನೀವು ಹೊಸ ಮನೆ ಅಥವಾ ವಾಹನ ಖರೀದಿಸುವುದಾದರೆ ಈ ವಾರವು ಯಶಸ್ವಿ ಎನಿಸಲಿದೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಏಕೆಂದರೆ ಅದೃಷ್ಟ ಮತ್ತು ಕಠಿಣ ಶ್ರಮ ಅವರನ್ನು ಬೆಂಬಲಿಸಲಿದೆ. ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆರೋಗ್ಯದ ವಿಚಾರದಲ್ಲಿಯೂ ಈ ವಾರವು ನಿಮಗೆ ಒಳ್ಳೆಯದು. ಆದರೆ ಆಹಾರ ಕ್ರಮಕ್ಕೆ ನೀವು ಗಮನ ನೀಡಬೇಕು. ಕಟ್ಟುನಿಟ್ಟಿನ ಆಹಾರ ಕ್ರಮವನ್ನು ನೀವು ಅನುಸರಿಸುವುದು ಒಳ್ಳೆಯದು. ಮೊದಲ ಎರಡು ದಿನಗಳನ್ನು ಹೊರತುಪಡಿಸಿ ಈ ವಾರವು ಪ್ರಯಾಣಕ್ಕೆ ಒಳ್ಳೆಯದು.

ಧನು: ಈ ವಾರ ನಿಮಗೆ ಲಾಭದಾಯಕ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಮಯ ಕಳೆಯಲಿದ್ದೀರಿ. ಅವರ ಕುರಿತು ಮುಕ್ತ ಮನಸ್ಸಿನಿಂದ ನೀವು ವಿಚಾರಿಸಲಿದ್ದೀರಿ ಹಾಗೂ ಅವರೊಂದಿಗೆ ಸಮಯ ಕಳೆಯಲಿದ್ದೀರಿ. ಅಲ್ಲದೆ ಅವರು ಏನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ ಎಂದು ನೀವು ಕೇಳಲಿದ್ದೀರಿ. ಇದು ನಿಮ್ಮ ಸಂಬಂಧದಲ್ಲಿ ಸಂತಸ ತರಲಿದೆ. ಹೀಗಾಗಿ ನಿಮ್ಮ ಸಂಬಂಧದಲ್ಲಿ ಸಂತಸದ ಸಮಯ ಬಂದೊದಗಲಿದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯನ್ನು ಕುಟುಂಬದ ಸದಸ್ಯರಿಗೆ ಪರಿಚಯಿಸಲಿದ್ದಾರೆ. ಕೆಲ ಜನರು ನಿಮ್ಮ ಸಂಬಂಧಕ್ಕೆ ಧನಾತ್ಮಕ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಗಮನ ಹರಿಸಬೇಕು. ಈ ವಾರ ವ್ಯಾಪಾರಿಗಳಿಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಕೆಲಸದ ಮೇಲೆ ಗಮನ ನೀಡಿ. ಈ ವಾರ ಉದ್ಯೋಗಿಗಳಿಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಕಠಿಣ ಶ್ರಮವು ಖಂಡಿತವಾಗಿಯೂ ನಿಮಗೆ ಉತ್ತಮ ಫಲಿತಾಂಶ ತರಲಿದೆ. ಆದರೆ ನಿಮ್ಮ ವರ್ತನೆ ಸರಿ ಇರಬೇಕು. ಇಲ್ಲದಿದ್ದರೆ ನಿಮ್ಮ ಅಸಹನೆಯ ಕಾರಣ ಸಮಸ್ಯೆಗಳು ಉಂಟಾಗಬಹುದು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕಾದರೆ ತಮ್ಮ ಅಧ್ಯಯನಕ್ಕೆ ವೇಳಾಪಟ್ಟಿಯನ್ನು ನಿಗದಿಪಡಿಸಬೇಕು. ಈ ವೇಳಾಪಟ್ಟಿಯಂತೆ ಮುಂದೆ ಸಾಗುವುದು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗದಿದ್ದರೂ, ನಿಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನಗಳು ನಿಮಗೆ ಸೂಕ್ತ.

ಮಕರ: ನೀವು ಹೊಸ ಯೋಜನೆ ರೂಪಿಸುವ ಕಾರಣ ಈ ವಾರವು ಬಿಡುವಿಲ್ಲದ ವಾರವೆನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ ಜೋಡಿಗಳ ನಡುವೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಸಂತುಷ್ಟಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕಾದೀತು. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಉಲ್ಲಾಸದಾಯಕವಾಗಿ ರೂಪಿಸಲಿದೆ. ತನ್ನ ಮೇಲೆಯೇ ನಂಬಿಕೆ ಇರಿಸುವುದು ಅಗತ್ಯ. ಏಕೆಂದರೆ ತನ್ನ ಮೇಲೆ ನಂಬಿಕೆ ಇಟ್ಟರೆ ಮಾತ್ರವೇ ಯಶಸ್ಸು ಸಾಧಿಸಬಹುದು. ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಈ ವಾರ ಭರವಸೆಯಿಂದ ಕೂಡಿದೆ. ಕೆಲ ವಿಶೇಷ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯ ಅಗತ್ಯತೆ ನಿಮಗೆ ಕಾಡಬಹುದು. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸೇರಿದ್ದು, ಅವರ ಪಾಲಿಗೆ ಲಾಭದಾಯಕ ಎನಿಸಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಕಠಿಣ ಶ್ರಮ ಪಟ್ಟರೆ ಖಂಡಿತವಾಗಿಯೂ ಅದಕ್ಕೆ ತಕ್ಕದಾದ ಫಲ ನಿಮಗೆ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಸಾಮಾನ್ಯ ಸ್ಥಿತಿಯಲ್ಲಿರಲಿದೆ ಹಾಗೂ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ. ಆದರೂ ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ: ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ವಿವಾಹಿತ ವ್ಯಕ್ತಿಗಳು ಸಂತಸದ ಜೀವನ ನಡೆಸಲಿದ್ದಾರೆ. ಪರಸ್ಪರ ಪ್ರಾಮುಖ್ಯತೆ ನೀಡುವ ಮೂಲಕ ನಿಮ್ಮ ಸಂಬಂಧದಲ್ಲಿ ನೀವು ಮುಂದೆ ಸಾಗಲಿದ್ದೀರಿ. ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ. ಹೀಗೆ ನಿಮ್ಮ ಸಂಗಾತಿಯೊಂದಿಗೆ ಸಂತಸದ ಜೀವನವನ್ನು ನೀವು ಸಾಗಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ಅನುಕೂಲಕರ. ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಅದ್ಭುತವಾದ ಉಡುಗೊರೆಯೊಂದನ್ನು ನೀಡಲಿದ್ದು ಇದು ನಿಮಗೆ ಸಂತಸವನ್ನುಂಟು ಮಾಡಲಿದೆ. ನಿಮ್ಮ ಸಂಬಂಧದ ಕುರಿತು ನೀವು ಗಂಭೀರತೆ ಹೊಂದಿರಬಹುದು. ನಿಮ್ಮ ಕುರಿತು ನೀವು ನಂಬಿಕೆ ಇರಿಸಬೇಕು. ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯಲಿದೆ. ಇಲ್ಲದಿದ್ದರೆ ನೀವು ಚಿಂತೆಗಳ ಸುಳಿಯಲ್ಲಿ ಸಿಲುಕಿ ಬೀಳಬಹುದು. ನಿಮ್ಮ ಖರ್ಚುವೆಚ್ಚಗಳು ಹಾಗೆಯೇ ಉಳಿಯಲಿವೆ. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಆದರೆ ಹಣಕಾಸಿನ ನಿರ್ವಹಣೆಗೆ ನೀವು ಗಮನ ನೀಡಬೇಕು. ನಿಮ್ಮ ಅಗತ್ಯತೆಗಳನ್ನು ಈಡೇರಿಸಬಹುದು. ನಿಮ್ಮ ಅಗತ್ಯತೆಗಳನ್ನು ನೀವು ನಿರ್ಲಕ್ಷಿಸುವ ಅಗತ್ಯವಿಲ್ಲ. ಆದರೆ ವಿಪರೀತವಾಗಿ ನೀವು ಖರ್ಚು ಮಾಡುವ ಅಗತ್ಯವಿಲ್ಲ. ವಿರೋಧಿಗಳ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಈ ವಾರ ಉದ್ಯೋಗಿಗಳಿಗೆ ಉತ್ತಮ ಫಲ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ ಅವರು ಪ್ರಯೋಜನ ಪಡೆಯಲಿದ್ದಾರೆ. ಅವರ ಕಠಿಣ ಶ್ರಮವು ಉತ್ತಮ ಫಲಿತಾಂಶ ತರಲಿದ್ದು, ಅವರನ್ನು ಸಂತುಷ್ಟಪಡಿಸಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಏಕೆಂದರೆ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪಾದದಲ್ಲಿ ಸಮಸ್ಯೆ ಉಂಟಾಗಬಹುದು ಅಥವಾ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಮೀನ: ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಅವರ ಕೋಪ ಅಥವಾ ಸಂಗಾತಿ ಜೊತೆಗಿನ ದುರ್ವರ್ತನೆ ಇದಕ್ಕೆಲ್ಲ ಕಾರಣವೆನಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ. ಪರಸ್ಪರ ಒಪ್ಪಿಗೆಯ ಮೂಲಕ ಇಂತಹ ಸಮಸ್ಯೆಗಳನ್ನು ಪರಿಹರಿಸುವುದು ಒಳ್ಳೆಯದು. ಈ ವಾರದಲ್ಲಿ, ಸಂಬಂಧದಲ್ಲಿ ಇರುವವರಲ್ಲಿ ಒಂದಷ್ಟು ಸಮಸ್ಯೆ ಮತ್ತು ಒತ್ತಡ ಕಾಣಿಸಿಕೊಳ್ಳಬಹುದು. ಆದರೆ ಕೆಲವು ಗಂಭೀರ ವಿಷಯಗಳನ್ನು ವಿವೇಚನೆಯ ಮೂಲಕ ಪರಿಹರಿಸಲು ಗಮನ ನೀಡಿ. ವಾರದ ಆರಂಭದಲ್ಲಿ ನೀವು ಮನೆಯ ಖರ್ಚುವೆಚ್ಚಗಳಿಗೆ ಗಮನ ನೀಡಲಿದ್ದೀರಿ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದಾಯವು ಚೆನ್ನಾಗಿದ್ದರೂ ಹಣಕಾಸಿನ ನಿರ್ವಹಣೆಗೆ ನೀವು ಒಂದಷ್ಟು ಗಮನ ನೀಡಬೇಕು. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ವ್ಯಸ್ತರಾಗಲಿದ್ದಾರೆ. ಈ ಮೂಲಕ ಅವರು ಕಠಿಣ ಶ್ರಮ ಪಡಬೇಕು. ವಿದೇಶಕ್ಕೆ ಹೋಗುವ ಅವಕಾಶ ನಿಮಗೆ ದೊರೆಯಬಹುದು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ದುಡಿಯುವವರಿಗೆ ಈ ವಾರವು ಅದ್ಭುತವೆನಿಸಲಿದೆ. ಅವರ ಕಠಿಣ ಶ್ರಮದ ಕಾರಣ ಅವರಿಗೆ ಪುರಸ್ಕಾರ ದೊರೆಯಲಿದೆ. ವ್ಯಾಪಾರೋದ್ಯಮಿಗಳು ತಮ್ಮ ವ್ಯವಹಾರವನ್ನು ವೃದ್ಧಿಸುವುದಕ್ಕಾಗಿ ವಿದೇಶಿ ಮಾಧ್ಯಮದ ಆಸರೆ ಪಡೆಯಲಿದ್ದಾರೆ. ಬಂಡವಾಳದ ಹೂಡಿಕೆ ಇದು ಸಕಾಲ. ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬಹುದು. ಈ ಕುರಿತು ಅವರು ಗಮನ ಹರಿಸಬೇಕು. ನಿಮ್ಮ ಆರೋಗ್ಯದ ಕುರಿತು ಗಮನ ನೀಡಿ. ಏಕೆಂದರೆ ನೀವು ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯಕ್ಕೆ ಗಮನ ನೀಡುವುದು ಒಳ್ಳೆಯದು. ವಾರದ ಆರಂಭಿಕ ದಿನಗಳು ಪ್ರಯಾಣದ ಉದ್ದೇಶಕ್ಕೆ ಅತ್ಯುತ್ತಮ.

ABOUT THE AUTHOR

...view details