ಮೇಷ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ನೀವು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಕೆಲವು ಹೊಸ ಬಟ್ಟೆಗಳು ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಸೂಕ್ತ ಸಮಯವಾಗಿದ್ದು, ನಿಮ್ಮ ಮಾತು ಜನರನ್ನು ಮೆಚ್ಚಿಸಲಿದೆ. ಹೀಗಾಗಿ ನಿಮ್ಮ ಅನೇಕ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಘನತೆ ವೃದ್ಧಿಸಲಿದೆ. ನಿಮ್ಮ ಬಾಸ್ ನಿಮ್ಮನ್ನು ಹೊಗಳಲಿದ್ದಾರೆ. ನಿಮ್ಮ ಕುರಿತು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ನಿಮ್ಮ ಬಂಧವು ಸುಧಾರಿಸಲಿದೆ. ನಿಮ್ಮ ಮಗ ಅಥವಾ ಮಗಳು ಬದುಕಿನಲ್ಲಿ ಪ್ರಗತಿ ಸಾಧಿಸಲಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ.
ವೃಷಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಅನಗತ್ಯ ಚಿಂತೆಗಳಿಂದ ದೂರವಿರಿ. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ, ಒತ್ತಡವು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿ ವಾತಾವರಣ ಇರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೊರಗೆ ಹೋಗಿ ಚಲನಚಿತ್ರವನ್ನು ವೀಕ್ಷಿಸಲು ಯೋಜನೆ ರೂಪಿಸಬಹುದು. ನಿಮ್ಮ ಕೆಲಸವು ನಿಮ್ಮ ಬಾಸ್ನ ಮೆಚ್ಚುಗೆ ಗಳಿಸಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಪ್ರಯತ್ನದ ಫಲವಾಗಿ ಉತ್ತಮ ಲಾಭ ಗಳಿಸಲಿದ್ದಾರೆ. ಪ್ರಣಯ ಪಕ್ಷಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ಕೆಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಈ ವಾರದಲ್ಲಿ ಯಾರಾದರೂ ವಿಶೇಷ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದೀರಿ. ವಿವಾಹಿತರು ವೈವಾಹಿಕ ಬದುಕಿನ ಆನಂದವನ್ನು ಸವಿಯಲಿದ್ದಾರೆ. ನಿಮ್ಮ ಸಂಗಾತಿಯು ನಿಮ್ಮನ್ನು ಹೊಗಳಲಿದ್ದು, ಇದು ನಿಮಗೆ ಸಂತೋಷವನ್ನು ನೀಡಲಿದೆ. ಪ್ರವಾಸಕ್ಕೆ ಹೋಗಲು ಇದು ಸೂಕ್ತ ಕಾಲವಲ್ಲ. ಹೀಗಾಗಿ ಒಂದಷ್ಟು ಜಾಗರೂಕತೆ ವಹಿಸಿ.
ಮಿಥುನ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ನೀವು ನಿಮ್ಮ ಅಧ್ಯಯನಗಳ ಕುರಿತು ಸಾಕಷ್ಟು ಯೋಚನೆ ಮಾಡಲಿದ್ದೀರಿ ಹಾಗೂ ನೀವು ನಿಮ್ಮ ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವು ಪಡೆಯುವುದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದು, ಇದು ನಿಮಗೆ ಸಾಕಷ್ಟು ಸಂತೃಪ್ತಿ ನೀಡಲಿದೆ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ನಿಮ್ಮ ಸುತ್ತಮುತ್ತ ಇರುವ ಯಾವುದೇ ವ್ಯಕ್ತಿಯ ಜೊತೆಗೆ ತಪ್ಪು ಸಂವಹನ ಮಾಡಬೇಡಿ. ಇದು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇದು ವ್ಯಾಪಾರೋದ್ಯಮಗಳಿಗೆ ಸಕಾಲವಾಗಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡವು ಕಡಿಮೆಯಾಗಲಿದೆ ಹಾಗೂ ನೀವು ತೀರ್ಥಯಾತ್ರೆಗೆ ಹೋಗಲು ಯೋಜನೆ ಹೂಡಬಹುದು.
ಕರ್ಕಾಟಕ:ಈ ವಾರದ ಆರಂಭದಲ್ಲಿ ನೀವು ನಿಮ್ಮ ಸಿಹಿ ಮಾತಿನ ಮೂಲಕ ಜನರ ಮೇಲೆ ಪ್ರಭಾವ ಬೀರಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿವೆ. ವೃತ್ತಿಪರ ಪ್ರಯಾಣದ ಮೂಲಕ ನೀವು ಲಾಭ ಗಳಿಸಲಿದ್ದೀರಿ. ಅಮದು-ರಫ್ತು ವ್ಯವಹಾರದಲ್ಲಿ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಸಹೋದ್ಯೋಗಿಗಳ ಸಹಕಾರ ಪಡೆಯಲಿದ್ದೀರಿ. ಯಾವುದೇ ದಾಖಲೆಗೆ ಸಹಿ ಹಾಕುವ ಮೊದಲು ಅದನ್ನು ಎಚ್ಚರಿಕೆಯಿಂದ ಓದಿ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯಗಳನ್ನು ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ಕಲಿತರೆ, ಅವರು ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಿ, ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ ಇದು ಉತ್ತಮ ಮತ್ತು ಲಾಭದಾಯಕ ಹಂತವಾಗಿದೆ. ಆದರೆ ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುವುದು ಅತ್ಯಗತ್ಯ. ನಿಮ್ಮ ಸಂಬಂಧಿಗಳ ಜೊತೆಗೆ ನೀವು ಉತ್ತಮ ಸಂಬಂಧವನ್ನು ಆನಂದಿಸಲಿದ್ದೀರಿ. ಹೊಸ ಪ್ರೇಮ ಸಂಬಂಧಕ್ಕೆ ಕೈ ಹಾಕುವ ಮೊದಲು ಎಚ್ಚರ ವಹಿಸಿ. ಅಲ್ಪ ಪ್ರಮಾಣದ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಪೌಷ್ಟಿಕಾಂಶಗಳಿಂದ ಕೂಡಿದ ಮತ್ತು ಆರೋಗ್ಯದಾಯಕ ಆಹಾರವನ್ನು ಮಾತ್ರವೇ ಸೇರಿಸಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.
ಸಿಂಹ: ಇದು ನಿಮ್ಮ ಪಾಲಿಗೆ ಅತ್ಯಂತ ಆರಾಮದಾಯಕ ವಾರ ಎನಿಸಲಿದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ದೂರದ ಪ್ರಯಾಣಕ್ಕೆ ಹೋಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮ ಮತ್ತು ಪ್ರಯತ್ನದ ಮೇಲೆ ನಂಬಿಕೆ ಇಡಬೇಕು. ಏಕೆಂದರೆ ಇದು ಮಾತ್ರವೇ ನಿಮಗೆ ಉತ್ತಮ ಫಲಿತಾಂಶವನ್ನು ನೀಡಬಲ್ಲದು. ನಿಮ್ಮ ಸಹೋದ್ಯೋಗಿಗಳ ಜೊತೆಗಿನ ಉತ್ತಮ ಬಾಂಧವ್ಯವು ನಿಮಗೆ ಲಾಭ ತರಲಿದೆ. ವ್ಯಾಪಾರೋದ್ಯಮಿಗಳು ತಮ್ಮ ವೃತ್ತಿಪರ ಚಟುವಟಿಕೆಗಳಲ್ಲಿ ನಾವಿನ್ಯತೆ ತರಬೇಕು. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಉತ್ತಮ ವೈವಾಹಿತ ಸಂಬಂಧವನ್ನು ಆನಂದಿಸಲಿದ್ದೀರಿ. ನಿಮ್ಮ ಮಗ ಅಥವಾ ಮಗಳು, ನಿಮಗೆ ಸಂತೃಪ್ತಿ ನೀಡುವಂತಹ ಏನಾದರೂ ಒಂದು ಕೆಲಸವನ್ನು ಮಾಡಲಿದ್ದಾರೆ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ನಿಮ್ಮ ಪ್ರಣಯ ಸಂಗಾತಿಯನ್ನು ನಿಮ್ಮ ಜೀವನ ಸಂಗಾತಿಯಾಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾಗಲಿದ್ದೀರಿ. ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಪ್ರವಾಸಕ್ಕೆ ಹೋಗಲು ಉತ್ತಮ ವಾರ ಎನಿಸಲಿದೆ.