ಹೈದರಾಬಾದ್(ತೆಲಂಗಾಣ):ವರದಕ್ಷಿಣೆ ಅಥವಾ ಪ್ರೇಮ ಪ್ರಕರಣಗಳಿಂದ ಮದುವೆಗಳು ನಿಂತು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವರನ ಸ್ನೇಹಿತರಿಗೆ ಕೋಳಿ ಮಾಂಸ ನೀಡದ ಕಾರಣಕ್ಕೆ ಮದುವೆ ನಿಂತು ಹೋಗಿದೆ.
ಇಲ್ಲಿನ ಶಹಪುರ ನಗರದಲ್ಲಿ ಸೋಮವಾರ ಮುಂಜಾನೆ ಘಟನೆ ನಡೆಯಿತು. ಕುತ್ಬುಳ್ಳಾಪುರದ ವಧುವಿನ ಜೊತೆ ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಹಸಮಣೆ ಏರುವ ಸಿದ್ಧತೆಯಲ್ಲಿದ್ದರು. ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಭಾನುವಾರ ರಾತ್ರಿ ಶಹಪುರನಗರದ ಫಂಕ್ಷನ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಮದುಮಗಳು ಬಿಹಾರದ ಮಾರ್ವಾಡಿ ಕುಟುಂಬದವರಾಗಿದ್ದು ಅವರು ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಿದ್ದರು.