ಚಂಡೀಗಢ(ಪಂಜಾಬ್):ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿವಾಹ ಸಂಭ್ರಮ ಚಂಡೀಗಢದಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಜೋರಾಗಿ ನಡೆಯುತ್ತಿದೆ. ವೈದ್ಯೆಯಾಗಿರುವ ಡಾ.ಗುರುಪ್ರೀತ್ ಕೌರ್ ಅವರೊಂದಿಗೆ ಪಂಜಾಬ್ ಸಿಎಂ ಸಪ್ತಪದಿ ತುಳಿಯಲಿದ್ದಾರೆ. ಸಿಖ್ ಸಂಪ್ರದಾಯದ ವಿಧಿವಿಧಾನದ ಪ್ರಕಾರ ಮದುವೆ ಕಾರ್ಯಗಳು ಕಳೆಗಟ್ಟಿವೆ.
ವಿವಾಹ ಮಹೋತ್ಸವದಲ್ಲಿ ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಿದ್ದಾರೆ.ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮಾನ್ ಅವರ ಮದುವೆ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.