ಉತ್ತರ ಪ್ರದೇಶದ:ಚಿನ್ನಾಭರಣಗಳಿಂದ ಅಲಂಕೃತಗೊಂಡ ವಧು-ವರ.. 500 ಮಂದಿಯೊಂದಿಗೆ ಅದ್ಧೂರಿ ಮೆರವಣಿಗೆ.. ವೈವಿಧ್ಯಮಯ ತಿನಿಸು ಹಾಗೂ ಖಾದ್ಯಗಳು.. ಇವೆಲ್ಲ ಕಂಡುಬಂದಿದ್ದು ಸಾಕು ನಾಯಿಯ ಮದುವೆಯಲ್ಲಿ!. ಹೌದು, ಉತ್ತರ ಪ್ರದೇಶದ ಸುಮೇರ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಅಪರೂಪದ ಮದುವೆ ಈ ರೀತಿ ನೆರವೇರಿದ್ದು ಇದೀಗ ಅಚ್ಚರಿ ಮೂಡಿಸಿದೆ.
ಇಲ್ಲಿಯ ಭರುವ ಎಂಬ ಗ್ರಾಮದ ಇಬ್ಬರು ಸಂತರು (ಸನ್ಯಾಸಿಗಳು) ತಮ್ಮ ಸಾಕುನಾಯಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. ಪ್ರಸಿದ್ಧ ಮನ್ಸರ್ ಬಾಬಾನ ಎಂಬ ಶಿವ ದೇವಾಲಯದ ಪ್ರಧಾನ ಅರ್ಚಕ ಸ್ವಾಮಿ ದ್ವಾರಕಾ ದಾಸ್ ಮಹಾರಾಜ್ ಬಾಬಾ ಅವರು ಕಲ್ಲು ಎಂಬ ಒಂದು ನಾಯಿ ಸಾಕಿದ್ದರು.
ಈ ಮುದ್ದಿನ ನಾಯಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದಿದ್ದರು. ಇವರ ಇಚ್ಛೆಯಂತೆ ತಮ್ಮ ನೆಚ್ಚಿನ ನಾಯಿಯ ಕಂಕಣಬಲವೂ ಕೂಡಿ ಬಂದಿತ್ತು. ಮೊದಲೇ ನೋಡಿದ ದಿನಾಂಕದಂತೆ ಪರಚ್‌ನ ಬಜರಂಗಬಲಿ ದೇವಸ್ಥಾನದ ಅರ್ಚಕ ಅರ್ಜುನ್ ದಾಸ್ ಅವರ ಭೂರಿ ಎಂಬ ಸಾಕು ಹೆಣ್ಣು ನಾಯಿಯೊಂದಿಗೆ ಭಾನುವಾರ (ಜೂ. 5) ಮದುವೆ ಮಾಡಿಸಿದರು.