ಕರ್ನಾಟಕ

karnataka

ETV Bharat / bharat

ಮುಂಗಾರು ಅಧಿವೇಶನದ ಮೇಲೆ 'ಪೆಗಾಸಸ್‌' ಪರಿಣಾಮ ಬೀರಿದೆ: ಮಲ್ಲಿಕಾರ್ಜುನ ಖರ್ಗೆ - ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಪೆಗಾಗಸಸ್​​ ಹಗರಣ ಮತ್ತೆ ಸದ್ದು ಮಾಡುತ್ತಿದೆ. ಅಮೆರಿಕದ ಪ್ರಮುಖ ಪತ್ರಿಕೆಯೊಂದರಲ್ಲಿ ಬಂದ ವರದಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇಸ್ರೇಲ್​ ಜತೆಗಿನ ರಕ್ಷಣಾ ಒಪ್ಪಂದದ ಜತೆಗೆ ಪೆಗಾಸಸ್​​​​​​​( ಬೇಹುಗಾರಿಕಾ) ಆ್ಯಪ್​​ ಖರೀದಿ ಒಪ್ಪಂದವೂ ನಡೆದಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕೇಂದ್ರದ ವಿರುದ್ಧ ಮುಗಿ ಬಿದ್ದಿದೆ.

Mallikarjun Kharge
ಮಲ್ಲಿಕಾರ್ಜುನ ಖರ್ಗೆ

By

Published : Jan 31, 2022, 11:31 AM IST

ನವದೆಹಲಿ: ಪೆಗಾಸಸ್‌ ಮುಂಗಾರು ಅಧಿವೇಶನದ ಮೇಲೆ ಪರಿಣಾಮ ಬೀರಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಪ್ರತಿಪಕ್ಷಗಳು ಸಂಸತ್ತಿನ ಕಾರ್ಯ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ ಎಂದು ಆಡಳಿತ ಪಕ್ಷ ಹೇಳಿತ್ತು. ಆದರೆ ಸತ್ಯ ಹೊರಬರಬೇಕಿದೆ. ನಾವು ಈ ವಿಷಯವನ್ನು ಸಂಸತ್​​ನ ಉಭಯ ಸದನಗಳಲ್ಲಿ ಪ್ರಸ್ತಾಪಿಸುತ್ತೇವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನಾಳೆ ಬಜೆಟ್ ಮಂಡನೆಯಾಗಲಿದೆ. ಸಂಸತ್​ನಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ಈಗಾಗಲೇ ಇರುವ ಹೊಸ ಸಮಸ್ಯೆಗಳು ಹಣದುಬ್ಬರ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರು ಮತ್ತು ದಲಿತರ ಮೇಲಿನ ಅಪರಾಧಗಳು ವಿಚಾರಗಳ ಕುರಿತು ಕಾಲಕಾಲಕ್ಕೆ ಪ್ರಸ್ತಾಪಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಇಂದಿನಿಂದ ಬಜೆಟ್​ ಅಧಿವೇಶನ ಆರಂಭ: ಎಲ್ಲರಿಗೂ ಸ್ವಾಗತ ಕೋರಿದ ಪಿಎಂ ಮೋದಿ

ABOUT THE AUTHOR

...view details