ಕರ್ನಾಟಕ

karnataka

By

Published : Jul 14, 2023, 9:27 PM IST

ETV Bharat / bharat

ಮಿನಿ ಸ್ಕರ್ಟ್, ಬರ್ಮುಡಾ ಬ್ಯಾನ್​.. ಹೀಗೆ ಬರುವ ಭಕ್ತರಿಗೆ ದ್ವಾರಕಾಧೀಶ ದೇವಸ್ಥಾನದೊಳಗಿಲ್ಲ ಪ್ರವೇಶ!

ಗುಜರಾತ್‌ನ ಪ್ರಸಿದ್ಧ ಯಾತ್ರಾಸ್ಥಳವಾದ ದ್ವಾರಕಾಧೀಶ ದೇವಸ್ಥಾನದಲ್ಲಿ ಕಡಿಮೆ ಬಟ್ಟೆ ಧರಿಸಿ ಬರದಂತೆ ಬ್ಯಾನರ್​ಗಳನ್ನು ಹಾಕಲಾಗಿದೆ.

ದ್ವಾರಕಾಧೀಶ ದೇವಸ್ಥಾನ
ದ್ವಾರಕಾಧೀಶ ದೇವಸ್ಥಾನ

ದ್ವಾರಕಾ(ಗುಜರಾತ್‌): ದ್ವಾರಕಾಧೀಶ ದೇವಸ್ಥಾನದಲ್ಲಿ ಗಿಡ್ಡ ಬಟ್ಟೆ ಧರಿಸುವುದನ್ನು ನಿಷೇಧಿಸಲಾಗಿದೆ. ಜಗತ್ ಮಂದಿರದ ಘನತೆ ಕಾಪಾಡುವ ಬಟ್ಟೆ ಧರಿಸಿದವರಿಗೆ ಮಾತ್ರ ದೇವಸ್ಥಾನದ ಆವರಣ ಪ್ರವೇಶಿಸುವಂತೆ ಬ್ಯಾನರ್​ಗಳನ್ನು ಹಾಕಲಾಗಿದೆ.

'ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿರುವ ಸಾಮ ದ್ವಾರಕಾಧೀಶ ದೇಗುಲದಲ್ಲಿರುವ ಭಕ್ತರು ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರಗಳನ್ನು ಧರಿಸಿ ಬರುವವರಿಗೆ ಮಾತ್ರ ಜಗತ್ಮಂದಿರ ಪ್ರವೇಶಿಸಲು ಅನುಮತಿ ನೀಡಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಜಗತ್ಮಂದಿರಕ್ಕೆ ಭೇಟಿ ನೀಡುವ ಯಾವುದೇ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ದೇವಾಲಯದ ಆವರಣದಲ್ಲಿ ಕೈಗೊಂಡ ನಿರ್ಣಯದ ಕುರಿತು ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಅಲ್ಲದೇ, ಜಗತ್ ಮಂದಿರಕ್ಕೆ ಭೇಟಿ ನೀಡಲು ಬರುವ ಸಂಭಾವ್ಯ ಸಂದರ್ಶಕರಿಗೆ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ' ಎಂದು ಪ್ರಾಂತೀಯ ಅಧಿಕಾರಿ ಪಾರ್ಥ ತಲ್ಸಾನಿಯಾ ತಿಳಿಸಿದ್ದಾರೆ.

ಗುಜರಾತ್‌ನ ಪ್ರಸಿದ್ಧ ಯಾತ್ರಾಸ್ಥಳವಾದ ದ್ವಾರಕಾ ಹಿಂದೂ ಧರ್ಮದ ಮುಖ್ಯ ಯಾತ್ರಾ ಸ್ಥಳವಾಗಿದೆ. ದ್ವಾರಕಾಧೀಶನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈಗ ಭಕ್ತರು ದ್ವಾರಕಾ ದೇವಸ್ಥಾನಕ್ಕೆ ಚಿಕ್ಕ ಬಟ್ಟೆ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಇದರೊಂದಿಗೆ, ದೇವಾಲಯದ ಹೊರಗೆ ಹಲವಾರು ಬ್ಯಾನರ್‌ಗಳನ್ನು ಸಹ ಹಾಕಲಾಗಿದ್ದು, ಇದರಲ್ಲಿ ಭಕ್ತರು ಸಣ್ಣ ಬಟ್ಟೆಗಳನ್ನು ಧರಿಸಿ ದೇವಾಲಯಕ್ಕೆ ಪ್ರವೇಶಿಸದಂತೆ ಮನವಿ ಮಾಡಲಾಗಿದೆ.

ದೇವಾಲಯದ ವಿವಿಧೆಡೆ ಬ್ಯಾನರ್ ಅಳವಡಿಕೆ:ಭಾರತೀಯ ಸಂಸ್ಕೃತಿಯ ವೇಷಭೂಷಣಗಳನ್ನು ಧರಿಸಿದವರಿಗೆ ಮಾತ್ರ ದ್ವಾರಕಾಧೀಶ ದೇಗುಲಕ್ಕೆ ಪ್ರವೇಶ ನೀಡಲಾಗುವುದು ಎಂದು ದೇವಸ್ಥಾನದ ಹೊರಗೆ ಬೋರ್ಡ್ ಹಾಕಲಾಗಿದೆ. ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಈ ವಿಶೇಷ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಭಾಷೆಗಳಲ್ಲಿ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡುವ ಬ್ಯಾನರ್‌ಗಳನ್ನು ದೇವಾಲಯದ ವಿವಿಧೆಡೆ ಹಾಕಲಾಗಿದೆ. ಹೋಟೆಲ್ ಮಾಲೀಕರು, ರಿಕ್ಷಾ ಚಾಲಕರು ಮತ್ತು ಸ್ಥಳೀಯ ನಾಗರಿಕರು ಈ ನಿರ್ಧಾರದ ಬಗ್ಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ತಿಳಿಸಲು ಸಮಿತಿಯು ವಿನಂತಿಸಿದೆ.

ಪ್ರಸ್ತುತ ಗುಜರಾತ್‌ನಲ್ಲಿ ಇಂತಹ ಹಲವು ದೇವಾಲಯಗಳಿವೆ. ಉದಾಹರಣೆಗೆ ಶಾಮಲಾಜಿ ದೇವಸ್ಥಾನದಲ್ಲಿ ಗಿಡ್ಡ ಬಟ್ಟೆ ಧರಿಸಿದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಅದೇ ರೀತಿ ಅಂಬಾಜಿ ದೇವಸ್ಥಾನದಲ್ಲಿ ಗಿಡ್ಡ ಬಟ್ಟೆ ಧರಿಸಿದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ಮಹಿಳೆಯರಿಗೆ ದುಪಟ್ಟಾ ವ್ಯವಸ್ಥೆ :ಕಳೆದ ಕೆಲ ವರ್ಷಗಳಿಂದ ಯುವಕ ಯುವತಿಯರು ವೆಸ್ಟರ್ನ್​ ಡ್ರೆಸ್ ಕ್ರೇಜ್​ಗೆ ಮಾರುಹೋಗಿದ್ದಾರೆ. ಫ್ಯಾಷನೆಬಲ್ ಆಗಿ ಕಾಣಲು ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗುತ್ತಾರೆ. ಇಂತಹ ಸಮಯದಲ್ಲಿ ಯುವಕ-ಯುವತಿಯರು ದೇವಸ್ಥಾನಕ್ಕೆ ಹೋಗುವುದನ್ನು ತಡೆಯುವ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ಇದರ ಪರಿಣಾಮವಾಗಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಡ್ರೆಸ್ ಕೋಡ್ ಹೇರುವಂತೆ ಸಮಾಜದ ಕೆಲವು ವರ್ಗಗಳಿಂದ ಶಿಫಾರಸುಗಳು ಬಂದಿವೆ.

ಕೆಲವು ದೇವಾಲಯಗಳು ಧೋತಿಯ ವ್ಯವಸ್ಥೆ ಮಾಡಿದ್ದರೂ ಭಕ್ತಾದಿಗಳು ಮಿನಿ ಸ್ಕರ್ಟ್ ಅಥವಾ ಬರ್ಮುಡಾ ಶಾರ್ಟ್ಸ್‌ನಲ್ಲಿ ಬರುತ್ತಿದ್ದಾರೆ. ಹೀಗಾಗಿ ನಿಯಮಗಳನ್ನು ಪಾಲಿಸಿ, ದಯವಿಟ್ಟು ಚಿಕ್ಕ ಬಟ್ಟೆಗಳನ್ನು ಧರಿಸಿ ದೇವಾಲಯಕ್ಕೆ ಬರಬೇಡಿ ಎಂದು ದೇವಾಲಯದ ಅಧಿಕಾರಿಗಳು ವಿನಂತಿಸಿದ್ದಾರೆ. ಮಹಿಳೆಯರಿಗೆ ದುಪಟ್ಟಾ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ:ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಸಂಘಟನೆಗಳ ಆಗ್ರಹ

ABOUT THE AUTHOR

...view details