ನವದೆಹಲಿ:ವಿಮಾನ ಪ್ರಯಾಣದಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿದ್ದು ಇದನ್ನು ಗಮನದಲ್ಲಿಟ್ಟು ವಿಮಾನ ಪ್ರಯಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ವರೆಗೆ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿತ್ತು. ಆದರೆ, ಇಂದಿನಿಂದ ಮಾಸ್ಕ್ ಧರಿಸುವುದು ಅಗತ್ಯವಿಲ್ಲ ಎಂದು ಹೇಳಿದ್ದು, ಪ್ರಯಾಣಿಕರು ತಮ್ಮ ಇಷ್ಟದಂತೆ ಇರಬಹುದು ಎಂದಿದೆ. ಆರೋಗ್ಯ ಸಚಿವಾಲಯದೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯ ಈ ನಿರ್ಧಾರವನ್ನು ಪ್ರಕಟಿಸಿದೆ.
ಇದುವರೆಗೂ ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಧರಿಸುವುದು ಕಡ್ಡಾಯವಾಗಿತ್ತು. ವಿಮಾನಗಳಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಮಾಸ್ಕ್ ಧರಿಸದವರಿಗೆ ದಂಡ ಸಹ ವಿಧಿಸುವ ನಿಯಮ ಹೇರಲಾಗಿತ್ತು.
ಈ ಎಲ್ಲ ನಿಯಮಗಳು ಇನ್ನು ಮುಂದೆ ಪಾಲನೆಯಾಗುವುದಿಲ್ಲ. ನಿಮಗೆ ಇಷ್ಟವಿದ್ದರೆ ಮಾಸ್ಕ್ ಧರಿಸಬಹುದು. ಇಲ್ಲವೇ ಹಾಗೆಯೇ ಪ್ರಯಾಣ ಮಾಡಬಹುದು. ಮಾಸ್ಕ್ ಬಳಕೆಗೆ ಸಂಬಂಧಿಸಿದಂತೆ ದಂಡದ ಯಾವುದೇ ಉಲ್ಲೇಖವನ್ನು ಘೋಷಿಸಬೇಕಾಗಿಲ್ಲ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ:ಆದಾಯ ತೆರಿಗೆ ವಂಚನೆ ಆರೋಪ: ಆಸ್ಪತ್ರೆ, ಲ್ಯಾಬ್, ಡಯಾಗ್ನಸ್ಟಿಕ್ ಸೆಂಟರ್‌ಗಳ ಮೇಲೆ ಐಟಿ ದಾಳಿ