ಕರ್ನಾಟಕ

karnataka

ETV Bharat / bharat

ಅನಗತ್ಯವಾಗಿ ಹೊರ ಹೋಗಬೇಡಿ, ಮನೆಯಲ್ಲಿದ್ದರೂ ಮಾಸ್ಕ್​ ಹಾಕಿ ಎಂದ ಕೇಂದ್ರ - ಕೋವಿಡ್ ಹಾವಳಿ

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮನೆಯಿಂದ ಹೊರಹೋಗದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Dr. VK Paul
Dr. VK Paul

By

Published : Apr 26, 2021, 7:06 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಹೊರಬರಲು ಕೇಂದ್ರ ಈಗಾಗಲೇ ಅನೇಕ ಮಾರ್ಗಸೂಚಿ ಜಾರಿಗೊಳಿಸಿದೆ. ಇದೀಗಮನೆಯಲ್ಲಿದ್ದರೂ ಮಾಸ್ಕ್ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ಅವರು, ಇದು ಮನೆಯಲ್ಲಿ ಇರಬೇಕಾದ ಸಮಯ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ಮನವಿ ಮಾಡಿದ್ದಾರೆ.

ಕುಟುಂಬದಲ್ಲಿ ಕೋವಿಡ್​-19 ಸೋಂಕಿತ ವ್ಯಕ್ತಿ ಇದ್ದರೆ, ಅಥವಾ ಪ್ರಕರಣ ಕಂಡು ಬಂದಿದ್ದರೆ ಮನೆಯೊಳಗೆ ಇರುವ ಎಲ್ಲರೂ ಮಾಸ್ಕ್​ ಹಾಕಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ವೈರಸ್​ ಇತರರಿಗೂ ಹರಡಬಹದು. ಮನೆಯಲ್ಲಿ ಕೋವಿಡ್​ ಸಂಬಂಧಿಸಿದ ರೋಗ ಲಕ್ಷಣ ಹೊಂದಿರುವ ಯಾರಾದರೂ ಕಂಡು ಬಂದರೆ ತಕ್ಷಣವೇ ಪ್ರತ್ಯೇಕವಾಗಿ ವಾಸಿಸಬೇಕು ಎಂದು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ವರದಿಗಳು ಬರುವವರೆಗೆ ಕಾಯಬೇಡಿ ಎಂದರು.

ಇದನ್ನೂ ಓದಿ: ಮದುವೆಯಾಗಿ 7 ವರ್ಷವಾದ್ರೂ ಪರಸಂಗ ಪ್ರೀತಿ: ಇಷ್ಟಪಟ್ಟವನ ಜೊತೆ ಹೆಂಡತಿ ಮದುವೆ ಮಾಡಿಸಿದ ಗಂಡ!

ಇದೇ ವೇಳೆ, ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಲವ್​ ಅಗರ್ವಾಲ್​, ಪ್ರಸ್ತುತ ಕೋವಿಡ್ ಪರಿಸ್ಥಿತಿ ಬಗ್ಗೆ ಜನರು ಆತಂಕಪಡಬೇಕಾಗಿಲ್ಲ. ಅಗತ್ಯವಿದ್ದಾಗ ಮಾತ್ರ ಆಸ್ಪತ್ರೆಗೆ ದಾಖಲಾಗಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಮೇಲಿಂದ ಮೇಲೆ ಸ್ಯಾನಿಟೈಸರ್ಸ್ ಬಳಕೆ ಕಡ್ಡಾಯ ಮಾಡಿಕೊಳ್ಳಿ ಎಂದು ಅವರು ಮಾಹಿತಿ ನೀಡಿದರು.

ABOUT THE AUTHOR

...view details