ಕರ್ನಾಟಕ

karnataka

By

Published : Dec 3, 2022, 9:53 AM IST

ETV Bharat / bharat

ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ: 5 ಎಕೆ 47, 5 ಪಿಸ್ತೂಲ್​ಗಳು ವಶ

ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆಯನ್ನು ತಡೆಗಟ್ಟಿರುವ ಇಂಟೆಲಿಜೆನ್ಸ್ ತಂಡವು ಫಿರೋಜ್‌ಪುರ ಗಡಿಯಿಂದ 5 ಎಕೆ 47 ಮತ್ತು 5 ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ.

Weapon Smuggling At India Pak Border  CI Amritsar Recovered weapon  Weapon Smuggling case news  ಸುಳಿವಿನ ಮೇರೆಗೆ ಕಾರ್ಯಾಚರಣೆ  ಭಾರೀ ಶಸ್ತ್ರಾಸ್ತ್ರ ವಶ  ಹಿಂದೆ ಪತ್ತೆಯಾದ ಶಸ್ತ್ರಾಸ್ತ್ರಗಳು  ಕಳ್ಳಸಾಗಣೆಯನ್ನು ತಡೆಗಟ್ಟಿರುವ ಇಂಟೆಲಿಜೆನ್ಸ್ ತಂಡ  ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ
ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ

ಅಮೃತಸರ:ಪಂಜಾಬ್‌ನ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡವು ಎರಡು ದಿನಗಳ ನಂತರ ಮತ್ತೊಮ್ಮೆ ಶಸ್ತ್ರಾಸ್ತ್ರಗಳ ರವಾನೆಯನ್ನು ತಡೆಗಟ್ಟಿದ್ದು, ಫಿರೋಜ್‌ಪುರ ಗಡಿಯಿಂದ ಅವುಗಳನ್ನು ವಶಪಡಿಸಿಕೊಂಡಿದೆ. ಈ ಕುರಿತು ಮಾಹಿತಿಯನ್ನು ಡಿಜಿಪಿ ಗೌರವ್ ಯಾದವ್ ಖಚಿತಪಡಿಸಿದ್ದಾರೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತದ ಗಡಿಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸುಳಿವಿನ ಮೇರೆಗೆ ಕಾರ್ಯಾಚರಣೆ: ಸಿಐ ಅಮೃತಸರ ತಂಡವು ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಕೂಡಲೇ ಎಐಜಿ ಸಿಐ ಅಮೃತಸರ ಅಮರ್‌ಜಿತ್ ಸಿಂಗ್ ಬಾಜ್ವಾ ಅವರ ನೇತೃತ್ವದ ತಂಡವನ್ನು ಫಿರೋಜ್‌ಪುರಕ್ಕೆ ಕಳುಹಿಸಲಾಯಿತು. ಸಿಐ ತಂಡ ಫಿರೋಜ್‌ಪುರ ತಲುಪಿದ ಬಳಿಕ ಬಿಎಸ್‌ಎಫ್ ಅನ್ನು ಸಂಪರ್ಕಿಸಿದೆ. ನಿಗದಿತ ಮಾಹಿತಿಯೊಂದಿಗೆ ಸ್ಥಳವನ್ನು ಶೋಧಿಸಿ ಶಸ್ತ್ರಾಸ್ತ್ರಗಳ ದಾಸ್ತಾನುವನ್ನು ಪತ್ತೆ ಹಚ್ಚಿತು.

ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ

ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ:ಶಸ್ತ್ರಾಸ್ತ್ರ ದಾಸ್ತಾನುದಲ್ಲಿದ್ದ 5 ಎಕೆ 47 ಮತ್ತು 5 ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, 5 ಎಕೆ 47 ಬಂದೂಕಿನ ಮ್ಯಾಗಜಿನ್‌ಗಳು ಮತ್ತು 10 ಪಿಸ್ತೂಲ್​ಗಳ ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಭಾರತ ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ

ಹಿಂದೆ ಪತ್ತೆಯಾದ ಶಸ್ತ್ರಾಸ್ತ್ರಗಳು:ಸಿಐ ಅಮೃತಸರ ತಂಡದ ಮಾಹಿತಿಯ ಆಧಾರದ ಮೇಲೆ ಪಂಜಾಬ್ ಪೊಲೀಸರು ಎರಡು ದಿನಗಳ ಹಿಂದೆ ಫಿರೋಜ್‌ಪುರ ಗಡಿಯಿಂದ ಶಸ್ತ್ರಾಸ್ತ್ರಗಳ ವಶಪಡಿಸಿಕೊಳ್ಳಲಾಗಿತ್ತು. ನವೆಂಬರ್​ 30ರಂದು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಮೇಲೆ 5 ಎಕೆ 47 ಮತ್ತು 5 ಪಿಸ್ತೂಲ್‌ಗಳನ್ನು ಸೇರಿದಂತೆ 13 ಕೆಜಿ ಹೆರಾಯಿನ್ ಸಹ ಸೇರಿತ್ತು.

ಓದಿ:ಕೊಚ್ಚಿಯಲ್ಲಿ 197 ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್ ವಿಮಾನ ತುರ್ತು ಭೂಸ್ಪರ್ಶ

ABOUT THE AUTHOR

...view details