ನವದೆಹಲಿ: ಕೋವಿಡ್ ಲಸಿಕೆ ಲಭ್ಯವಾದ ಬಳಿಕ ಜನ ಕೊರೊನಾ ನಿಯಮಗಳನ್ನು ಲಘುವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಲಸಿಕೆ ಲಭ್ಯವಿದೆ ಎಂದು ಕೋವಿಡ್ ನಿಯಮ ಪಾಲಿಸುವುದನ್ನ ಮರೆಯಬೇಡಿ; ಸಚಿವ ಡಾ.ಹರ್ಷವರ್ಧನ್ - ಲಸಿಕೆ
ಸೋಂಕು ಕಡಿಮೆಯಾಗುತ್ತಿರುವುದರಿಂದ ಅನ್‌ಲಾಕ್ ಆರಂಭಿಸುತ್ತಿದ್ದೇವೆ. ಆದರೆ, ನಾವೆಲ್ಲಾ ತುಂಬಾ ಜಾಗರೂಕರಾಗಿರಬೇಕು ಮತ್ತು ಕೋವಿಡ್‌ನ ಪ್ರೋಟೋಕಾಲ್ ಸರಿಯಾಗಿ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವರು, ಸೋಂಕು ಕಡಿಮೆಯಾಗುತ್ತಿರುವುದರಿಂದ ಅನ್‌ಲಾಕ್ ಆರಂಭಿಸುತ್ತಿದ್ದೇವೆ. ಆದರೆ, ನಾವೆಲ್ಲಾ ತುಂಬಾ ಜಾಗರೂಕರಾಗಿರಬೇಕು ಮತ್ತು ಕೋವಿಡ್‌ನ ಪ್ರೋಟೋಕಾಲ್ ಸರಿಯಾಗಿ ಪಾಲಿಸಬೇಕು ಎಂದಿದ್ದಾರೆ.
ಎಲ್ಲರಿಗೂ ಉಚಿತವಾಗಿ ಕೋವಿಡ್ -19 ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೂನ್ 21 ರಿಂದ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಸೌಲಭ್ಯ ಒದಗಿಸಲಾಗುವುದು. ಈವರೆಗೆ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ನೀಡಲಾಗಿತ್ತು ಎಂದು ಸಚಿವ ಹರ್ಷವರ್ಧನ್ ವಿವರಿಸಿದ್ದಾರೆ.