ಮುಂಬೈ: ನಾನು ನಟರಾದ ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ವಿರುದ್ಧ ಮಾತನಾಡಿಲ್ಲ. ಆದರೆ, ಅವರ ಕೆಲಸಗಳ ವಿರುದ್ಧ ಇದ್ದೇನಷ್ಟೇ. ಅವರೆಲ್ಲ ನಮ್ಮ ಹೀರೋಗಳಲ್ಲ. ಅವರು ಜನರ ಪರ ಇದ್ದಿದ್ದರೆ ಜನರ ಕಷ್ಟಗಳ ಸಂದರ್ಭದಲ್ಲಿ ಪಕ್ಕಕ್ಕೆ ನಿಲ್ಲುತ್ತಿರಲಿಲ್ಲ. ಅವರು ಕಾಗದದ ಹುಲಿಗಳಾಗಿ ಮುಂದುವರಿಯಲು ಮುಂದಾದರೆ ಅದನ್ನ ನನ್ನದೇನೂ ಅಭ್ಯಂತರ ಇಲ್ಲ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
ನಾವು ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ. ಅವರ ಸಿನಿಮಾಗಳು ಬಿಡುಗಡೆ ಆದಾಗ ಕಪ್ಪು ಬಾವುಟ ಹಾರಿಸಿಯೇ ಹಾರಿಸುತ್ತೇವೆ. ಅಥವಾ ಅವತ್ತು ಆ ಸ್ಥಳದಲ್ಲಿ ಇರುತ್ತೇವೆ. ನಾವು ಪ್ರಜಾಪ್ರಭುತ್ವ ಮಾರ್ಗದಲ್ಲೇ ನಡೆಯುತ್ತೇವೆ. ನಾವು ಗೋಡ್ಸೆ ಭಕ್ತರಲ್ಲ ಆದರೆ ನಾವು ಗಾಂಧಿ ವಾದಿಗಳು ಎಂದು ನಾನಾ ಪಟೋಲೆ ಹೇಳಿದ್ದಾರೆ.