ಕರ್ನಾಟಕ

karnataka

ETV Bharat / bharat

'ನಮ್ಮಲ್ಲಿ ಯೋಗಿ ಇಲ್ಲ, ಭೋಗಿಗಳಿದ್ದಾರೆ': ಯುಪಿ ಸರ್ಕಾರಕ್ಕೆ ರಾಜ್ ಠಾಕ್ರೆ ಮೆಚ್ಚುಗೆ - ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ ಠಾಕ್ರೆ ವಾಗ್ದಾಳಿ

ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಂಎನ್​ಎಸ್​​ ಮುಖ್ಯಸ್ಥ ರಾಜ್​ ಠಾಕ್ರೆ, ನಮ್ಮಲ್ಲಿ ಯೋಗಿ ಇಲ್ಲ, ಬದಲಾಗಿ ಭೋಗಿಗಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Raj Thackeray on Loudspeaker in mosques
Raj Thackeray on Loudspeaker in mosques

By

Published : Apr 28, 2022, 4:57 PM IST

ಮುಂಬೈ(ಮಹಾರಾಷ್ಟ್ರ):ಮಸೀದಿಗಳಲ್ಲಿ ಅಳವಡಿಕೆ ಮಾಡಿರುವ ಧ್ವನಿವರ್ಧಕ ತೆರವು ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಆದೇಶ ಹೊರಡಿಸಿದ್ದು, ಈ ನಿರ್ಧಾರಕ್ಕೆ ಮಹಾರಾಷ್ಟ್ರದ ನವನಿರ್ಮಾಣ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಇಂತಹ ಕೆಲಸ ಮಾಡಲು ಯಾವುದೇ ರೀತಿಯ ಯೋಗಿಗಳಿಲ್ಲ, ಇರುವುದೆಲ್ಲಾ ಭೋಗಿಗಳು ಎಂದು ಟೀಕಿಸಿದ್ದಾರೆ.

ಧಾರ್ಮಿಕ ಸ್ಥಳಗಳು ಹಾಗೂ ಮಸೀದಿಗಳಿಂದ ಧ್ವನಿವರ್ಧಕ ತೆಗೆದು ಹಾಕುವ ನಿರ್ಧಾರ ಕೈಗೊಂಡಿದ್ದಕ್ಕಾಗಿ ನಾನು ಉತ್ತರ ಪ್ರದೇಶ ಯೋಗಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಆದರೆ, ದುರದೃಷ್ಟವಶಾತ್​​ ಮಹಾರಾಷ್ಟ್ರದಲ್ಲಿ ನಮಗೆ ಯಾವುದೇ ರೀತಿಯ ಯೋಗಿಗಳು ಇಲ್ಲ. ನಮ್ಮಲ್ಲಿರುವುದು ಭೋಗಿಗಳು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ರಜೆ ತೆಗೆದುಕೊಳ್ಳದೇ ಲಂಡನ್​ ಪ್ರವಾಸ; ಐಪಿಎಸ್ ಮಹಿಳಾ​ ಅಧಿಕಾರಿ ಅಮಾನತು

ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕ ತೆರವುಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆದೇಶ ಹೊರಡಿಸುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಈಗಾಗಲೇ ಮಸೀದಿಗಳು ಸೇರಿದಂತೆ ಅನೇಕ ಧಾರ್ಮಿಗಳ ಸ್ಥಳಗಳಲ್ಲಿನ ಧ್ವನಿವರ್ಧಕ ತೆರವು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿನ ಮಸೀದಿಗಳಲ್ಲಿ ಅಳವಡಿಕೆ ಮಾಡಿರುವ ಧ್ವನಿವರ್ಧಕ ತೆರವು ಮಾಡುವಂತೆ ಕಳೆದ ಕೆಲ ದಿನಗಳ ಹಿಂದೆ ರಾಜ್ ಠಾಕ್ರೆ ಅಲ್ಲಿನ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ABOUT THE AUTHOR

...view details