ಕರ್ನಾಟಕ

karnataka

ETV Bharat / bharat

ಹಿಂದೂ ಮಹಾಸಾಗರ ವ್ಯಾಪ್ತಿಯ ದೇಶಗಳಿಗೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್​ ಸಿಂಗ್​​ - Defence Minister Rajnath Singh

ಕಡಲ ನೆರೆಹೊರೆಯ ರಾಷ್ಟ್ರಗಳನ್ನು ಸುರಕ್ಷಿತವಾಗಿರಿಸುವುದು ಮುಖ್ಯವೆಂದು ಭಾರತ ಪರಿಗಣಿಸಿದ್ದು, ಅಗತ್ಯ ಬಿದ್ದರೆ ಸಹಾಯ ಒದಗಿಸಲು ಬದ್ಧರಾಗಿದ್ದೇವೆ ಎಂದು ರಾಜನಾಥ್​ ಸಿಂಗ್​​ ಭರವಸೆ ನೀಡಿದ್ದಾರೆ.

Rajnath Singh
ರಾಜನಾಥ್​ ಸಿಂಗ್​​

By

Published : Feb 4, 2021, 4:50 PM IST

ಬೆಂಗಳೂರು: ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬರುವ ದೇಶಗಳಿಗೆ ಭದ್ರತೆ ಒದಗಿಸಲು, ಸಹಾಯ ಮಾಡಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಅಂತಾರಾಷ್ಟ್ರೀಯ ಏರ್​ ಶೋ ವೀಕ್ಷಿಸಿದ ರಾಜನಾಥ್​ ಸಿಂಗ್​ , ಬಳಿಕ ತಾಜ್ ಯಶವಂತಪುರ ಹೋಟೆಲ್​​ನಲ್ಲಿ ಏರೋ ಇಂಡಿಯಾ 2021 ವಿಚಾರವಾಗಿ ಸಂವಾದ ನಡೆಸಿದ್ದಾರೆ.

ಈ ವೇಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಿಂದೂ ಮಹಾಸಾಗರ ವಲಯದ ವಿದೇಶಿ ರಾಷ್ಟ್ರಗಳ ರಕ್ಷಣಾ ಸಚಿವರ ಜೊತೆ ಮಾತನಾಡಿದ ಅವರು, ​ಪ್ರಪಂಚವು ಹಂಚಿಕೊಂಡಿರವ ಸಾಗರಗಳಲ್ಲಿ ಹಿಂದೂ ಮಹಾಸಾಗರ ಪ್ರಮುಖವಾಗಿದೆ. ಈ ಪ್ರದೇಶವು ಮಾನವ ಇತಿಹಾಸದ, ಸಮಾಜಗಳ ವಿಕಾಸದ ಕೇಂದ್ರಬಿಂದುವಾಗಿದೆ. ಅಲ್ಲಿನ ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎಂದರು.

ಇದನ್ನೂ ಓದಿ: ಏರ್ ಶೋನಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ಗಮನಿಸಿದ್ದೇನೆ: ಸಿಎಂ ಬಿಎಸ್​ವೈ

ಹಿಂದೂ ಮಹಾಸಾಗರ ಪ್ರದೇಶವು ಸಂಪನ್ಮೂಲಗಳ ಮೂಲವಾಗಿ ಕಾರ್ಯನಿರ್ವಹಿಸುತ್ತಲೇ ಬಂದಿದೆ. ವಿಶೇಷವಾಗಿ ಮೀನುಗಾರಿಕೆ, ಜಲಚರ ಸಾಕಣೆ, ಸಮುದ್ರದಾಳದ ಗಣಿಗಾರಿಕೆ ಹಾಗೂ ಖನಿಜಗಳ ಕ್ಷೇತ್ರ, ಸಾಗರ ಪ್ರವಾಸೋದ್ಯಮ, ಹಡಗು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ಏಕತೆ ಮತ್ತು ಒಗ್ಗಟ್ಟಿನ ಮೂಲಕ ಇಲ್ಲಿನ ನೆರೆಹೊರೆಯ ರಾಷ್ಟ್ರಗಳನ್ನು ಸುರಕ್ಷಿತವಾಗಿರಿಸುವುದು ಮುಖ್ಯವೆಂದು ಭಾರತ ಪರಿಗಣಿಸಿದೆ ಎಂದು ಸಚಿವರು ಹೇಳಿದರು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕೈಗೊಂಡ ಆಪರೇಷನ್ 'ಸಮುದ್ರ ಸೇತು' ಅಡಿಯಲ್ಲಿ ನಮ್ಮ ನೌಕಾಪಡೆ ಸುಮಾರು 4,000 ಭಾರತೀಯ ಪ್ರಜೆಗಳನ್ನು ಈ ಪ್ರದೇಶಗಳಿಂದ ಯಶಸ್ವಿಯಾಗಿ ಸ್ಥಳಾಂತರಿಸಿತು. ನಮ್ಮ ಕಡಲ ನೆರೆಹೊರೆ ದೇಶಗಳ ಸಹಾಯವಿಲ್ಲದೆ ಈ ಕಾರ್ಯ ಯಶಸ್ವಿಯಾಗುತ್ತಿರಲಿಲ್ಲ. ಹೀಗಾಗಿ ನಾವು 'ಸಾಗರ್​' (SAGAR) ಮಿಷನ್​ ಅಡಿ ಈ ರಾಷ್ಟ್ರಗಳಿಗೆ ಅಗತ್ಯ ಬಿದ್ದರೆ ಸಹಾಯ ಒದಗಿಸಲು ಬದ್ಧರಾಗಿದ್ದೇವೆ ಎಂದು ರಾಜನಾಥ್​ ಸಿಂಗ್​​ ಭರವಸೆ ನೀಡಿದ್ದಾರೆ.

ABOUT THE AUTHOR

...view details