ಕರ್ನಾಟಕ

karnataka

ETV Bharat / bharat

Hanuman birthplace: ತಿರುಮಲದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ - WE ARE BUILDING SRIVARI

ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರು ಆಕಾಶಗಂಗ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಂಜನಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತಿರುಮಲದಲ್ಲಿರುವ ಅಂಜನಾದ್ರಿಯೇ ಹನುಮಾನ್ ಜನ್ಮಸ್ಥಳ ಎಂದು ನಾವು ನಂಬುತ್ತೇವೆ ಎಂದು ಸ್ಪಷ್ಟಪಡಿಸಿದರು.

ವೈ.ವಿ. ಸುಬ್ಬರೆಡ್ಡಿ
ವೈ.ವಿ. ಸುಬ್ಬರೆಡ್ಡಿ

By

Published : Jun 19, 2021, 7:37 PM IST

ತಿರುಪತಿ (ಆಂಧ್ರಪ್ರದೇಶ): ತಿರುಮಲದಲ್ಲಿರುವ ಅಂಜನಾದ್ರಿಯೇ ಹನುಮಾನ್ ಜನ್ಮಸ್ಥಳ ಎಂದು ನಾವು ನಂಬುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದರು. ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ಮಂಡಳಿಯ ಸದಸ್ಯರು ಆಕಾಶಗಂಗ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಾಲಾಂಜನೇಯಸ್ವಾಮಿ, ಅಂಜನಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಮಾತನಾಡಿದ ಅವರು, ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ಆಕಾಶಗಂಗೆಯಲ್ಲಿರುವ ದೇವಾಲಯದ ಅಭಿವೃದ್ಧಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು.

ಹನುಮನ ಜನ್ಮಸ್ಥಳ ವಿವಾದ ಸಂಬಂಧ ಇತರ ರಾಜ್ಯಗಳೊಂದಿಗೆ ಜಗಳಕ್ಕಿಳಿಯುವುದು ನಮ್ಮ ಉದ್ದೇಶವಲ್ಲ ಎಂದು ಹೇಳಿದ ಅವರು, ತಿರುಮಲದಲ್ಲಿರುವ ಅಂಜನಾದ್ರಿ ಹನುಮಾನ್ ಜನ್ಮಸ್ಥಳ ಎಂದು ನಾವು ನಂಬುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜಮ್ಮುವಿನಿಂದ ಕನ್ಯಾಕುಮಾರಿಯವರಿಗೆ ಶ್ರೀವಾರಿ ದೇವಾಲಯಗಳ ನಿರ್ಮಾಣ

ಶ್ರೀವಾರಿ ಟ್ರಸ್ಟ್ ಮೂಲಕ 500 ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಬಹಿರಂಗಪಡಿಸಿದರು. ಜಮ್ಮುವಿನಿಂದ ಕನ್ಯಾಕುಮಾರಿ ವರಿಗೆ ಶ್ರೀವಾರಿ ದೇವಾಲಯಗಳನ್ನು ನಿರ್ಮಿಸುತ್ತಿದ್ದೇವೆ. ಒಂದು ವರ್ಷದೊಳಗೆ ತೆಲುಗು ರಾಜ್ಯಗಳಲ್ಲಿ 500 ದೇವಾಲಯಗಳನ್ನು ನಿರ್ಮಿಸಲಾಗುವುದು. ಶ್ರೀವಾಣಿ ಟ್ರಸ್ಟ್‌ನ ಹಣವನ್ನು ದೇವಾಲಯಗಳ ನಿರ್ಮಾಣಕ್ಕೆ ಬಳಸಲಿದ್ದೇವೆ. ರಾಜ್ಯದಲ್ಲಿ 13 ಹೊಸ ಕಲ್ಯಾಣ ಮಂಡಳಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ಪ್ರಕೃತಿ ಕೃಷಿ ಮಾಡಲು ನಾವು ರೈತರನ್ನು ಪ್ರೋತ್ಸಾಹಿಸುತ್ತೇವೆ. ಪ್ರಕೃತಿ ಕೃಷಿಯ ಮೂಲಕ ಬೆಳೆದ ಬೆಳೆಗಳಿಗೆ ರಿಯಾಯಿತಿ ದರದಲ್ಲಿ ದರ ನೀಡುವುದಾಗಿ ಹೇಳಿದರು. ನೈಸರ್ಗಿಕವಾಗಿ ಬೆಳೆದ ಭತ್ತ, ಬೇಳೆಕಾಳು ಮತ್ತು ತುಪ್ಪವನ್ನು ಖರೀದಿಸುತ್ತೇವೆ. 'ಗುಡಿಗೊಂದು ಗೋಮಾತೆ' ಮೂಲಕ ದೇಶದ 100 ದೇವಾಲಯಗಳಿಗೆ ಹಸುಗಳನ್ನು ದಾನ ಮಾಡಲಾಗಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದರು.

ABOUT THE AUTHOR

...view details