ಕೋಲ್ಕತಾ:ದೇಶದ ಎಲ್ಲ ಜಾತಿ ಹಾಗೂ ಧರ್ಮೀಯರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.
ಕೋಮು ಸೌಹಾರ್ದತೆಯನ್ನು ನಾವು ಬಲವಾಗಿ ನಂಬುತ್ತೇವೆ; ಮಮತಾ ಬ್ಯಾನರ್ಜಿ - ಮಮತಾ ಬ್ಯಾನರ್ಜಿ ಟ್ವೀಟ್
ಏಕತೆಯೇ ನಮ್ಮ ಶಕ್ತಿ. ಹಾಗಾಗಿ ನಾವು ಕೋಮು ಸೌಹಾರ್ದತೆಯನ್ನು ಬಲವಾಗಿ ನಂಬುತ್ತೇವೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ತಮ್ಮ ಸರ್ಕಾರ ನೀಡಿದ ಕೊಡುಗೆಯನ್ನು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಹಕ್ಕುಗಳ ದಿನ (ಮೈನಾರಿಟಿ ರೈಟ್ಸ್ ಡೇ)ದ ನಿಮಿತ್ತ ಟ್ವೀಟ್ ಮಾಡಿರುವ ಅವರು, ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿದ ನೆಲವಾಗಿದೆ. ಇಲ್ಲಿರುವ ಎಲ್ಲ ಸಮುದಾಯಗಳು, ಜಾತಿ ಹಾಗೂ ಧರ್ಮೀಯರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ಕೋಮು ಸೌಹಾರ್ದತೆಯನ್ನು ಬಲವಾಗಿ ನಂಬುತ್ತೇವೆ. ಏಕತೆಯೇ ನಮ್ಮ ಶಕ್ತಿ ಎಂದಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಪಶ್ಚಿಮ ಬಂಗಾಳ ಸರ್ಕಾರವು 'ಐಕ್ಯಶ್ರೀ' ಯೋಜನೆಯನ್ನು ನಡೆಸುತ್ತಿದೆ. 2011ರಿಂದ ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ಬಡ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 2.03 ಕೋಟಿ ವಿದ್ಯಾರ್ಥಿಗಳಿಗೆ ಈ ಯೋಜನೆ ಸಹಕಾರಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.