ನಾಗ್ಪುರ: ಎಲ್‌ಎನ್‌ಜಿ(ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್)ಯನ್ನು ಪೆಟ್ರೋಲ್ ಮತ್ತು ಡೀಸೆಲ್‌ಗೆ ಆಯ್ಕೆಯಾಗಿ ಬಳಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದ ಮೊದಲ ಎಲ್‌ಎನ್‌ಜಿ ಸ್ಥಾವರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸುಮಾರು 8 ಕೋಟಿ ಕೊರತೆಯ ವೆಚ್ಚವನ್ನು ನಾವು ಮಾಡಬೇಕಿದೆ. ಇದು ಆರ್ಥಿಕತೆಯ ಮೇಲೆ ದೊಡ್ಡ ಹೊರೆಯಾಗಿದೆ. ಜೊತೆಗೆ ಮಾಲಿನ್ಯವನ್ನೂ ಹೆಚ್ಚಿಸುತ್ತದೆ. ಆದರೆ, ಎಲ್ಎನ್‌ಜಿ ಬಳಕೆ ಮಾಡುವ ಮೂಲಕ ನಾವು ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಒಂದು ಯೋಜನೆಯನ್ನು ತರಲು ನಾವು ಯೋಜಿಸುತ್ತಿದ್ದೇವೆ ಎಂದು ವಿವರಿಸಿದರು.
ಪೆಟ್ರೋಲ್ ಆಮದು ಮಾಡಿಕೊಳ್ಳುವ ಬದಲು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಅಗ್ಗದ ದರದಲ್ಲಿ ಜೈವಿಕ ಅನಿಲವನ್ನು ಬಳಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇದೇ ವೇಳೆ ಗಡ್ಕರಿ ಹೇಳಿದರು.