ನವದೆಹಲಿ:ಎರಡನೇ ಹಂತದ ಕೋವಿಡ್ ಅಲೆ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದ್ದು, ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂಬ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ್ ಅಗರವಾಲ್, ದೇಶದಲ್ಲಿ ಕಂಡು ಬರುತ್ತಿರುವ ಶೇ. 80ರಷ್ಟು ಕೊರೊನಾ ಕೇಸ್ 90 ಜಿಲ್ಲೆಗಳಿಂದ ಎಂದಿದ್ದಾರೆ. ಜತೆಗೆ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ದೇಶದ ಒಟ್ಟು ಕೋವಿಡ್ ಸಂಖ್ಯೆಯ ಶೇ. 50ರಷ್ಟು ಪ್ರಕರಣಗಳಿವೆ. ಕೇರಳದ 14 ಜಿಲ್ಲೆ, ಮಹಾರಾಷ್ಟ್ರದ 15 ಹಾಗೂ ಕರ್ನಾಟಕದ 10 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿವೆ ಎಂದಿದ್ದಾರೆ.