ಕರ್ನಾಟಕ

karnataka

By ETV Bharat Karnataka Team

Published : Oct 31, 2023, 10:16 AM IST

ETV Bharat / bharat

‘ಅವರ ಸೇವೆಗೆ ನಾವು ಸದಾ ಋಣಿ’: ರಾಷ್ಟ್ರೀಯ ಏಕತಾ ದಿನದಂದು ಸರ್ದಾರ್ ಪಟೇಲ್​ ಸ್ಮರಿಸಿದ ಪ್ರಧಾನಿ ಮೋದಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ದೂರದೃಷ್ಟಿಯ ರಾಜನೀತಿ, ದೃಢವಾದ ಬದ್ಧತೆ ಮತ್ತು "ನಮ್ಮ ರಾಷ್ಟ್ರದ ಭವಿಷ್ಯ" ವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಗೆ ಹೆಸರುವಾಸಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

We are forever indebted to his service  PM Modi remembers Sardar Patel  National Unity Day  ಅವರ ಸೇವೆಗೆ ನಾವು ಸದಾ ಋಣಿ  ರಾಷ್ಟ್ರೀಯ ಏಕತಾ ದಿನ  ಸರ್ದಾರ್ ಪಟೇಲ್​ರನ್ನು ಸ್ಮರಿಸಿದ ಪ್ರಧಾನಿ ಮೋದಿ  ಸರ್ದಾರ್ ವಲ್ಲಭಭಾಯಿ ಪಟೇಲ್  ನಮ್ಮ ರಾಷ್ಟ್ರದ ಭವಿಷ್ಯ  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ  ಸರ್ದಾರ್ ಪಟೇಲ್ ಅವರ 148ನೇ ಜಯಂತಿ  ಉಕ್ಕಿನ ಮನುಷ್ಯನನ್ನು ಸ್ಮರಿಸಿದ ಪ್ರಧಾನಿ
ಸರ್ದಾರ್ ಪಟೇಲ್​ರನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ:ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಸೇವೆಗೆ ದೇಶವು ಸದಾ ಋಣಿಯಾಗಿದೆ ಎಂದು ಹೇಳಿದರು.

ಸರ್ದಾರ್ ಪಟೇಲ್ ಅವರ 148ನೇ ಜಯಂತಿಯಂದು. ಅವರ ಜನ್ಮದಿನದಂದು ಉಕ್ಕಿನ ಮನುಷ್ಯನನ್ನು ಸ್ಮರಿಸಿದ ಪ್ರಧಾನಿ, ಅವರ ಅದಮ್ಯ ಮನೋಭಾವ, ದೂರದೃಷ್ಟಿಯ ರಾಜನೀತಿ ಮತ್ತು ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. 1947 ರಲ್ಲಿ ದೇಶವು ಸ್ವತಂತ್ರವಾದ ನಂತರ ನೂರಾರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟ ಕೀರ್ತಿ ಸರ್ದಾರ್ ಪಟೇಲ್ ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆ ನಮಗೆ ಮಾರ್ಗದರ್ಶನ ನೀಡುತ್ತಲೇ ಇದೆ. ಅವರ ಸೇವೆಗೆ ನಾವು ಎಂದೆಂದಿಗೂ ಋಣಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿಯವರು ಗುಜರಾತ್‌ನ ಕೆವಾಡಿಯಾದಲ್ಲಿರುವ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದರು. ಪ್ರಧಾನಿ ಅವರು ರಾಷ್ಟ್ರೀಯ ಏಕತಾ ದಿವಸ್ ಪರೇಡ್‌ಗೆ ಸಾಕ್ಷಿಯಾಗಲಿದ್ದಾರೆ. ಇದು ಬಿಎಸ್‌ಎಫ್ ಮತ್ತು ವಿವಿಧ ರಾಜ್ಯ ಪೊಲೀಸರಿಂದ ಮೆರವಣಿಗೆಯ ತುಕಡಿಗಳನ್ನು ಒಳಗೊಂಡಿರುತ್ತದೆ.

2014 ರಿಂದ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ ಅಥವಾ ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶದಾದ್ಯಂತ 'ರನ್ ಫಾರ್ ಯೂನಿಟಿ' ಅನ್ನು ಆಯೋಜಿಸಲಾಗಿದೆ. ಇದರಲ್ಲಿ ಎಲ್ಲಾ ವರ್ಗಗಳ ಜನರು ಭಾಗವಹಿಸುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ರಾಜಧಾನಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ರನ್ ಫಾರ್ ಯೂನಿಟಿ'ಗೆ ಚಾಲನೆ ನೀಡಿದರು.

ರಾಷ್ಟ್ರೀಯ ಏಕತಾ ದಿನವನ್ನು 2014 ರಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿತು. ಭಾರತ ಗಣರಾಜ್ಯವನ್ನು ನಿರ್ಮಿಸಲು ಸ್ವತಂತ್ರ ಪೂರ್ವ ದೇಶದ ಎಲ್ಲಾ 562 ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿದ ಕೀರ್ತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರು ಡಿಸೆಂಬರ್ 15, 1950 ರಂದು ನಿಧನರಾದರು.

ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿ ಅವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಅತಿದೊಡ್ಡ ಪ್ರತಿಮೆಯನ್ನು ನಿರ್ಮಿಸುವ ಕನಸು ಕಂಡಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು 2013 ರಲ್ಲಿ ಅದರ ಅಡಿಗಲ್ಲು ಹಾಕಿದ್ದರು. ಪ್ರಧಾನಿಯಾದ ನಂತರ 2018 ರಲ್ಲಿ ಅವರು ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಹೆಸರಾದ ದೇಶಕ್ಕೆ ಏಕತಾ ಪ್ರತಿಮೆಯನ್ನು ಅರ್ಪಿಸಿದರು.

ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಸುಮಾರು 2989 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆ ವೀಕ್ಷಿಸಲು ಇದುವರೆಗೆ 1.53 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪ್ರತಿಮೆ ಉದ್ಘಾಟಿಸಿದ ನಂತರ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆತವು. ಅಷ್ಟೇ ಅಲ್ಲ ಗುಜರಾತ್ ಮತ್ತು ದೇಶದ ಪ್ರವಾಸಿಗರು ಸಹ ಹೊಸ ಪ್ರವಾಸಿ ತಾಣವನ್ನು ಪಡೆದರು.

ಓದಿ:ಗುಜರಾತ್‌ನ ಬನಸ್ಕಾಂತದಲ್ಲಿ ಪಿಎಂ ಮೋದಿ ರೋಡ್‌ ಶೋ: ಅಂಬಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ

ABOUT THE AUTHOR

...view details