ಕರ್ನಾಟಕ

karnataka

ಬಂಗಾಳದಲ್ಲಿಂದು 7ನೇ ಹಂತದ ವಿಧಾನ ಕದನ: ಕೋವಿಡ್​ ನಿಯಮ ಪಾಲಿಸಲು ಪ್ರಧಾನಿ ಮನವಿ

By

Published : Apr 26, 2021, 9:27 AM IST

ಪಶ್ಚಿಮ ಬಂಗಾಳದಲ್ಲಿಂದು ಏಳನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಜನರು ತಮ್ಮ ಹಕ್ಕು ಚಲಾಯಿಸುವಂತೆ ಹಾಗೂ ಮತದಾನದ ವೇಳೆ ಎಲ್ಲಾ ಕೋವಿಡ್​ ನಿಯಮಗಳನ್ನು ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

7th Phase of  West Bengal Assembly elections
ಬಂಗಾಳದಲ್ಲಿಂದು 7ನೇ ಹಂತದ ವಿಧಾನ ಕದನ

ಕೋಲ್ಕತ್ತಾ: ಪ.ಬಂಗಾಳದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಕೋವಿಡ್‌ ಮಧ್ಯೆ ಮತದಾನ

ಮುರ್ಷಿದಾಬಾದ್, ಪಶ್ಚಿಮ ಬುರ್ದ್ವಾನ್‌, ದಕ್ಷಿಣ ದಿನಾಜ್‌, ಕೋಲ್ಕತ್ತಾ ಹಾಗೂ ಮಾಲ್ಡಾ ಈ ಐದು ಜಿಲ್ಲೆಗಳಲ್ಲಿನ ಒಟ್ಟು 34 ಕ್ಷೇತ್ರಗಳಿಗೆ ಇಂದು ವೋಟಿಂಗ್​ ನಡೆಯುತ್ತಿದೆ. 268 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 37 ಅಭ್ಯರ್ಥಿಗಳು ಮಹಿಳೆಯರಾಗಿದ್ದಾರೆ. ಒಟ್ಟು 81,96,242 ಜನರು ಮತ ಚಲಾಯಿಸಲಿದ್ದಾರೆ.

ಜನರು ತಮ್ಮ ಹಕ್ಕು ಚಲಾಯಿಸುವಂತೆ ಹಾಗೂ ಮತದಾನದ ವೇಳೆ ಎಲ್ಲಾ ಕೋವಿಡ್​ 19 ನಿಯಮಗಳನ್ನು ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಂತಿಮ ಹಂತದ ಮತದಾನ ಏಪ್ರಿಲ್ 29 ರಂದು ಜರುಗಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಕೊರೊನಾ ಉಲ್ಬಣ ಹಿನ್ನೆಲೆ ಕೊನೆಯ ಎರಡು ಹಂತಗಳ ಮತದಾನಕ್ಕಾಗಿ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು.

ABOUT THE AUTHOR

...view details