ಕೊಲ್ಕತ್ತಾ:ಸರ್ಕಾರಿ ಕೆಲಸ ಕೊಡಿಸುವುದಾಗಿ ನಕಲಿ ಕ್ಯಾಂಪೇನ್ ಮಾಡುತ್ತಿದ್ದ ಬಿಜೆಪಿ ನಾಯಕ ಸುವೆಂದು ಅಧಿಕಾರಿಯ ಆಪ್ತ ರಖಾಲ್ ಬೇರಾ ಎಂಬಾತನನ್ನು ನಗರದ ಮನಿಕ್ತಾಲ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಪಶ್ಚಿಮ ಬಂಗಾಳ ನೀರಾವರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಯಾಸ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಹಲವು ನದಿಯ ಒಡ್ಡುಗಳು ಹಾನಿಗೊಳಗಾಗಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಮಮತಾ ಬ್ಯಾನರ್ಜಿ ಸೂಚಿಸಿದ್ದರು. ತನಿಖೆ ಪ್ರಾರಂಭವಾದಾಗಿನಿಂದ ನೀರಾವರಿ ಇಲಾಖೆಯ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಕಳೆದ ಶುಕ್ರವಾಗಿ ಕೆಲಸ ಕೊಡಿಸುವುದಾಗಿ ಹಣ ಲಪಟಾಯಿಸುತ್ತಿದ್ದ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಆಪ್ತ ರಖಾಲ್ ಬೇರಾನನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸುಮೇಂದು ಅಧಿಕಾರಿ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ರಖಾಲ್ ಬೇರಾ ನನ್ನ ಆಪ್ತ ಎಂಬುವುದಕ್ಕೆ ಏನಾದರು ಪುರಾವೆ ಇದೆಯಾ ಎಂದು ಸುವೇಂದು ಪ್ರಶ್ನಿಸಿದ್ದಾರೆ.