ಮುಂಬೈ:ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನ್ನ ತನಿಖೆ ತೀವ್ರಗೊಳಿಸುತ್ತಿದ್ದಂತೆ ಆಂಟಿಲಿಯಾ ಬಾಂಬ್ ಬೆದರಿಕೆ ಮತ್ತು ಮನ್ಸುಖ್ ಹಿರೆನ್ ಸಾವಿನ ಪ್ರಕರಣಗಳಲ್ಲಿ ಹೊಸ ಬೆಳವಣಿಗೆಗಳು ಹೊರಬರುತ್ತಿವೆ.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ನಕಲಿ ಎನ್‌ಕೌಂಟರ್‌ಗೆ ಯೋಜನೆ ಹಾಕಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ವಾಜೆ 'ದೊಡ್ಡ'ದಾಗಿ ಏನಾದರೂ ಮಾಡಲು ಪ್ರಯತ್ನಿಸುತ್ತಿದ್ದರೇ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರನ್ನು ಎನ್‌ಕೌಂಟರ್‌ಗಳಲ್ಲಿ ಕೊಲ್ಲುವುದಕ್ಕೆ ವಾಜೆ ದೊಡ್ಡ ಕೃತ್ಯಗೆ ಹೊಂಚು ಹಾಕಿದ್ದರು ಎಂಬುದಾಗಿ ತಿಳಿದು ಬಂದಿದೆ ಎಂದು ಹೇಳಿದೆ.
ಎನ್ಕೌಂಟರ್ನಲ್ಲಿ ವಾಜೆ ಕೊಲ್ಲಲು ಹೊರಟಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನ ಪಾಸ್ಪೋರ್ಟ್ ವಾಜೆ ಅವರ ಮನೆಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಹೆಸರು ಬಹಿರಂಗವಾದ ನಂತರ ಅವರ ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಅವರ ಗುರುತು ಗೌಪ್ಯವಾಗಿಡಲಾಗಿದೆ.
2020ರ ನವೆಂಬರ್‌ನಲ್ಲಿ ಔರಂಗಾಬಾದ್‌ನಿಂದ ಕಳವು ಮಾಡಿದ ಇಕೊ ಕಾರಿನಲ್ಲಿ ಎನ್‌ಕೌಂಟರ್‌ಗಳನ್ನು ನಡೆಸುವುದು ವಾಜೆ ಅವರ ಯೋಚನೆ ಆಗಿತ್ತು. ಆಂಟಿಲಿಯಾ ಬಾಂಬ್ ಹೆದರಿಕೆ ಪ್ರಕರಣ ಭೇದಿಸುವ ಮೂಲಕ ಚಪ್ಪಾಳೆ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದರು. ಎನ್ಐಎ ಮಾರ್ಚ್ 28ರಂದು ಮಿಥಿ ನದಿಯಿಂದ ಇತರ ವಸ್ತುಗಳ ಜತೆಗೆ ಕಾರಿನ ನಂಬರ್ ಪ್ಲೇಟ್ ಮತ್ತು ಕಂಪ್ಯೂಟರ್ ಸಿಪಿಯು ಪಡೆದುಕೊಂಡಿದ್ದಾರೆ.